Thursday, January 1, 2009

ಬಾಳುವಂತ ಹೂವೆ ಆಕಸ್ಮಿಕ baaluvanta huuve kannada song lyrics from Aakasmika

ಬಾಳುವಂತ ಹೂವೆ ಆಕಸ್ಮಿಕ baaluvanta huuve kannada song lyrics from Aakasmika

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ
ಗಾಯಕರು : ಡಾ. ರಾಜ್

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆಯೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ
ಮದ್ಯ ಮನಗಳಿನ್ದ ಚಿಂತೆ ಬೇಳೆವುದಂತೆ

ಅಂಖ್ಯೆ ಇರದ ಮನಸನು ದಂಡಿಸುವುದು ನ್ಯಾಯ
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ

ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ

Read rest of entry

ಹುಟ್ಟಿದರೆ ಕನ್ನಡನಾಡಲ್ಲಿ ಆಕಸ್ಮಿಕ huttidare kannada naadalli huttabeku kannada song lyrics from Aakasmika

ಹುಟ್ಟಿದರೆ ಕನ್ನಡನಾಡಲ್ಲಿ ಆಕಸ್ಮಿಕ huttidare kannada naadalli huttabeku kannada song lyrics from Aakasmika

ಸಾಹಿತ್ಯ ಮತ್ತು ಸಂಗೀತ - ಹಂಸಲೇಖ
ಗಾಯನ - ಡಾ. ರಾಜ್‍ಕುಮಾರ್

ಹೇ ಹೇ ಬಾಜೂ.. ಲಾಲ ತಗಡಗ ಲಾಲ ತಗಗಡ ಹೇ ಹೇ ...

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ,
ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ
ಬದುಕಿದು ಜಟಕ ಬಂಡಿ
ವಿಧಿ ಅಲೆದಾಡಿಸುವ ಬಂಡಿ...

||ಹುಟ್ಟಿದರೇ ಕನ್ನಡ ನಾಡಲ್ಲಿ....||

ಕಾಶಿಲಿ ಸ್ನಾನ ಮಾಡು
ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಲೋರವ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ ಆಡೋಕ್ಕೆ ಒಂದೇ ಭಾಷೆ ....ಕನ್ನಡಾ..ಕನ್ನಡಾ..ಕಸ್ತೂರಿ ಕನ್ನಡಾ

||ಹುಟ್ಟಿದರೇ ಕನ್ನಡ ನಾಡಲ್ಲಿ....||

ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು ,ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ ....ಗೋಕಾಕಿನ ಕನ್ನಡಾ..

||ಹುಟ್ಟಿದರೇ ಕನ್ನಡ ನಾಡಲ್ಲಿ....||

ಬಾಳಿನ ಬೆನ್ನು ಹತ್ತಿ
ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ
ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸಂ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ....ಇಲ್ಲಿಯೇ.... ಈ ಮಣ್ಣಿನಲ್ಲಿಯೇ
ಎಂದಿಗೂ ನಾನಿಲ್ಲಿಯೇ.....

||ಹುಟ್ಟಿದರೇ ಕನ್ನಡ ನಾಡಲ್ಲಿ.... ||

Read rest of entry

ಸಿಹಿ ಗಾಳಿ ಸಿಹಿ ಗಾಳಿ ಆ ದಿನಗಳು sihi gaali sihi gaali kannada song lyrics from Aa dinagalu

ಸಿಹಿ ಗಾಳಿ ಸಿಹಿ ಗಾಳಿ ಆ ದಿನಗಳು sihi gaali sihi gaali kannada song lyrics from Aa dinagalu

ಸಾಹಿತ್ಯ : ಕೆ.ಕಲ್ಯಾಣ್
ಸಂಗೀತ : ಇಳಯರಾಜ
ಗಾಯನ : ಇಳಯರಾಜ ಮತ್ತು ನಂದಿತ


[ಗಂಡು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ನ ನ ನ ನ ನ ನಾ ನ..
ನ ನ ನಾ ನ.....

ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ನೋಟವೊಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ
ಬರೆಯೋಣ ಬಾ

[ಹೆಣ್ಣು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

[ಗಂಡು] - ಬಾನಾಡಿಗೊಂದು ಸವಿ ಮಾತು ಕಲಿಸುವ

[ಹೆಣ್ಣು] - ಆ ವೀಣೆಗೊಂದು ಎದೆ ರಾಗ ತಿಳಿಸುವ

[ಗಂಡು] - ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ

[ಹೆಣ್ಣು] - ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೋಡುವ

[ಗಂಡು] - ನಾ ನಾ ನ... ಬಾಳಿನ ಅರ್ಥವೆ ಪ್ರೇಮವೆಂಬುದಲ್ಲವೆ
ಪ್ರೇಮವೆ ಇಲ್ಲದೆ ನಾನು ನೀನು ಯಾಕೆ

[ಗಂಡು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
[ಹೆಣ್ಣು] - ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

[ಗಂಡು] - ನೋಟವೊಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ
ಬರೆಯೋಣ ಬಾ

[ಹೆಣ್ಣು] - ಸಿಹಿ ಗಾಳಿ ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
[ಗಂಡು] - ನ ನ ನ ನ ನ ನಾ ನ..
ನ ನ ನಾ ನ.....

Read rest of entry

ಆ ದಿನಗಳು ಪ್ರತಿ ಕ್ಷಣ ಆ ದಿನಗಳು AA dinagalu priti kshana kannada song lyrics from Aa dinagalu

ಆ ದಿನಗಳು ಪ್ರತಿ ಕ್ಷಣ ಆ ದಿನಗಳು AA dinagalu priti kshana kannada song lyrics from Aa dinagalu

ಸಾಹಿತ್ಯ : ಸುಮನ ಕಿತ್ತೂರ್
ಸಂಗೀತ : ಇಳಯರಾಜ
ಗಾಯನ : ವಿಜಯ್ ಯೆಸುದಾಸ್ ಮತ್ತು ನಂದಿತ

========================
ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ ಇದೆ ನನ್ನ ಬಿಡದೆ

ಗಾಳಿಯಲ್ಲಿ ಪ್ರೇಮ ಗೀತೆ ಬರೆದ ಸಂದೇಶವು
ಬಳಸಿಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯಾ ಹೇಕೆ ಬಿಟ್ಟು ಹೋದೆ

ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ ಇದೆ ನನ್ನ ಬಿಡದೆ

ದಿನ ದಿನ ಮುಖವನು ನೋಡಿ ಹೊಗಳುವ ಮಾತೆಲ್ಲಿ
ಮುನಿಯುತ ಜಗಳವ ಆಡಿ ನಗಿಸಿದ ನಗುವೆಲ್ಲಿ

ನನ್ನ ಕಲ್ಪನೆ ಎಲ್ಲೊ ನಿನ್ನ ಹುಡುಕಿ ಹೊಯ್ತು
ಆ ಶಿಲ್ಪದಲಿ ಕಂಡು ಮನಸು ಶಾಂತವಾಯ್ತು
ನೀನೆಲ್ಲೊ ನಾನೆಲ್ಲೊ ಇನ್ನು ತಾಳೆ ವಿರಹ ನೋವಾ

ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ ಇದೆ ನನ್ನ ಬಿಡದೆ

Read rest of entry

ನಿನ್ನ ಕಂಡ ಕ್ಷಣದಿಂದ ಅರಸು ninna kanda kshanadinda kannada song lyrics from arasu

ನಿನ್ನ ಕಂಡ ಕ್ಷಣದಿಂದ ಅರಸು ninna kanda kshanadinda kannada song lyrics from arasu

ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮ್ ನಾರಾಯಣ್
ಗಾಯನ : ಕುನಾಲ್ ಗುಂಜಾವಾಲ

ಟುರು ಟೂರು ಟೂರೂರು
ಟೂರೂರು ಟೂರೂರು ಟು
ಟುರು ಟೂರು ಟೂರೂರು
ಟೂರೂರು ಟೂರೂರು ಟು

ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಆ ನಿಮಿಷದಿಂದ ನನಗೇನಾಯ್ತಂತ
ಗೋತ್ತೇ ಇಲ್ಲ
ಎಂದು ಕಾಣದ ಹರುಷ
ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ
ನೀನೇ ಎಲ್ಲಾ ನೀನೇ ನನಗೆಲ್ಲಾ
ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ
ಮೈ ಓನ್ಲೀ ಲವ್

ಟುರು ಟೂರು ಟೂರೂರು
ಟೂರೂರು ಟೂರೂರು ಟು
ಟುರು ಟೂರು ಟೂರೂರು
ಟೂರೂರು ಟೂರೂರು ಟು

ಹಾ.ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ
ನೀನೇ ಎಲ್ಲಾ

ಕಣ್ಣಲ್ಲಿ ಸೇರಿಕೊಂಡೆ ಮನಸಲ್ಲಿ ತುಂಬಿಕೊಂಡೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಂಡೆ ಕಂಡೆ
ಆ ಬೆಟ್ಟದ ಹೂವು ಬೇಕ ಆಕಾಶದ ತಾರೆ ಬೇಕ
ಬೇರೇನು ಬೇಕು ಕೇಳು ನೀ ಎಲ್ಲಾ ಕೊಡುವೆ ಕೊಡುವೆ
ವಾ.ಹುವ ಹೌ ಐ ವಂಡರ್ ವಾಟ್ ಯು ಆರ್
ಮೈ ಏಂಜೆಲ್ ಮೈ ಓನ್ಲೀ ಲವ್

ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ
ನೀನೇ ಎಲ್ಲಾ

ಯಾರೇನೇ ಅಂದರೂನು ಏನೆಲ್ಲಾ ಆದರೂನು
ಈ ನನ್ನಾ ಪ್ರೀತಿಯಾ ಬಿಡಲಾರೆ ಎಂದು ಎಂದು
ನಿಂತಲ್ಲಿ ನಿಲ್ಲಲಾರೆ ನಾ ನಿದ್ದೆ ಮಾಡಲಾರೆ
ಕಣ್ಣಳೊಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ
ವಾ.ಹುವ ಅದು ಎಂತ ಚಂದ ನಿನ ನೋಟ
ನಾ ಸೋತೆ ಮೈ ಓನ್ಲಿ ಲವ್

ಟುರು ಟೂರು ಟೂರೂರು
ಟೂರೂರು ಟೂರೂರು ಟು
ಟುರು ಟೂರು ಟೂರೂರು
ಟೂರೂರು ಟೂರೂರು ಟು

ನಿನ್ನ ಕಂಡ ಕ್ಷಣದಿಂದ
ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ
ನೀನೇ ಎಲ್ಲಾ ನೀನೇ ನನಗೆಲ್ಲಾ
ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ
ಮೈ ಓನ್ಲೀ ಲವ್

Read rest of entry

ಕಣ್ಣು ಕಣ್ಣುಗಳು ಸೇರಿ ಅರಸು kannu kannugalu seri kannada song lyrics from arasu

ಕಣ್ಣು ಕಣ್ಣುಗಳು ಸೇರಿ ಅರಸು kannu kannugalu seri kannada song lyrics from arasu

ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ಕೆ.ಕಲ್ಯಾಣ್
ಗಾಯನ : ಕಾರ್ತಿಕ್, ಹರಿಣಿ ಸುಧಾಕರ್

ಹೆಣ್ಣು : ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ

ಗಂಡು : ಮುತ್ತಿನಂತ ನಿನ್ನ ಮಾತು
ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ

ಹೆಣ್ಣು : ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ

ಗಂಡು : ಆ ನನ್ನಾ ಕನಸು ಇಂದು ನಿಜವಾಯ್ತು

ಹೆಣ್ಣು : ಅಂದು ನೀನು ಬಳಿ ಬಂದೆ
ಮನದ ಪ್ರೀತಿ ತಿಳಿ ಅಂದೆ
ನಾನು ನಿನ್ನ ಮನಸನು ಅರಿಯದೆ ಹೋದೆ.ಆ.ಅ

ಗಂಡು : ಇಂದು ನೀನು ಜೊತೆಯಾದೆ
ಎದೆಯ ತುಂಬಿ ಉಸಿರಾದೆ
ನಿನ್ನ ಮಾತು ಕೇಳುತ ಬೆರೆಯುತ ಹೋದೆ.ಹಾ

ಹೆಣ್ಣು : ಅರಳಿದ ತನುವು ಕುಣಿದಿದೆ ಮನವು
ಸೋತು ಹೋದೆನು ಜಾಣ

ಗಂಡು : ಸವೆಯದ ನೆನಪು ಸವಿದರೆ ಸಾಕು
ಹಾರಿ ಹೋಗಲಿ ಪ್ರಾಣ

ಹೆಣ್ಣು : ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ
ನಡೆಸೋಣ ಬಾಳ ಪಯಣ

ಗಂಡು : ಹೇಯ್.ಎಂದೆಂದು ನಿನಗಾಗಿ
ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ

ಹೆಣ್ಣು : ಆಹಾ..ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ

ಗಂಡು : ಹಾ.ಮುತ್ತಿನಂತ ನಿನ್ನ ಮಾತು
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು

ಹೆಣ್ಣು : ಯಾರು ಇರದ ಮನಸಿನಲಿ
ಬಂದೆ ನೀನು ಕ್ಷಣದಲ್ಲಿ
ನಿನ್ನ ಒಲವು ಎಂದೂ ಹೀಗೆ ಇರಲಿ

ಗಂಡು : ನೀನು ಇರದ ಬಾಳಿನಲಿ
ಹೇಗೆ ತಾನೆ ನಾನಿರಲಿ
ನಿನ್ನ ಸನಿಹ ಎಂದೂ ಹೀಗೆ ಇರಲಿ

ಹೆಣ್ಣು : ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯ
ಸೋತು ಹೋಯಿತು ಹೃದಯ

ಗಂಡು : ಕನಸಿನ ವಿಷಯ ಹೇಳುವ ಸಮಯ
ಹಾಡು ಅಂತು ಈ ಹರೆಯ

ಹೆಣ್ಣು : ನಿನ್ನಿಂದ ನಾನು ನಿನಗಾಗಿ ನಾನು
ನಿನ್ನವಳೆ ನಾನು ಗೆಳೆಯ

ಗಂಡು : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ..ಪ್ರೀತಿಗೆ ಹೆಸರಾಗಿ

ಹೆಣ್ಣು : ಕಣ್ಣು ಕಣ್ಣುಗಳು ಸೇರಿ
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ

ಗಂಡು : ಹಾ..ಮುತ್ತಿನಂತ ನಿನ್ನ ಮಾತು
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು

ಇಬ್ಬರೂ : ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹಾ.ಪ್ರೀತಿಗೆ ಹೆಸರಾಗಿ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೇ.ಪ್ರೀತಿಗೆ ಹೆಸರಾಗಿ.ಹೋಯ್.

Read rest of entry

ಪ್ರೀತಿ ಪ್ರೀತಿ ನಿನ್ನಾ ಅರಸು prethi prethi ninna kannada song lyrics from arasu

ಪ್ರೀತಿ ಪ್ರೀತಿ ನಿನ್ನಾ ಅರಸು prethi prethi ninna kannada song lyrics from arasu

ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ಹಂಸಲೇಖ
ಗಾಯನ : ಕಾರ್ತಿಕ್,ಚಿತ್ರಾ

ಗಂಡು :
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರದು ಒಂದೇ ಕನಸು
ಎಲ್ಲೀ ನಿನ ಮನಸು

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು

ಹೆಣ್ಣು :
ಆ..ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು

ಗಂಡು :
ಒಂದು ಬದುಕು ಇನ್ನೊಂದು ಬೆಳಕು
ಒಂದು ಮಿಡಿತ ಮತ್ತೊಂದು ಹೃದಯ
ಬಿಡಿಸಲಾಗುವುದೆ
ಮನವಾ ಮನವೇ ಮರೆಯುವುದೇ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು

ಹೆಣ್ಣು : ಆ.ಆ.ಆ ಅಅ..ಆ.ಆ.ಆ ಅಅ
ಆ.ಆ.ಆ ಅಅ..ಆಆ.
ಆ.ಆ.ಆ ಅಅ..ಆ.ಆ.ಆ ಅಅ
ಆ.ಆ.ಆ ಅಅ..ಆಆ.
ಆ.ಆ.ಆ ಆ.ಆ.ಆ.ಆ ಆಅ
ಆ.ಆ.ಆ ಆ.ಆ.ಆ.ಆ ಆಅ

ನೆನಪಿಗೊಂದು ಸಿಹಿಯ ನೋವು
ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು
ನನಗೆ ಬೇಡ ಬಿಡು

ಗಂಡು : ಒಂದು ಭಾವ ಮತ್ತೊಂದು ಕವಿತೆ
ಬೆಂಕಿ ಇರದೆ ಉರಿಯುವುದೇ ಹಣತೆ
ಬೇದ ಮಾಡುವುದೇ
ಕಣ್ಣ ಕಣ್ಣೇ ಕುಕ್ಕುವುದೆ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು

Read rest of entry