Saturday, February 14, 2009

ಬೊಂಬಾಟ್ (2008) ಮಾತಿನಲ್ಲಿ ಹೇಳಲಾರೆನು matinalli elalare kannada song lyrics from bombat

ಬೊಂಬಾಟ್ (2008) ಮಾತಿನಲ್ಲಿ ಹೇಳಲಾರೆನು matinalli elalare kannada song lyrics from bombat

ಸಾಹಿತ್ಯ:ಜಯಂತ್ ಕಾಯ್ಕಣಿ
ಸಂಗೀತ:ಮನೋಮೂರ್ತಿ
ಗಾಯಕರು: ಸೋನು ನಿಗಮ್

ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು.
ಅಂತ ರೂಪಸಿ ನನ್ನ ಪ್ರೇಯಸಿ
ಎಲ್ಲಿ ಇರುವಳೋ ನನ್ನ ಕಾಯಿಸಿ
ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ಕಣ್ಣಲಿದೆ ಆ ಕಣ್ಣಲಿದೆ ಹೊಂಬೆಳಕಿನ ನವ ನೀಲಾಂಜನ
ಇನ್ನೇಲ್ಲಿದೆ ಆಹ ಇನ್ನೇಲ್ಲಿದೆ ಹೂ ಮನಸಿನ ಆ ಮಧು ಗುಂಜನ
ಬೇರೆಯೇನು ಕಾಣಲಾರೆ ಯಾರ ನಾನು ದೂರಲಾರೆ
ಸಾಕು ಇನ್ನು ದೂರವನ್ನು ತಾಳಲಾರೆನು
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ
ಒಮ್ಮೆ ಅವಳಿಗೆ ನನ್ನ ತೋರಿಸಿ

ನಗೆಯಲ್ಲಿದೆ ಆ ಬಗೆಯಲ್ಲಿದೆ ಬಗೆಹರಿಯದ ಆ ಅವಲೋಕನ
ನಡೆಯಲ್ಲಿದೆ ಆ ನುಡಿಯಲ್ಲಿದೆ ತಲೆ ಕೆಡಿಸುವ ಆ ಆಮಂತ್ರಣ
ಕನಸಿಗಿಂತ ಚೆಂದವಾಗಿ ಅಳಿಸದಂತ ಗಂಧವಾಗಿ
ಮೊದಲ ಬಾರಿ ಕಂಡ ಕ್ಷೆಣವೇ ಬಂಧಿಯಾದೆನು
ಹೋದೆ ನಾನು ಕೆಳೆದು ದಯಮಾಡಿ ಪತ್ತೆ ಮಾಡಬೇಡಿ
ಅಂತ ರೂಪಸಿ ನನ್ನ ಪ್ರೇಯಸಿ ಒಮ್ಮೆ ಅವಳಿಗೆ ನನ್ನ ತೋರಿಸಿ

||ಮಾತಿನಲ್ಲಿ ಹೇಳಲಾರೆನು||

Read rest of entry

ವಂಶಿ (2008) - ಜೊತೆ ಜೊತೆಯಲಿ jote jote yali kannada song lyrics from vamshi

ವಂಶಿ (2008) - ಜೊತೆ ಜೊತೆಯಲಿ jote jote yali kannada song lyrics from vamshi

ಚಿತ್ರ: ವಂಶಿ
ಸಂಗೀತ ನಿರ್ದೇಶಕರು: ಆರ್. ಪಿ. ಪಟ್ನಾಯಕ್
ಹಾಡಿದವರು: ಪುನೀತ್ ರಾಜಕುಮಾರ್, ಶ್ರೇಯ ಘೋಶಾಲ್
ಸಾಹಿತ್ಯ: ರಾಮ್ ನಾರಾಯಣ್

ಹೆಂ: ಹೇ..ಯ ತ..ತ..ತ..ತು ರು..ರು ನ...!
ಗಂ:
ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ
ಹೆಂ:
ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ

ಗಂ:
ಹೀಗೇ ಸಾಗಲಿ ನಮ್ಮಿ ಈ ಪಯಣ....!
ಹೆಂ:
ಹಾಡಿ ನಲಿದು....!
ಇಬ್ಬರು:
ಸ..ಸ..ರಿ..ರಿ..ಗ..ಗ..ಮ..ಮ..!

ಹಿನ್ನಲೆ:
ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..!

ಗಂ:
ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ....!

ಹಿನ್ನಲೆ:
ನಾನ ನಾನ ನ..ರಿ..ನ...ನ..ಲ ಲ..ಉ..ಉ...ಉ..!

ಗಂ:
ದಿನ ದಿನ ದಿನ ಎನಾದರು ಚಿನ್ನ
ಕರಗದು ಈ ಪ್ರೇಮ..ಅ...!
ಹೆಂ:
ಕ್ಷಣ ಕ್ಷಣ ಕ್ಷಣ ನೀನಿಲ್ಲದ ಕ್ಷಣ
ಸಹಿಸದು ಈ ಪ್ರೇಮ...!

ಗಂ:
ಆ ಬಾನಿಗಾದರೆ ಮಿನುಗು ತಾರೆ ಈ ಬಾಳಿಗಾಸರೆ ನೀನೇ ಬಾರೆ.
ಹೆಂ:
ನಾವಾಡೊ ಒಲವಿನ ಮಾತು ಕೇಳಿ ಹಾರಡೋ ಗಿಳಿಗಳ ರಾಗ
ಇಬ್ಬರು:
ಸ..ಸ..ರಿ..ರಿ..ಗ..ಗ..ಮ..ಮ..!

ಹಿನ್ನಲೆ:
ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..!

ಗಂ:
ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ
ನಡೆದಿದೆ ದಿನ ಬಯಸಿ ಬಯಸಿ....!
ಹೆಂ:
ಸಿಹಿ ಸಿಹಿ ಮಾತು ಸಿಹಿ ಸಿಹಿ
ನುಡಿದಿದೆ ಮನ ಹರಸಿ ಹರಸಿ..!

ಹಿನ್ನಲೆ:
ನಾನ ನಾನ ನನ ನನ ನನ ನ..ನಾನ ನಾನ ನನ ನನ ನನ ನ...!

ಹೆಂ:
ಕಣ ಕಣ ಹೊಸ ಹುರುಪಿನ
ಚಿಲುಮೆಯು ಈ ಪ್ರೇಮ
ಗಂ:
ಮಿನ ಮಿನ ಹೊಸ ಬೆಳಕಿನ
ಹೊಳಪಿದು ಈ ಪ್ರೇಮ

ಹೆಂ:
ಏಳೇಳು ಜನುಮದ ಜೋಡಿಯಾಗಿ
ಹೀಗೇನೆ ಬಾಳುವೆ ಪ್ರೇಮಿಯಗಿ
ಗಂ:
ಈ ನಮ್ಮ ಪ್ರೀತಿಯ ನೋಡಿ ನೋಡಿ,
ಲೋಕವೇ ಹಾಡಿದೆ ಹಾಡು
ಇಬ್ಬರು:
ಸ..ಸ..ರಿ..ರಿ..ಗ..ಗ..ಮ..ಮ..!

ಹಿನ್ನಲೆ:
ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..!

ಗಂ:
ಜೊತೆ ಜೊತೆಯಲಿ
ಹೆಂ:
ಪ್ರೀತಿ ಜೊತೆಯಲಿ
ನಡೆದಿದೆ ದಿನ

ಗಂ:
ಬಯಸಿ ಬಯಸಿ
ಹೀಗೇ ಸಾಗಲಿ ನಮ್ಮಿ ಈ ಪಯನ
ಹೆಂ:
ಹೇ,..ಹಾಡಿ ನಲಿದು..!
ಇಬ್ಬರು:
ಸ..ಸ..ರಿ..ರಿ..ಗ..ಗ..ಮ..ಮ..!

ಹಿನ್ನಲೆ:
ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..ಉ ವಾವು ವಾವ ವಾ...ವವು..ವವು ಉ..ವವ..!

ಹೆಂ:
ಒ..ಒ...ಒ ....ಒ....ಒ.ಒ..ಒ..ಒ....!.ಸು..ಹ...ಒ...ಒ...ಒ..ಒ...!

Source: kannadalyrics.com
Read rest of entry

ಗೀತಾ - ೧೯೮೧ - ಕೇಳದೆ ನಿಮಗೀಗ ದೂರದಲ್ಲಿ ಯಾರೋ... kelade nimagiga Kannada song lyrics from geetha

ಗೀತಾ - ೧೯೮೧ - ಕೇಳದೆ ನಿಮಗೀಗ ದೂರದಲ್ಲಿ ಯಾರೋ... kelade nimagiga Kannada song lyrics from geetha

ಕೇಳದೆ ನಿಮಗೀಗ ದೂರದಲ್ಲಿ ಯಾರೋ...
ಹಾಡು ಹೇಳಿದಂತೆ ಒಂದು ಹೆಣ್ಣಿನ ..
ಓ ಓ ಓ ಒಂದು ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ...

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು . ...
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯೂ ಅಲ್ಲೊಂದು ..
ಈ ಊರ ಚೆಲುವೆ ಆ ಊರ ಚೆಲುವ
ನದಿ ಅಂಚಲಿ ಓಡಾಡುತ ಎದುರಾದರು ಒಮ್ಮೆ ...
ಕೇಳದೆ ನಿಮಗೀಗ ದೂರದಲ್ಲಿ ಯಾರೋ...

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಳವಿಂದಲಿ
ಒಂದಾದರು ಆಗ ........
ಕೇಳದೆ ನಿಮಗೀಗ ದೂರದಲ್ಲಿ ಯಾರೋ...

ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ
ಹಿಂದಿನಿಂದ ದ್ವೇಷ ಒಬ್ಬರನೊಬ್ಬರು ಕೊಲ್ಲುವಷ್ಟು ಆಕ್ರೋಶ
ಹೀಗಿದ್ದರು ಆ ಪ್ರೇಮಿಗಳು ಹೆದರಲಿಲ್ಲ
ದಿನ ರಾತ್ರಿ ಊರೆಲ್ಲ ಮಲಗಿದಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ
ಹುಲಿಯಂತೆ ಎಗರಾಡಿ ...
ಸೇತುವೆಯ ಬಳಿ ಬಂದಾಗ ಪ್ರೇಮಿಗಳ ಕಂಡಾಗ
ರೋಷದಲಿ ಕೂಗಾಡಿ .... ಹಲ್ಲನ್ನು ಮಸೆದ ಸೇತುವೆಯ ಕಡಿದ ....

ಆ ಜೋಡಿಯ ಕತೆ ಅಂದಿಗೆ ಕೊನೆಯಾಯಿತು ಹೀಗೆ

ಕೇಳದೆ ನಿಮಗೀಗ ದೂರದಲ್ಲಿ ಯಾರೋ...
ಲ ಲ ಲ ಲ ಲ ಲ ಲಾ ಲಾ ಲಾ ...ಓ ಓ ಓ ಓ ..ಲ ಲ ಲ ಲ ಲ ಲಾ ಲಾ ಲಾ

Source: kannadalyrics.com
Read rest of entry

ಮೊಗ್ಗಿನ ಮನಸು - ೨೦೦೮ - ಮಳೆ ಬರುವ ಹಾಗಿದೆ Moggina manasu male baruva haagide kannada song

ಮೊಗ್ಗಿನ ಮನಸು - ೨೦೦೮ - ಮಳೆ ಬರುವ ಹಾಗಿದೆ Moggina manasu male baruva haagide kannada song

ಮಳೆ ಬರುವ ಹಾಗಿದೆ...
ಮನವಿಗ ಹಾಡಿದೆ...
ಮಳೆ ಬರುವ ಹಾಗಿದೆ
ಮನವಿಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ...

ನಿನ್ನ.. ನಗುವಿನಲ್ಲಿ ನನ್ನ ನಸುಕು
ನಿನ್ನ .. ರೂಪ ಧರಿಸಿ ಬಂದು ನಡಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ ...

ಎದೆಯ ಬಾಗಿಲಲ್ಲಿ ನಿನ್ನ ಸುಳಿವು
ಸಣ್ಣ ಆಸೆಯಲ್ಲಿ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣಿಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ
ಮಳೆ ಬರುವ ಹಾಗಿದೆ
ಮನವಿಗ ಹಾಡಿದೆ
ಸವಿಗನಸು ಕಾಡಿದೆ
ನಸುನಗುವು ಮೂಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ
ಮಳೆ ಬರುವ ಹಾಗಿದೆ .....

Read rest of entry

ಮಾಯವಾಗಿದೆ ಮನಸು "ಹಾಗೆ ಸುಮ್ಮನೆ" Mayyavagide Manasu kannada Song Lyrics from Haage Summane

ಮಾಯವಾಗಿದೆ ಮನಸು "ಹಾಗೆ ಸುಮ್ಮನೆ" Mayyavagide Manasu kannada Song Lyrics from Haage Summane

ಮಾಯವಾಗಿದೆ ಮನಸ್ಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸ್ಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ.
ಈಗ ತಾನೆ ಬಂದಿದೆ ನೀಡದೆ ಸೂಚನೆ..

ತುಂಬಿ ಹೋಯಿತೀಗಲೇ ನನ್ನ ದಿನಚರಿ
ಎಲ್ಲ ಪುಟದಲ್ಲೂ ಅವಳದೇ ವೈಖರಿ
ಅವಳ ನಿಲುವು ಕನ್ನಡಿ ಪುನ್ನ್ಯ ಮಾಡಿದೆ.
ರೂಪತಾಳಿ ನಿಂತಿದೆ ನನ್ನದೇ ಕಲ್ಪನೆ....

ಮಾಯವಾಗಿದೆ ಮನಸ್ಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸ್ಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ,ಮಧುರವಾದ ಭಾವನೆ
ಈಗ ತಾನೆ ಬಂದಿದೆ ನೀಡದೆ ಸೂಚನೆ..

ನನ್ನ ಹಾಡಿನಲ್ಲಿದೆ ಅವಳ ಸಂಗತಿ.
ಜಾರಿದಾಗಲೇ ಜೀವದ ಮಾಹಿತಿ
ಎಲ್ಲೇ ಹೊರಟು ನಿಂತರು ಅಲ್ಲೇ ತಳಪುವೆ
ಜಾಸ್ತಿ ಯೇಳಳರೆನು ಖಾಸಗಿ ಯೋಚನೆ..

ಮಾಯವಾಗಿದೆ ಮನಸ್ಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸ್ಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೆ ಬಂದಿದೆ ನೀಡದೆ ಸೂಚನೆ..

Read rest of entry

ದೇವರ ಆಟ ಬಲ್ಲವರಾರೂ devara aata ballavaraaru kannada song lyrics

ದೇವರ ಆಟ ಬಲ್ಲವರಾರೂ Devara AAta ballavaraaru kannada song lyrics

ದೇವರ ಆಟ ಬಲ್ಲವರಾರೂ... ಆತನ ಏದಿರೂ ನಿಲ್ಲುವರಾರೂ...
ಕೇಳದೆ ಸುಖವ ತರುವ, ಹೇಳದೆ ದುಃಖವ ಕೊಡುವ,
ತನ್ನ ಮನದಂತೆ ಕುಣಿಸೀ ಆಡುವ

ದೇವರ ಆಟ ಬಲ್ಲವರಾರೂ... ಆತನ ಏದಿರೂ ನಿಲ್ಲುವರಾರೂ...
ಕೇಳದೆ ಸುಖವ ತರುವ, ಹೇಳದೆ ದುಃಖವ ಕೊಡುವ,
ತನ್ನ ಮನದಂತೆ ಕುಣಿಸೀ ಆಡುವ

ದೇವರ ಆಟ ಬಲ್ಲವರಾರೂ... ಆತನ ಏದಿರೂ ನಿಲ್ಲುವರಾರೂ... ||

ಹೊಸ ಹೊಸ ರಾಗ, ಅನುದಿನ ಮೂಡೀ...
ವಿದ ವಿದ ಬಾವ, ಜೋತೆಯಲಿ ಕೂಡಿ...

ಸಂತಸ ಓಮ್ಮೆ, ವೇದನೆಯೊಮ್ಮೆ...
ನೋವಲಿ ಹ್ರುದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನಾ ರೀತಿ, ಬಾಳಿನ ಈ ಹಾಡಿನಾ ರೀತಿ
ಯಾರು.. ಇಂದು.. ಬಲ್ಲವರು..

ದೇವರ ಆಟ ಬಲ್ಲವರಾರೂ... ಆತನ ಏದಿರೂ ನಿಲ್ಲುವರಾರೂ... ||

ಕಾನನ ಬರಲಿ, ಕೊರಕರೆ ಇರಲೀ...
ಓಡುವ ನದಿಯು ಸಾಗುವ ಹಾಗೆ.

ಹೂಬನ ಇರಲಿ ಮರುಭೂಮಿ ಬರಲೀ...
ನಿಲ್ಲದೇ ಗಾಳಿ ಬಿಸುವ ಹಾಗೆ
ನಿಲ್ಲದ ಈ ಪಯಣದಾ ಗುರಿಯಾ, ನಿಲ್ಲದ ಈ ಪಯಣದಾ ಗುರಿಯಾ
ಯಾರು.. ಇಂದು.. ಕಂಡವರು

ದೇವರ ಆಟ ಬಲ್ಲವರಾರೂ... ಆತನ ಏದಿರೂ ನಿಲ್ಲುವರಾರೂ...
ಕೇಳದೆ ಸುಖವ ತರುವ, ಹೇಳದೆ ದುಃಖವ ಕೊಡುವ,
ತನ್ನ ಮನದಂತೆ ಕುಣಿಸೀ ಆಡುವ

ದೇವರ ಆಟ ಬಲ್ಲವರಾರೂ... ಆತನ ಏದಿರೂ ನಿಲ್ಲುವರಾರೂ... ||
Read rest of entry

ಬಿರುಗಾಳಿ [2009] - ಮಧುರ ಪಿಸುಮಾತಿಗೆ madura pisumatige Kannada song lyrics from Birugaali

ಬಿರುಗಾಳಿ [2009] - ಮಧುರ ಪಿಸುಮಾತಿಗೆ

ಚಲನ ಚಿತ್ರ : ಬಿರುಗಾಳಿ [2009]
ಸಾಹಿತ್ಯ : ಜಯಂತ್ ಕಾಯ್ಕಿಣಿ

ಮಧುರ ಪಿಸುಮಾತಿಗೆ...... ಅದರ ತುಸು ಪ್ರೀತಿಗೆ......
ಇರುವಲ್ಲಿಯೇ ಇರಲಾರದೆ.. ಬರುವಲ್ಲಿಯು ಬರಲಾರದೆ..
ಸೋತೆ ನಾನು ನಿನ್ನ ಪ್ರೀತಿಗೆ... ಓ... ಓ... ಚೂರಾದೆ ಒಂದೇ ಬೇಟಿಗೆ...

ಮಧುರ ಪಿಸುಮಾತಿಗೆ...... ಅದರ ತುಸು ಪ್ರೀತಿಗೆ......

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ..
ದಾರಿಯನೇ ಬರಿ ನೋಡುವೆನು ನೀ ಕಾಣುವವರೆಗೆ..
ನಿನ್ನದೇ ಪರಿಮಳ, ನಿನ್ನಯ ನೆನಪಿಗೆ, ಏನಿದು ಕಾತರ,
ಬಾರಿ ಬಾರಿ ನಿನ್ನ ಬೇಟಿಗೆ.. ಓ.. ಓ.... ಸೋತೆ ನಾನು ನಿನ್ನ ಪ್ರೀತಿಗೆ.. ||ಮಧುರ||

ನೋಡಿದರೆ ಮಿತಿ ಮೀರುತಿದೆ ಮನ ಮೋಹಕ ಮಿಡಿತ...
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ, ಕನಸಿನ ಊರಿಗೆ, ಕುಣಿಯುತ ಬಂದೆನು,
ಭಿನ್ನವಾದ ನಿನ್ನ ದಾರಿಗೆ.. ಓ.. ಓ.... ಸೋತೆ ನಾನು ನಿನ್ನ ಪ್ರೀತಿಗೆ.. ||ಮಧುರ||

Source: www.kannadalyrics.com
Read rest of entry