Tuesday, December 30, 2008

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ ನನ್ನುಸಿರೇ ninagaagiye song lyrics from nannusire

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ ನನ್ನುಸಿರೇ ninagaagiye song lyrics from nannusire

ಸಂಗೀತ: ಪ್ರೇಮ್ ಜಿ ಅಮರನ್
ಗಾಯನ: ಚಿತ್ರ

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ
ನಿನಗಾಗಿಯೇ ನಿನಗಾಗಿಯೇ ಕಿರುನೋಟವು ಸರಿದಾಡಿದೆ
ಮರುಳಾಗಿ ನಾನು ಮರೆ ಮಾಚುತಿರಲು ತೆರೆಯನ್ನು ತೆರೆದು ಬರೆಲಾರೆಯೇನು
ಬೆಳಕಲ್ಲಿ ಜೀವ ತುಸು ನಾಚುತಿರಲು ಬೆಳದಿಂಗಳನ್ನು ತರಲಾರೆಯೇನು
||ನಿನಗಾಗಿಯೇ||

ಅಲೆಯುವ ಕಣ್ಣಿನ ಕಾಡಿಗೆ ಕರಗಲು ಕಲಕಲ ನಗುತಿದೆ ಈ ಹೂವಾ ಮಾಲೆ
ಕನಸಿನ ಕಲರವ ಸುತ್ತಲು ಕವಿದಿದೆ ನನ್ನನು ಹುಡುಕುತ ನೀ ಬಂದ ಮೇಲೆ
ಇರುಳಲ್ಲಿ ಬರೆದ ಮದರಂಗಿಯಲ್ಲಿ ರಂಗೇರುವಂತೆ ನೆನಪಾಗು ನೀನು
ನನಗಾಗಿ ನಿನ್ನ ಪರದಾಟ ಚೆಂದ, ತುಸುದೂರದಲ್ಲಿ ಇರಲಾರೆಯೇನು||೨||
||ನಿನಗಾಗಿಯೇ||

ಹೃದಯದ ಕನ್ನಡಿ ಒಲವಲಿ ಮಿನುಗಲು, ಅದರಲಿ ನಿನ್ನದೇ ಮೊಗವನ್ನು ನೋಡು
ನೆನಪಿನ ಪರಿಮಳ ಮೆಲ್ಲಗೆ ಸುಳಿಯುತ ಕಾಡದೆ ಸುಳಿದಿದೆ ಹಿತವಾದ ಹಾಡು
ಸೆರಗಲ್ಲಿ ಬೆರೆತ ಚಿತ್ತಾರದಲ್ಲಿ, ನವಿರಾದ ಸುಳಿಯ ಜರಿಯಾಗು ನೀನು
ಹಾಗೆಲ್ಲ ಈಗ ಮಾತಾಡಲಾರೆ, ಏಕಂತದಲ್ಲಿ ಸಿಗಲಾರೆಯೇನು||೨||
||ನಿನಗಾಗಿಯೇ||

0 comments:

Post a Comment