ಹೊಸ ಬಾಳು ನಿನ್ನಿಂದ ಆಟೋ ರಾಜ hosa baalu ninninda kannada song lyrics from Auto raja
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್. ಜಾನಕಿ
ಹೊಸ ಬಾಳುss ನಿನ್ನಿಂದ
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ನಿನ್ನ ನಾ ಸೇರಲು
ತನುವು ಹೂವಾಯ್ತು, ಮನವು ಜೇನಾಯ್ತು
ತನುವು ಹೂವಾಯ್ತು, ಮನವು ಜೇನಾಯ್ತು
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ನಿನ್ನ ನಾ ಸೇರಲು
ನಿನ್ನ ನಾ ಮೆಚ್ಚಿ, ನನ್ನ ನೀ ಮೆಚ್ಚಿ
ಪ್ರೀತಿಯಿಂದ ಮನಸು ಬಿಚ್ಚಿ ಮಾತನಾಡಿ
ನೀನೆ ನನ್ನ ಜೋಡಿ, ಎಂದು ಕೈ ನೀಡಿ, ಸಂಗಾತಿಯಾದೆನು
ನಿನ್ನ ಸ್ನೇಹಕ್ಕೆ, ನಿನ್ನ ಪ್ರೇಮಕ್ಕೆ
ಎಂದೋ ನಾನು ಸೋತು ಹೋದೆ ಮುದ್ದು ನಲ್ಲ
ನಿನ್ನ ಮಾತಲ್ಲಿ, ಕಣ್ಣ ಮಿಂಚಲ್ಲಿ, ನೀರಾಗಿ ಹೋದೆನು
ನೀರಾಗಿ ಹೋದೆನು
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ನಿನ್ನ ನಾ ಸೇರಲು
ನೋಟ ಒಂದಾಗಿ, ಆಸೆ ಒಂದಾಗಿ
ನಿನ್ನ ನನ್ನ ಮನಸು ಮನಸು ಬೆರೆತು ಹೋಗಿ
ಬಯಕೆ ಹೋವಾಗಿ, ಪ್ರೀತಿ ಹಣ್ಣಾಗಿ, ಒಂದಾಗಿ ಹೋದೆವು
ಮಾತು ಬಂಗಾರ, ಗುಣವು ಬಂಗಾರ
ನನ್ನ ರಾಜ ನನ್ನ ಬಾಳ ಬಂಗಾರ
ನೀನು ನನ್ನಂತೆ ನಾನು ನಿನ್ನಂತೆ, ನೀ ನನ್ನ ಜೀವವು
ನೀ ನನ್ನ ಜೀವವು
ಹೊಸ ಬಾಳುss ನಿನ್ನಿಂದ
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ನಿನ್ನ ನಾ ಸೇರಲು
ತನುವು ಹೂವಾಯ್ತು, ಮನವು ಜೇನಾಯ್ತು
ತನುವು ಹೂವಾಯ್ತು, ಮನವು ಜೇನಾಯ್ತು
ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ನಿನ್ನ ನಾ ಸೇರಲು
Thursday, January 1, 2009
Subscribe to:
Post Comments (Atom)
0 comments:
Post a Comment