Tuesday, December 30, 2008

ಲಹರಿ ಮೋಹ ಲಹರಿ ಮಾದೇಶ lahari moha lahari song lyrics from maadesha

ಲಹರಿ ಮೋಹ ಲಹರಿ ಮಾದೇಶ lahari moha lahari song lyrics from maadesha

ಸಂಗೀತ : ಮನೋ ಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕಿ : ಶ್ರೇಯಾ ಘೋಶಾಲ್ / ಸೋನು ನಿಗಮ್


ಲಹರಿ ಮೋಹ ಲಹರಿ ನನ್ನ ಮನವ ಸವರಿ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ
ಲಹರಿ ಭಾವ ಲಹರಿ ಹೃದಯ ಗರಿಯ ಗೆದರಿ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲಹರಿ ಮೋಹ ಲಹರಿ

ಒಮ್ಮೆ ಒಂದು ಸಲ ನೀನು ಸೋಕಿದರೆ ನಾನು ಪುಳಕಗಳ ಸಂಕಲನ
ನನ್ನ ರಾಗದ ಮನದ ಮಾತುಗಳ ಕಣ್ಣ ನೋಟದಲಿ ಸಂಚಲನ
ಅಂದಹಾಗೆ ನೀ ಅಂದವಾಗಿಯೇ ಚಂದಗಾಣಿಸೋ ಸಮ್ಮಿಲನ
ಚಂದ್ರ ಬಂದಾಗಿದೆ ಎಲ್ಲಾ ಅಂದಾಗಿದೆ ನೀ ನಡೆದಿರಲು ನನ್ನೊಂದಿಗೆ
ಲಹರಿ ಮೋಹ ಲಹರಿ ನನ್ನ ಮನವ ಸವರಿ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ

ನಿನ್ನ ಕಿರುನಗೆಯ ಸಣ್ಣ ದೀಪಗಳ ದಾರಿ ತೋರುತಿದೆ ಸಂಗಾತ
ಮತ್ತೆ ಮತ್ತೆ ನೀ ನನ್ನ ಕೂಗಿದರೆ ನನ್ನ ಪಾಲಿಗದು ಸಂಗೀತ
ನೋವು ನಲಿವುಗಳ ಲೆಕ್ಕ ಮೀರುವುದೇ ಜೀವದೊಲುಮೆಯ ಸಂಕೇತ
ನಲ್ಮೆ ಹಸುನಾಗಿದೆ ನಾಳೆ ಹೊಸದಾಗಿದೆ ನನ್ನ ಮರುಜನ್ಮ ನಿನ್ನೊಂದಿಗೆ
ಲಹರಿ ಭಾವ ಲಹರಿ ಹೃದಯ ಗರಿಯ ಗೆದರಿ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲಹರಿ ಮೋಹ ಲಹರಿ

Read rest of entry

ಅಲೆ ಅಲೆಯು ಹಾಡಿದವು ಸ್ಲಂ ಬಾಲ ale aleyu song lyrics from slum baala

ಅಲೆ ಅಲೆಯು ಹಾಡಿದವು ಸ್ಲಂ ಬಾಲ ale aleyu song lyrics from slum baala
ಸಾಹಿತ್ಯ: ಸುಮನ ಕಿತ್ತೂರ್ ; ಸಂಗೀತ: ಅರ್ಜುನ್ ; ಗಾಯನ: ರಾಜೇಶ್, ನಂದಿತ
ಹಾಡು ಕೇಳಿ

[ರಾಜೇಶ್] : ಅಲೆ ಅಲೆಯು ಹಾಡಿದವು...ಮನದೊಳಗೆ ಗೀತೆಯನು
[ನಂದಿತ] : ಅಲೆ ಅಲೆಯು ಹಾಡಿದವು...ಮನದೊಳಗೆ ಗೀತೆಯನು
[ರಾಜೇಶ್] : ಎದೆಯೊಳಗೆ ಉದಯಿಸಿದ..ಹೊಂಗಿರಣ ನೀನು
[ನಂದಿತ] : ಗರಿಗದರಿ ಹಾರುತಿಹ..ಹಕ್ಕಿ..ಈಗ..ನಾನು
[ರಾಜೇಶ್] : ಅಲೆ ಅಲೆಯು ಹಾಡಿದವು...ಮನದೊಳಗೆ ಗೀತೆಯನು


[ನಂದಿತ]
ನಾ ನಮಿಸುವೆ* ಓ ಗೆಳೆಯನೆ...ಕಡಲಾಚೆಯ ಬೆಳಕಿಗೆ
[ರಾಜೇಶ್]
ನಾ ನಿನಗೆ..ನೀ ನನಗೆ..ಹೇಳುವುದೇನಿಲ್ಲ
[ನಂದಿತ]
ನೀ ನನಗೆ..ನಾ ನಿನಗೆ..ಕೇಳುವುದೇನಿಲ್ಲ
[ರಾಜೇಶ್,ನಂದಿತ]
ಪಯಣಿಗರು..ನಾನು..ನೀನು..ಎಲ್ಲ

[ರಾಜೇಶ್]
ಅಲೆ ಅಲೆಯು ಹಾಡಿದವು...ಮನದೊಳಗೆ ಗೀತೆಯನು


[ರಾಜೇಶ್]
ಎಲ್ಲಿಂದಲೋ ಬಂದೆವು..ಈ ಕಡಲಿನಲೀ ನಿಂತೆವು
[ನಂದಿತ]
ನೊಂದ ಈ ಕಣ್ಗಳಿಗೆ..ಚಂದಿರನು ನೀನು
[ರಾಜೇಶ್]
ಕಾದ ಈ ಕಣ್ಗಳಿಗೆ..ಹೊಂಗನಸು ನೀನು
[ರಾಜೇಶ್,ನಂದಿತ]
ಒಂದಾದಂತೆ..ನಾನು..ನೀನು..ಬಾನು
[ನಂದಿತ]
ಅಲೆ ಅಲೆಯು
[ರಾಜೇಶ್]
ಹಾಡಿದವು
[ರಾಜೇಶ್,ನಂದಿತ]
ಮನದೊಳಗೆ ಗೀತೆಯನು

Read rest of entry

ಓಡಿ ಬಂದೆನು ಹಾಗೆ ಸುಮ್ಮನೆ Odi bandenu song lyrics from haage summane

ಓಡಿ ಬಂದೆನು ಹಾಗೆ ಸುಮ್ಮನೆ Odi bandenu song lyrics from haage summane

ಓಡಿ ಬಂದೆನು ನಿನ್ನ ನೋಡಲು
ಕಾದು ನಿಂತೆ ನಾನು ಏನೋ ಕೇಳಲು
ನೀ ಮೌನಿಯಾದರೆ ಏನು ಮಾಡಲಿ, ಎಲ್ಲಿ ಹೋಗಲಿ
ಹೂವು ತಂದೆನು ನಿನಗೆ ನೀಡಲು
ನಿನ್ನ ಕಂಗಳಲ್ಲಿ ನನ್ನ ನೋಡಲು
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ

ನೂರೊಂದು ಬಾರಿ ಹರಿದು ನಾ ಬರೆದ ಓಲೆಯ,
ತುಸುವಾದರೂ ತೆರೆದೋದದೆ ನೀ ಹಾಗೆ ಹೋದೆಯಾ
ಕರೆಯೊಂದ ಮಾಡಿ ಬಿಡಲೇ ಎದೆಯಿಂದ ಈಗಲೇ,
ಪದವಿಲ್ಲದೇ, ಸ್ವರವಿಲ್ಲದೇ, ನಿನ್ನನ್ನು ಕೂಗಲೇ
ಹೂವು ತಂದೆನು..

ಕನಸಿಂದ ಛಾಪಿಸಿರುವೆ, ಈ ಮನದ ಸಂಚಿಕೆ
ಮುಖಪುಟವನು ನೀ ನೋಡದೆ ಮರೆಯಾದೆ ಏತಕೆ
ನೆನಪಿಂದ ರೂಪಿಸಿರುವ ನವಿರಾದ ಸೇತುವೆ
ನಿನಗಾಗಿಯೇ ಅಣಿ ಮಾಡುತ ನಾನಂತೂ ಕಾಯುವೆ
ಓಡಿ ಬಂದೆನು..

Read rest of entry

ಕರೆಯಲೇ ನಿನ್ನ, ಕರೆಯಲೇ ನಿನ್ನ, ನನ್ನ ಕನಸಿನ ಅರಮನೆಗೆ ರಾಕಿ kareyale ninna song lyrics from rocky

ಕರೆಯಲೇ ನಿನ್ನ, ಕರೆಯಲೇ ನಿನ್ನ, ನನ್ನ ಕನಸಿನ ಅರಮನೆಗೆ ರಾಕಿ kareyale ninna song lyrics from rocky

ಕರೆಯಲೇ ನಿನ್ನ, ಕರೆಯಲೇ ನಿನ್ನ, ನನ್ನ ಕನಸಿನ ಅರಮನೆಗೆ
ಸೆಳೆಯಲೇ ನಿನ್ನ, ಸೆಳೆಯಲೇ ನಿನ್ನ, ತೆರೆದ ಮನಸ್ಸಿನ ಸೆರೆಮನೆಗೆ
ನಾನಂತು ಹೋದೆನು ಸೋತು ಇಂತಹ ಸುಂದರ ಬಾವನೆಗೆ
ಎನಂತ ಹೇಳಲಿ ನಿನ್ನ ರೂಪವು ತಾಳಿದ ಕಲ್ಪನೆಗೆ
ಮಾತು ಮಾತಿನಲಿ ಎಲ್ಲವನೀಗ ಹೇಳಿ ತೀರುವೆನು ಈ ಗಳಿಗೆ
ಏನು ಹೇಳಿದರು ಸಾಲದಾಗಿದೆ ಜೀವ ನಿನ್ನದು ಕೊನೆವರೆಗೆ
||ಕರೆಯಲೇ ನಿನ್ನ||

ಪರದೆಯೇ ಇಲ್ಲದ, ಅಭಿನಯವಿಲ್ಲದ, ಹೃದಯದ ವೇದಿಕೆ ನಿನಗಾಗಿದೆ
ಮರೆಯಲು ಬಾರದ, ಮರೆಯಲಿ ಮೂಡಿದ ಒಲವಿನ ಭೂಮಿಕೆ ನಿನಗಾಗಿದೆ
ನಾನಂತು ಮರುಳನು ನಿನ್ನ ನೆರಳನು ಕೂಡ ಮೋಹಿಸುವೆ
ಹಾಗಂತ ಏತಕೆ ನೀನು ದೂರವೆ ನಿಂತು ಸತಾಯಿಸುವೆ
ಏಂತ ಕಾಲದಲು ತಂಪು ನೀಡುವೆ, ನಾನೇ ನಿನ್ನಯ ಬೀಸಣಿಗೆ
ಅಂತರಂಗದ ನಾಯಕಿ ನೀನು, ಬೇಗ ಬಾರೆ ನೀ ಬಳಿಗೆ
||ಕರೆಯಲೇ ನಿನ್ನ||

ಬಿರಿಯುವ ಹೂಗಳ ಸಡಗರವೆಲ್ಲವು ನಿನ್ನಲೇ ಕಾಣುವ ಸಲುವಾಗಿದೆ
ಅರಿಯದ ಬಾವವು, ತಳೆದಿಹ ಮೌನವು ನಿನ್ನನೇ ಕೇಳುವ ಸಲುವಾಗಿದೆ
ನನಗಂತು ಅವಸರವಿಲ್ಲ, ಒಲಿವ ಕ್ಷಣಕೆ ಕಾಯುವೆನು
ಏನೇನು ಬೇಸರವಿಲ್ಲ ನಿನ್ನಯ ಕನಸಲೇ ನೇಯುವೆನು
ನನ್ನ ಸಂಜೆಗಳ ದೀಪವು ನೀನು, ನೀನೆ ನನ್ನ ದೀವಾಳಿಗೆ
ಅಂತರಂಗದ ಗಾಯಕ ನಾನು, ಹಾಡುಬಾರೆ ನೀ ಜೊತೆಗೆ
||ಕರೆಯಲೇ ನಿನ್ನ||

Read rest of entry

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ ನನ್ನುಸಿರೇ ninagaagiye song lyrics from nannusire

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ ನನ್ನುಸಿರೇ ninagaagiye song lyrics from nannusire

ಸಂಗೀತ: ಪ್ರೇಮ್ ಜಿ ಅಮರನ್
ಗಾಯನ: ಚಿತ್ರ

ನಿನಗಾಗಿಯೇ ನಿನಗಾಗಿಯೇ ಕರೆಯೋಲೆಯ ಬರೆದಾಗಿದೆ
ನಿನಗಾಗಿಯೇ ನಿನಗಾಗಿಯೇ ಕಿರುನೋಟವು ಸರಿದಾಡಿದೆ
ಮರುಳಾಗಿ ನಾನು ಮರೆ ಮಾಚುತಿರಲು ತೆರೆಯನ್ನು ತೆರೆದು ಬರೆಲಾರೆಯೇನು
ಬೆಳಕಲ್ಲಿ ಜೀವ ತುಸು ನಾಚುತಿರಲು ಬೆಳದಿಂಗಳನ್ನು ತರಲಾರೆಯೇನು
||ನಿನಗಾಗಿಯೇ||

ಅಲೆಯುವ ಕಣ್ಣಿನ ಕಾಡಿಗೆ ಕರಗಲು ಕಲಕಲ ನಗುತಿದೆ ಈ ಹೂವಾ ಮಾಲೆ
ಕನಸಿನ ಕಲರವ ಸುತ್ತಲು ಕವಿದಿದೆ ನನ್ನನು ಹುಡುಕುತ ನೀ ಬಂದ ಮೇಲೆ
ಇರುಳಲ್ಲಿ ಬರೆದ ಮದರಂಗಿಯಲ್ಲಿ ರಂಗೇರುವಂತೆ ನೆನಪಾಗು ನೀನು
ನನಗಾಗಿ ನಿನ್ನ ಪರದಾಟ ಚೆಂದ, ತುಸುದೂರದಲ್ಲಿ ಇರಲಾರೆಯೇನು||೨||
||ನಿನಗಾಗಿಯೇ||

ಹೃದಯದ ಕನ್ನಡಿ ಒಲವಲಿ ಮಿನುಗಲು, ಅದರಲಿ ನಿನ್ನದೇ ಮೊಗವನ್ನು ನೋಡು
ನೆನಪಿನ ಪರಿಮಳ ಮೆಲ್ಲಗೆ ಸುಳಿಯುತ ಕಾಡದೆ ಸುಳಿದಿದೆ ಹಿತವಾದ ಹಾಡು
ಸೆರಗಲ್ಲಿ ಬೆರೆತ ಚಿತ್ತಾರದಲ್ಲಿ, ನವಿರಾದ ಸುಳಿಯ ಜರಿಯಾಗು ನೀನು
ಹಾಗೆಲ್ಲ ಈಗ ಮಾತಾಡಲಾರೆ, ಏಕಂತದಲ್ಲಿ ಸಿಗಲಾರೆಯೇನು||೨||
||ನಿನಗಾಗಿಯೇ||

Read rest of entry

ಮಧುವನ ಕರೆದರೆ ಇಂತಿ ನಿನ್ನ ಪ್ರೀತಿಯ maduvana karedare song lyrics from inti ninna pritiya

ಮಧುವನ ಕರೆದರೆ ಇಂತಿ ನಿನ್ನ ಪ್ರೀತಿಯ maduvana karedare song lyrics from inti ninna pritiya

ಸಂಗೀತ: ಸಾಧು ಕೋಕಿಲ ; ಗಾಯನ: ವಾಣಿ / ಚಿನ್ಮಯೀ

ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೇ ... ೨

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು
ಬಾ ಬಳಿಗೆ ಎಂದಿದೇ
ಶರಣಾ..ಆಗು ಆದರೆ
ಸೆರೆ ಆಗು ಆದರೆ

ಮಧುವನ ...

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ..ಏ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೇ

ಮಧುವನ ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ..ಏ
ಎದುರಿದ್ದು ಕರೆಯುವೇ ಏಕೆ
ಜೊತೆಯಿದ್ದು ಮರೆಯುವೇ ಏಕೆ
ನಿನ್ನೊಲವು ನಿಜವೇ ಆದರೇ

ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೆ

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು
ಬಾ ಬಳಿಗೆ ಎಂದಿದೇ
ಶರಣಾ..ಆಗು ಆದರೆ
ಸೆರೆ ಆಗು ಆದರೆ

Read rest of entry

ಚಿಗುರೊಡೆದ ಹೊಂಗನಸು chigurodeda song lyrics from honganasu

ಚಿಗುರೊಡೆದ ಹೊಂಗನಸು chigurodeda song lyrics from honganasu

ಸಂಗೀತ: ಹಂಸಲೇಖ ; ಗಾಯನ: ಶ್ರೇಯಾ ಗೋಶಾಲ್
ಸ ಸ ಸ ಸ
ಗ ರಿ ಸ ನಿ ಸ ರಿ
ಸ ಸ
ಗ ರಿ ಸ ನಿ ಸ ಗ
ರಿ ರಿ ಪ ಸಾ
ದ ಸಾ ಪ ಸ ನಿ ದ ಪ ಮ ಗ ಮ ಪ ಮ ಗ ರಿ ಸ ನಿ
ನಿ ಸ ಗ
ಸ ಗ ಮಾ
ಗ ಮ ನಿ ದ ಪಾ

ಚಿಗುರೊಡೆದ ಹಸಿರೆಳೆದ
ಪ್ರೀತಿಯ ಮೊಳಕೆ ನಾ
ಎಳೆ ಎಳೆಯಾ ಕನಸುಗಳ
ನೇಯ್ಯುವಾ ನಲ್ಮೆ ನಾ

ಮನದುಂಬಿ ತಲೆದೂಗೊ ಪರಿಮಳ ಪುಶ್ಪವಾಗುವೆ
ಪ್ರಿಯ ದುಂಬಿ ಸೆರೆ ಆಗೋ ದ್ರುಮಗಳ ಕಲ್ಪವಾಗುವೆ
ಸಾರಮತಿ ಸಾರಮತಿ i'm in love you are in love
ವಿಚಾರಮತಿ ಅಲ್ಲಾ ಈಗ i'm in love you are in love
ಪ್ರೀತಿಯ ಮಂಪರಾಗಿದೇ
ಕುಯಿಗುಯ್ತಲೆ಼ ಕುಯಿಗುಯ್ತಲೆ಼

i don't know why
feeling high
flying in sky ?

ಎಲ್ಲೊ ಮನದ ಮೂಲೆಯಲ್ಲೆಲ್ಲೋ ರೇಖಾ ಚಿತ್ರದೊಂದಿಗೆ ಮಾತೂ
ಎಂದು ಮೂಡಿತೋ ಅದು ಕಾಣೇ ಕುಂಚ ಹಿಡಿಯಬೇಕಿದೆ ಸೋತು
ತುಂಬಾ ಕೊಟ್ಟು಼ ಯಾರು ಅರಿಯರು ನನ್ನ ಬಿಟ್ಟು
ಬಣ್ಣಾ ತುಂಬಿ ಹಾಕಿಸ ಬೇಕಿದೆ ಚಿನ್ನದ ತಟ್ಟು

ಚಿಗುರೊಡೆದ ...

ನನ್ನ ಮೊಟ್ಟಮೊದಲನೇ ಆಯ್ಕೆ ನನ್ನ ಹೃದಯ ಮಾಡಿದೆ ಈಗಾ
ಅದರ ಆತುರಕ್ಕೆ ನಾನಿಲ್ಲಿ ಜಿಗಿದು ಹಾಕುತಿರುವೆನು ಲಾಗಾ
ಯಾರೋ ಹೇಳೋ ಪ್ರೀತಿಯಾ ಅನುಭವ ಕೇಳಲು ಚಂದ
ನಮಗೆ ಆದರೇ ಹೇಳಲು ಆಗದ ಹೃದಯಾನಂದ

ಚಿಗುರೊಡೆದ ...
Read rest of entry