Thursday, January 1, 2009

ನಡೆದಾಡೋ ಕಾಮನಬಿಲ್ಲೆ ಅರುಣರಾಗ nadedaado kaamanabillu song lyrics from arunaraaga

ನಡೆದಾಡೋ ಕಾಮನಬಿಲ್ಲೆ ಅರುಣರಾಗ nadedaado kaamanabillu song lyrics from arunaraaga

ಚಿತ್ರ: ಅರುಣ ರಾಗ
ಸಾಹಿತ್ಯ: ದೊಡ್ಡರಂಗೆಗೌಡ
ಸಂಗೀತ: ಎಂ.ರಂಗರಾವ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ನಡೆದಾಡೋ ಕಾಮನಬಿಲ್ಲೆ ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ ಆನಂದದ ಅರುಣರಾಗ
ಅರುಣರಾಗ ಅರುಣರಾಗ

ಮೀನಿನ ನಯನ ಹವಳದ ತುಟಿಯ ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ ಹುಬ್ಬು ಹೊಂದಿದ ಷೋಡಶಿ
ನಿನ್ನ ನೋಡಿ ಪ್ರೀತಿ ಮೂಡಿ ಆಸಿ ಚಿಮ್ಮಿ ಹೊಮ್ಮಿದೆ
ನೀನೆಂದಿಗು ನನ್ನ ಬಾಳಿಗೆ ಆನಂದದ ಅರುಣರಾಗ
ಅರುಣರಾಗ ಅರುಣರಾಗ

ದಂತದ ಮೈಯ ಮಲ್ಲಿಗೆ ನಗೆಯ ಅಂದದ ಊರ್ವಶಿ
ಮೇಘದ ಹುರುಳ ಕೋಗಿಲೆ ಕಂಠ ಗಳಿಸಿದ ಪ್ರೇಯಸಿ
ನಿನ್ನ ರೂಪು ಕಣ್ಣ ತುಂಬಿ ಸ್ನೇಹ ಸಂಗ ಬೇಡಿದೆ
ನೀನೆಂದಿಗು ನನ್ನ ಬಾಳಿಗೆ ಆನಂದದ ಅರುಣರಾಗ
ಅರುಣರಾಗ ಅರುಣರಾಗ

0 comments:

Post a Comment