Tuesday, December 30, 2008

ಏಕೋ ಏನೋ ಅರಸು eko eno song lyrics from arasu

ಏಕೋ ಏನೋ ಅರಸು eko eno song lyrics from arasu

ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮ್ ನಾರಾಯಣ್
ಗಾಯನ : ಮಹಾಲಕ್ಷ್ಮಿ ಐಯ್ಯರ್

ಹೆಣ್ಣು : ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ
ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
ನನ ಈ ಜೀವನ ಹಸಿರಾಯಿತು ಇಂದೆ ಇಂದೆ
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ
ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
ಮನ ತಂಪಾಗಲು ತಂಗಾಳಿಯ ತಂದ ತಂದ
ಅಪರೂಪದ ಅನುರಾಗದ ಆನಂದವು ನೀನಾದೆ
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ
ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ
ನಿನಗಿಂದು ನಾ ಸೋತು ಹೋದೆ
ಈ ಸ್ನೇಹ ಎಲ್ಲಾಯ್ತೊ ಈ ಪ್ರೀತಿ ಹೇಗಾಯ್ತೊ
ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ

Read rest of entry

ಬಾರೋ ಬಾರೋ ಅರಸು baaro baaro song lyrics from arasu

ಬಾರೋ ಬಾರೋ ಅರಸು baaro baaro song lyrics from arasu

ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್
ಗಾಯನ : ಪುನೀತ್ ರಾಜಕುಮಾರ್, ಸುಚಿತ್ರ

ಸಂಗಡಿಗರು :
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ

ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳೀನ
ದೂರ ದೂರ ಇನ್ನೇಕೆ ನನ್ನಾ ನಿನ್ನಾ ನಡುವೆ
ಬಾರೋ ಬಾರೋ

ಗಂಡು :
ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ
ಚಂದನದ ಗೊಂಬೆಯೆ ಭೂಮಿಗಿಳಿದ ರಂಭೆಯೆ
ನನ್ನ ಮುದ್ದು ಬಂಗಾರಿ ನನ್ನಾ ಮನಸಾ ಕದ್ದಾ
ಚೋರಿ ಚೋರಿ

ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ

ಸಂಗಡಿಗರು :
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ
ಯಮ್ಮ ಯಮ್ಮ ಯಮ್ಮ

ಹೆಣ್ಣು :
ನಿನ್ನ ಕಣ್ಣ ಸನ್ನೆಗೆ ಕರಗಿ ಹೋದೆ ನಾನು
ಹೃದಯ ನೀಡೋ ಮನ್ಮಥ
ಕಟ್ಟುಮಸ್ತು ಹಳ್ಳಿ ಹೈದ ನೀನು ನಿಂಗೆ ನಾನು

ಗಂಡು :
ಮರುಳು ಮಾಡೋ ಮೋಹಿನಿ
ಏನೋ ಜಾದು ಮಾಡಿದೆ
ಅದ್ಯಾವ ಮಂತ್ರ ಹಾಕಿದೆ
ಮಳ್ಳಿ ನಿನ್ನ ಹಿಂದೆ ನಾನು ಬಂದೆ
ಮನಸು ನಿಂದೆ

ಹೆಣ್ಣು :
ಹಗಲು ರಾತ್ರಿ ನೋಡದೆ ಏಕೆ ಹೀಗೆ ಕಾಡಿದೆ

ಗಂಡು :
ವಾರೆ ವಾರೆ ಮದನಾರಿ
ಎದೆಯ ಬಡಿತ ಕೇಳಿ ಓಡಿ ಬಂದೆ

ಹೆಣ್ಣು :
ಹೆ.ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ

ಗಂಡು :
ಹೇಯ್.ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ

ಹೆಣ್ಣು :
ಲಗ್ನ ಆಗೋ ವೇಳೆಗೆ ಕಾಯಲಾರೆ ಹೀಗೆ
ಹೆಗಲ ಮೇಲೆ ಕೂರುವೆ
ನನ್ನಾ ಹೊತ್ತು ಕೊಂಡು ಹೋಗೋ ರನ್ನ
ನನ್ನಾ ಚಿನ್ನ

ಗಂಡು :
ಅವಸರಾನ ಕೋಮಲೆ
ಸ್ವಲ್ಪ ತಾಳು ಕೋಗಿಲೆ
ಯಾರೇ ಏನೇ ಹೇಳಲಿ
ನನ್ನ ದಿಲ್ಲು ನಿಂದೆ ತಾನೇ
ನಲ್ಲೆ ದುಂಡು ಮಲ್ಲೆ

ಹೆಣ್ಣು :
ಸರಸ ಈಗ ಸಾಗಲಿ ಸ್ವರ್ಗ ಇಲ್ಲೆ ಜಾರಲಿ

ಗಂಡು :
ನನ್ನ ನಿನ್ನ ಮದುವೇಗೆ ನಮ್ಮ ಬಳಗ
ಬಂದು ಹರಸಬೇಕು

ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳೀನ
ದೂರ ದೂರ ಇನ್ನೇಕೆ ನನ್ನಾ ನಿನ್ನಾ ನಡುವೆ
ಬಾರೋ ಬಾರೋ

ಗಂಡು :
ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ
ಚಂದನದ ಗೊಂಬೆಯೆ ಭೂಮಿಗಿಳಿದ ರಂಭೆಯೆ
ನನ್ನ ಮುದ್ದು ಬಂಗಾರಿ ನನ್ನ ಮನಸಾ ಕದ್ದಾ
ಚೋರಿ ಚೋರಿ

ಹೆಣ್ಣು :
ಬಾರೋ ಬಾರೋ ಬಾರೋ ಮುದ್ದು ರಾಜ
ಸಿಡಿಗುಂಡು ಆದ್ರು ಮನಸು ಮಾತ್ರ ರೋಜ

ಗಂಡು :
ಹೆ.ಬಾರೆ ಬಾರೆ ಬಾರೆ ನನ್ನ ಮೈನ
ಇಂದೇ ಹಿಡಿಯುತೀನಿ ಚಿನ್ನ ನಿನ್ನ ಕೈನ
ಕೈನ ಕೈನ ಕೈನ

Read rest of entry

ಅ ಅ ಅ ಅಮೇರಿಕಾ ಅಮೇರಿಕಾ! ಅಮೇರಿಕಾ a a a america song lyrics from america america

ಅ ಅ ಅ ಅಮೇರಿಕಾ ಅಮೇರಿಕಾ! ಅಮೇರಿಕಾ a a a america song lyrics from america america

ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಗಾಯನ : ರಾಜೇಶ್, ಸಂಗೀತ ಕಟ್ಟಿ, ರಮೇಶ್ ಚಂದ್ರ

ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕ
ಅ ಅ ಅ ಅ ಅಮೇರಿಕ
ಅ ಅ ಅ ಅ ಅಮೇರಿಕ
ಅ ಅ ಅ ಅ ಅಮೇರಿಕ
ಅ ಅ ಅ ಅ ಅಮೇರಿಕ

ವಿನೋದವಾಡುವ ವಿಚಿತ್ರ ರೈಡಿಗೆ
ಲಾಸ್ ಏಂಜಲ್ಸಿನ ಡಿಸ್ನಿ ಲ್ಯಾಂಡ್
ಅಗೋ ಭಯಾನಕ ಇದು ರೋಮಾಂಚಕ
ಲೋಕ ಬೆರಗಿನ ಡಿಸ್ನಿ ಲ್ಯಾಂಡ್
ಬೆವರ್ಲಿ ಹಿಲ್ಲಿನ ಸ್ಟಾರೆಲ್ಲ
ಫುಟ್‍ಪಾತ್ ಅಂಚಲಿ ಮಿಂಚುವ
ಫಿಲ್ಮಿ ವಿಚಿತ್ರದ ಹಾಲಿವುಡ್
ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕ
ಅ ಅ ಅ ಅಮೇರಿಕ

ಬೆರಗಿಗೆ ಬೆರಗಿದು ಗೊತ್ತೆ?
ಮೆರುಗಿಗೆ ಮೆರುಗಿದು ಮತ್ತೆ
ಗೋಲ್ಡನ್ ಗೇಟಿನ ಸೇತುವೆ
ಝಣ ಝಣ ಸುರಿವುದು ಡಾಲರ್
ಮರುಕ್ಷಣ ಎಲ್ಲಾ ಢಮಾರ್
ಜೂಜುಕೋರರ ಲಾಸ್‍ವೆಗಾಸ್
ದುರಾಸೆಯಲ್ಲಾ ಒಮ್ಮೆ ನಿರಾಸೆಯಾಗುತ್ತೆ
ಸಾರ್ಥಕ ಸುಖಮಯ ದೇಶವೇ
ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ

ನ್ಯೂಯಾರ್ಕ್ ನಗರದ ಸ್ವತಂತ್ರ ದೇವತೆ
ನಾಡ ಪ್ರೀತಿಯ ಸಂಕೇತ
ಆ ಅನೇಕ ಗಣ್ಯರ ಧ್ಯಾನದಿ ಮುಳುಗಿದ
ಸಾಲು ಸ್ಮಾರಕ ಸರಮಾಲೆ
ವೈಟ್‍ಹೌಸಿನ ದರ್ಶನ
ಸ್ವಿಟ್ಝ್ ಯೂನಿಯನ್
ಸಂಗ್ರಹ ಶಾಂತ ಪ್ರಶಾಂತ ವಾಷಿಂಗ್ಟನ್

ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ

ಚಲಾಕಿದೆ ಜಿಗಿಯುತಾ ಜಾರಿ
ಬಿರಿವುದು ಬಳುಕುತಾ ಬಾಗಿ
ಲೋಕಮಾನ್ಯ ನಯಾಗರ
ಅಮೇರಿಕಾ ಕೆನಾಡ ಮಧ್ಯೆ
ಸಮೇತವು ಸರಿಯುವ ಸದ್ದೆ
ಜೋಗದ ತಂಗಿ ನಯಾಗರ
ಕಾವೇರಿ ಕೂಡ ಅಸೂಯೆ ಪಟ್ಟಾಳೊ
ಇರುಳಲಿ ಕಿನ್ನರ ಲೋಕವೋ
ಅಮೇರಿಕಾ

ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ
ಅ ಅ ಅ ಅಮೇರಿಕಾ
ಅಮೇರಿಕಾ

Read rest of entry

ಬಾನಲ್ಲಿ ಓಡೋ ಮೇಘಾ ಅಮೇರಿಕಾ! ಅಮೇರಿಕಾ baanalli odo megha song lyrics from america america

ಬಾನಲ್ಲಿ ಓಡೋ ಮೇಘಾ ಅಮೇರಿಕಾ! ಅಮೇರಿಕಾ baanalli odo megha song lyrics from america america

ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಾಡಿದವರು : ರಾಜೇಶ್, ಸಂಗೀತ ಕಟ್ಟಿ, ರಮೇಶ್ ಚಂದ್ರ

ಓ ಹೊ ಹೊ ಹೋ..
ಓ ಹೊ ಹೊ ಹೋ
ಲಾ ಲಾ ಲಾ ಲಾ...

||೨|| ಬಾನಲ್ಲಿ ಓಡೋ ಮೇಘಾ
ಗಿರಿಗೋ ನಿಂತಲ್ಲೇ ಯೋಗಾ ||೨||
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯಾ ಬೇಗ

|| ಬಾನಲ್ಲಿ ಓಡೋ ಮೇಘಾ||

ಮುಗಿಲೊಂದು ಮನಸಿನ ಬಿಂಬಾ
ಮುತ್ತಿನಾ ಮಣಿಗಳೆ ತುಂಬಾ
ಎಲ್ಲೋ ದೂರದ ಚುಕ್ಕಿ
ಅದರತ್ತ ಗಿರಿಮುಗಿಲಾ ಹಕ್ಕಿ

|| ಬಾನಲ್ಲಿ ಓಡೋ ಮೇಘಾ||

ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲು

|| ಬಾನಲ್ಲಿ ಓಡೋ ಮೇಘಾ||

ಬಾನಲ್ಲೇ ಓಡಿದರೂ ಮೇಘಾ
ಮಳೆಗೂ ಮಣ್ಣಲೇ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದ ನಡುವೇ ಮಾತು

|| ಬಾನಲ್ಲಿ ಓಡೋ ಮೇಘಾ||

Read rest of entry

ಹೇಗಿದೆ ನಮ್ ದೇಶ ಅಮೇರಿಕಾ! ಅಮೇರಿಕಾ hegide namdesha song lyrics from america america

ಹೇಗಿದೆ ನಮ್ ದೇಶ ಅಮೇರಿಕಾ! ಅಮೇರಿಕಾ hegide namdesha song lyrics from america america

ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮುರ್ತಿ
ಹಾಡಿದವರು : ರಾಜೇಶ್, ಮಂಜುಳಾ ಗುರುರಾಜ್, ರಮೇಶ್ ಚಂದ್ರ

ಹೇಗಿದೆ ನಮ್ ದೇಶ
ಹೇಗಿದೆ ನಮ್ ಭಾಷೆ
ಹೇಗಿದೆ ಕನ್ನಡ
ಹೇಗಿದೆ ಕರ್ನಾಟಕ
ಹೇಗಿದ್ದಾರೆ ನಮ್ಮ ಜನ
ಈಗ ಹೇಗಿದ್ದಾರೆ ಕನ್ನಡ ಜನ
ಈಗ ಹೇಗಿದ್ದಾರೆ ನಮ್ಮ ಕನ್ನಡ ಜನ

ಓಹ್! ಬೊಂಬಾಟಾಗಿದಾರೆ!

ಏನಂತಾರೆ ಅಣ್ಣೋವ್ರು?
ಯಾವ್ದ್ ಹೊಸ ಪಿಕ್ಚರ್ರು?
ಈಗ್ಲೂನೂ ಅಣ್ಣಾವ್ರೇ ನಂ.೧ ಸ್ಟಾರಮ್ಮ

ಕಾವೇರಿ ವಿವಾದ ಈಗ ಎಲ್ಲಿಗ್ ಬಂದಿದೆ
ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ

ಹ್ಯಾಗಿದೆ ಬೆಂಗಳೂರ ಭಾರಿ ಜೋರು ಟ್ರಾಫ಼ಿಕ್ಕು
ಅಯ್ಯೋ! ಮಾಮೂಲಿದ್ದ ರೋಡಿಗೆ ಓಡಿ ಬಂತು ಪುಷ್ಪಕ್ಕು

ಬಿ.ಡಿ.ಎ. ಸೈಟಿನ್ ರೇಟು ಈಗ ಎಷ್ಟಿದೆ?
ಉಫ಼್! ಎಂಪೈರ್ ಸ್ಟೇಟ್ ಬಿಲ್ಡಿಂಗ್‍ಗಿಂತ ಎತ್ತರಕ್ಕೋಗಿದೆ

ಹೇಗಿತ್ತು ನಮ್ಮೂರು
ಹೇಗಿತ್ತು ನಮ್ ಕೇರಿ
ಹೇಗಿತ್ತು ನಮ್ ಬಾಲ್ಯ
ಹೇಗಿತ್ತು ಹುಡುಗಾಟ
ಹೇಗಿದ್ರು ನಮ್ಮ ಜನ
ಈಗ ಹ್ಯಾಗಿದ್ದಾರೋ ನಮ್ಮೂರ ಜನ
ಈಗ ಹ್ಯಾಗಿದ್ದಾರೋ ನಮ್ಮೂರ ಜನ

ಮಾರಮ್ಮನ ಜಾತ್ರೇಲಿ ಮಂಡಕ್ಕಿ ತಿಂದದ್ದು
ಎಮ್ಮೆ ಹಿಂಡಿನ್ ಜೊತೇಲಿ ನಾವೂನೂ ಮಿಂದದ್ದು
ಕಂಬ್ಳಿ ಪರ್ದೆ ಕಟ್ಟಿ ನಾವು ನಾಟ್ಕ ಆಡಿದ್ದು
ಕಾಳಜ್ಜ ಕೋಲ್ ತಂದಾಗ ಎಲ್ಲಾ ಬಿಟ್ಟು ಓಡಿದ್ದು
ಹೇಗಿತ್ತು ನೆಕ್ಕಿದ ಉಪ್ಪು ಹುಣಿಸೇ ಹಣ್ಣು
ಕದ್ದು ಮುಚ್ಚಿ ತಿಂದ ಕಾಯಿ ಸೀಬೇಹಣ್ಣು
ಬೇಲಿ ಹಾರಿ ಬಿದ್ದು ಮಂಡಿ ತರಚಿದ ಗಾಯ
ತುಂಬೆ ರಸ ಹಿಂಡಿದಾಗ ಘಳಿಗೇಲಿ ಮಾಯ

ಹೀಗಿದೆ ನಮ್ ದೇಶ
ಹೀಗಿದೆ ನಮ್ ಭಾಷೆ
ಹೀಗಿದೆ ಕನ್ನಡ
ಹೀಗಿದೆ ಕರ್ನಾಟಕ
ಹೀಗಿದ್ದಾರೆ ನಮ್ಮ ಜನ
ಈಗ್ಲೂ ಹಾಗೆ ಇದ್ದಾರೆ ಕನ್ನಡ ಜನ
ಈಗ್ಲೂ ಹಾಗೆ ಇದ್ದಾರೆ ನಮ್ ಕನ್ನಡ ಜನ
ಈಗ್ಲೂ ಹಾಗೆ ಇದ್ದಾರೆ ನಮ್ ಕನ್ನಡ ಜನಾ.....!!!

Read rest of entry

ನೂರೂ ಜನ್ಮಕೂ ನೂರಾರೂ ಜನ್ಮಕೂ ಅಮೇರಿಕಾ! ಅಮೇರಿಕಾ nuru janmaku nuraaru janmaku song lyrics from america america

ನೂರೂ ಜನ್ಮಕೂ ನೂರಾರೂ ಜನ್ಮಕೂ ಅಮೇರಿಕಾ! ಅಮೇರಿಕಾ nuru janmaku nuraaru janmaku song lyrics from america america

ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋಮೂರ್ತಿ
ಹಾಡಿದವರು : ರಾಜೇಶ್, ಸಂಗೀತ

ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ
ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ
ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ

ನೂರೂ ಜನ್ಮಕೂ...

Read rest of entry

ಯಾವ ಮೋಹನ ಮುರಳಿ ಕರೆಯಿತು ಅಮೇರಿಕಾ! ಅಮೇರಿಕಾ yaava mohana murali kareyito song lyrics from america america

ಯಾವ ಮೋಹನ ಮುರಳಿ ಕರೆಯಿತು ಅಮೇರಿಕಾ! ಅಮೇರಿಕಾ yaava mohana murali kareyito song lyrics from america america

ಸಾಹಿತ್ಯ: ಗೋಪಾಲ ಕೃಷ್ಣ ಆಡಿಗ
ಸಂಗೀತ : ಮನೋಮೂರ್ತಿ
ಹಾಡಿರುವವರು: ರಾಜು ಅನಂತಸ್ವಾಮಿ, ಸಂಗೀತ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ

ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ

ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

Read rest of entry

ಮನೆ ಕಟ್ಟಿ ನೋಡು ಅಮೃತಧಾರೆ mane katti nodu song lyrics from amrutadhare

ಮನೆ ಕಟ್ಟಿ ನೋಡು ಅಮೃತಧಾರೆ mane katti nodu song lyrics from amrutadhare

ಸಂಗೀತ: ಮನೊ ಮೂರ್ತಿ

ಮನೆ ಕಟ್ಟಿ ನೋಡು ಓಮ್ಮೆ ಮನೆ ಕಟ್ಟಿ ನೊಡು
ಮದುವೆ ಮಾಡಿ ನೋಡು ಓಂದು ಮದುವೆ ಮಾಡಿ ನೊಡು
ಮದುವೆ ಆಗಿ ಮನೆ ಕಟ್ಟೊದು ಏಲ್ಲಾ ಜನರ ಪಾಡು
ಮಹಾನಗರದಲ್ಲಿ ಒಂದು ಮನೆ ಕಟ್ಟೀ ನೊಡು

ತುಂಡು ಭೂಮಿಗಿಲ್ಲಿ ಚಿನ್ನಕ್ಕಿಂತ ರೇಟು ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟು
ಲಕ್ಷ ಕೊಟ್ರು ಇಲ್ಲ ೩೦-೪೦ ಸೈಟು ತೂರಿ ಬಂತು ಅಂಡರ್ ವರ್ಡ್ ನ ಗುಂಡಿನೇಟು ||ಮನೆ ಕಟ್ಟಿ||

ಸಾಲ ಸೋಲ ಮಾಡಿ ಸೈಟು ಕೊಳ್ಳುತ್ತಾರೆ ಕಷ್ಟ ಪಟ್ಟು ಕಂತು ಗಿಂತು ಕಟ್ಟುತ್ತಾರೆ
ನಕಲಿ ಕಾಗದ ನಂಬಿ ಮೋಸ ಹೊಗುತ್ತಾರೆ ನೆತ್ತಿ ಮೇಲೆ ಸೂರಿಗಾಗಿ ಹುಡುಕುತ್ತಾರೆ ||ಮನೆ ಕಟ್ಟಿ||

ಮಿಡ್ಲ್ ಕ್ಲಾಸ್ ಮನೆ ಕಟ್ಟೊದ್ ಭಾರಿ ಕಷ್ಟ ಕಬ್ಬಣ ಸಿಮೆಂಟ್ ಕಳ್ಳ ಲೆಕ್ಕ ಬರಿ ನಷ್ಟ
ಜಲ್ಲಿ ಮರಳಿನಲ್ಲಿ ಹೆಚ್ಚು ತರಲೆ ಬೇಕು ಕಿಟಕಿ ಬಾಗಿಲು ನಿಲ್ಲಿಸೊ ಹೊತ್ತಿಗೆ ಸಾಕೋ ಸಾಕು ||ಮನೆ ಕಟ್ಟಿ||

Read rest of entry

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಅಮೃತಧಾರೆ huduga huduga song lyrics from amrutadhare

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಅಮೃತಧಾರೆ huduga huduga song lyrics from amrutadhare

ಸಂಗೀತ: ಮನೊ ಮೂರ್ತಿ

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದುಮಾಡೊಕು ಕಂಜೂಸು ಬುದ್ದಿ ಬೇಕಾ?
ಹನಿಮೂನಲ್ಲು ದ್ಯಾನ ಏಕಾಂತದಲ್ಲೂ ಮೌನ
ಏನೊ ಚಂದ ಹತ್ತಿರ ಬಾ ಹುಡುಗ

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೋ ನನ್ನನ್ನ
ಚುಮುಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ್ನ
ಕತ್ತಲೆ ಒಳಗೆ ಕಣ್ಣಾಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ್ನ
ಉರುಳಿಸು ಬಾರೊ ಕೆರಳಿಸು ಬಾರೊ ಅರಳಿಸು ಬಾರೊ ನನ್ನನ್ನ |ಹುಡುಗ|

show me love show me life show me everything in life
take me on a holiday show me something everyday
make me smile and make me smile make me smile for a while
make my dreams come to live show me how you love ur wife

ಗಾಳಿಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮದುವನು ಹೀರಿ ದಾಹವ ನೀಗಿ ಸುಕಿಸೋಣ
ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಏಳೆಯೋಣ
ಮದುವೆಯು ಆಯ್ತು ಮನೆ ಒಂದಾಯ್ತು ಮುದ್ದಿನ ಮಗುವನು ಪಡೆಯೋಣ |ಹುಡುಗ|

Read rest of entry

ಗೆಳತಿ ಗೆಳತಿ ಅಮೃತಧಾರೆ gelathi gelathi song lyrics from amrutadhare

ಗೆಳತಿ ಗೆಳತಿ ಅಮೃತಧಾರೆ gelathi gelathi song lyrics from amrutadhare

ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ
ಸಂಗೀತ : ಮನೋಮೂರ್ತಿ
ಗಾಯನ : ರಾಜೇಶ್ ಮತ್ತು ನಂದಿತಾ

ಗಂಡು : ಗೆಳತಿ ಗೆಳತಿ
ಕ್ಷೇಮವೆ ಸೌಖ್ಯವೆ
ಬಾಳು ಪೂರ್ಣವಾಯಿತೆ
ಜೀವ ಧನ್ಯವಾಯಿತೆ

ಹೆಣ್ಣು : ಗೆಳೆಯ ಗೆಳೆಯ
ಬಾಳಿನ ಯಾತ್ರೆಯು
ದೂರದ ದಿಗಂತಕೆ
ದಿವ್ಯವಾಗಿ ಸಾಗಲಿ
ಗೆಳೆಯ

ಗಂಡು :ಜೀವವನ್ನು ತೇಯುವೆ
ಹೂವಿನಂತೆ ಹಾಸುವೆ
ನೋಯದಂತೆ ಕಾಯುವೆ

ಹೆಣ್ಣು : ನಾಳೆ ಎಂಬ ಮಿಥ್ಯೆಯು
ತಳೆದು ದೂರ ನಿದ್ರೆಯೊ
ಪ್ರೀತಿ ಒಂದೆ ಸತ್ಯವೊ

ಗಂಡು : ಗೆಳತಿ ಗೆಳತಿ
ಕ್ಷೇಮವೆ ಸೌಕ್ಯವೆ
ಬಾಳು ಪೂರ್ಣವಾಯಿತೆ
ಜೀವ ಧನ್ಯವಾಯಿತೆ

ಹೆಣ್ಣು : ಗೆಳೆಯ ಗೆಳೆಯ
ಬಾಳಿನ ಯಾತ್ರೆಯು
ದೂರದ ದಿಗಂತಕೆ
ದಿವ್ಯವಾಗಿ ಸಾಗಲಿ
ಗೆಳೆಯ

Read rest of entry

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ ಅಮೃತಧಾರೆ nii amrutadhare song lyrics from amrutadhare

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ ಅಮೃತಧಾರೆ nii amrutadhare song lyrics from amrutadhare

ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ
ಸಂಗೀತ : ಮನೋಮೂರ್ತಿ
ಗಾಯನ : ಹರೀಶ್ ರಾಘವೇಂದ್ರ ಮತ್ತು ಸುಪ್ರಿಯಾ ಆಚಾರ್ಯ

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕೂ ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ
ಹೇ ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಹೇ ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ....

ನೆನಪಿದೆಯೆ ಮೊದಲಾ ನೋಟ
ನೆನಪಿದೆಯೆ ಮೊದಲಾ ಸ್ಪರ್ಶ
ನೆನಪಿದೆಯೆ ಮತ್ತನು ತಂದಾ ಆ ಮೊದಲ ಚುಂಬನಾ....
ನೆನಪಿದೆಯೆ ಮೊದಲಾ ಕನಸು
ನೆನಪಿದೆಯೆ ಮೊದಲಾ ಮುನಿಸು
ನೆನಪಿದೆಯೆ ಕಂಬನಿ ತುಂಬಿ..ನೀನಿತ್ತ ಸಾಂತ್ವನ...
ನೀನಿಲ್ಲದೆ ನಾ ಹೇಗೆ ಬಾಳಲೀ..................{ಪಲ್ಲವಿ}

ನೆನಪಿದೆಯೆ ಮೊದಲಾ ಸರಸ
ನೆನಪಿದೆಯೆ ಮೊದಲಾ ವಿರಸ
ನೆನಪಿದೆಯೆ ಮೊದಲು ತಂದಾ ಸಂಭ್ರಮದ ಕಾಣಿಕೆ
ನೆನಪಿದೆಯೆ ಮೊದಲಾ ಕವನ
ನೆನಪಿದೆಯೆ ಮೊದಲಾ ಪಯಣ
ನೆನಪಿದೆಯೆ ಮೊದಲಾ ಮಿಲನ..ಭರವಸೆಯ ಆಸರೆ
ನೀನಿಲ್ಲದೆ ನಾ ಹೇಗೆ ಬಾಳಲೀ................{ಪಲ್ಲವಿ}

Read rest of entry

ಈ ನನ್ನ ಕಣ್ಣಾಣೆ ಅಭಿ Ee nanna kannane song lyrics from abhi

ಈ ನನ್ನ ಕಣ್ಣಾಣೆ ಅಭಿ Ee nanna kannane song lyrics from abhi

ಚಿತ್ರ: ಅಭಿ
ಹಾಡಿರುವವರು: ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್
ಸಾಹಿತ್ಯ: ಕೆ.ಕಲ್ಯಾಣ್
ಸಂಗೀತ: ಗುರುಕಿರಣ್

ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ
ಈ ಪ್ರೀತಿ, ನೀ ನನ್ನ ಪ್ರಾಣ ಕಣೆ

ನಂಗು ನಿಂಗು ಇನ್ನು ಹೊಸದು ಇಂಥ ಅನುಭವ
ಕಂಡು ಕಂಡು ಎದೆಯ ಒಳಗೆ ಏನೊ ಕಲರವ
ಸದಾ ಸದಾ ವಯ್ಯಾರದ ಪದ ಪದ ಬೆಸೆದಿದೆ
ಹೊಸ ಹೊಸ ಶೃಂಗಾರದ ರಸ ರಾಗ ಲಹರಿಯ ಹರಿಸುತ್ತಿದೆ
ಓ ಒಲವೆ ಒಲವೆಂಬ ಒಲವೆನ್ನಿರಿ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ

ಪ್ರೀತಿ ಒಂದು ಗಾಳಿಯ ಹಾಗೆ ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ ನಿಂತ ನೀರಲ್ಲ
ಅದು ಒಂದು ಜ್ಯೋತಿಯ ಹಾಗೆ ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ ನಿರಂತರ ಈ ಪ್ರೇಮ ಸ್ವರ
ಈ ಪ್ರೀತಿ ಆಕಾಶಕೂ ಎತ್ತರ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೇ

Read rest of entry

ವಿಧಿ ಬರಹ ಅಭಿ vidi baraha song lyrics from abhi

ವಿಧಿ ಬರಹ ಅಭಿ vidi baraha song lyrics from abhi

ಚಿತ್ರ: ಅಭಿ
ಸಂಗೀತ: ಗುರುಕಿರಣ್
ಹಾಡಿರುವವರು: ಡಾ|ರಾಜ್ ಕುಮಾರ್
ಸಾಹಿತ್ಯ: ಕವಿರಾಜ್

ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ಹಸಿರಾಗೊ ಪ್ರೇಮ ಕಥೆಗೆ
ವಿಷವಾಗೊ ಜಗವು ಕ್ರೂರ
ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಏಕೊ ಇಂಥ ಸಮರ

ನೀನೆ ಜೀವ ನೀನೆ ಭಾವ ಅನ್ನೋ ಮಾತಿಗೆ
ಮಾತು ನೀಡಿ ಮನಸೂ ನೀಡಿ ಆಡೋ ಪ್ರೀತಿಗೆ
ಸನಿಹ ವಿರಹ ಕಲಹ ಹಣೆಯ ಬರಹ

ನೋವು ನಲಿವು ಸೋಲು ಗೆಲುವು ಉಂಟು ಪ್ರೀತಿಗೆ
ಯಾರೊ ಬಂಧು ಯಾರೊ ಬಳಗ ಬಾಳ ಪಯಣಕೆ
ಕನಸೋ ಭ್ರಮೆಯೋ ಜಗವೇ ಕುರುಡಾಗಿದೆ

Read rest of entry

ಪಣವಿಡು ಅಪ್ಪು panavidu song lyrics from appu

ಪಣವಿಡು ಅಪ್ಪು panavidu song lyrics from appu

ಚಿತ್ರ: ಅಪ್ಪು
ಸಾಹಿತ್ಯ: ಹಂಸಲೇಖ
ಸಂಗೀತ: ಗುರುಕಿರಣ್
ಹಾಡಿರುವವರು: ಡಾ|ರಾಜ್‍ಕುಮಾರ್

ಪಣವಿಡು ಪಣವಿಡು ನಿನ್ನ ಪ್ರಾಣವ
ಪಡೆದುಕೋ ಪಡೆದುಕೋ ನಿನ್ನ ಪ್ರೇಮವ
ಈ ಜಗತ್ತೆ ನಿನ್ನಂತೆ ಬರುತ್ತೆ ಹೋಗು
ನಿಯತ್ತೆ ನಿನ್ನನ್ನ ಕಾಯುತ್ತೆ

ಆ ವ್ಯೂಹನ ನೀ ಭೇಧಿಸಲು ಬಾ ಮಿಂಚಾಗಿ ಬಾ
ಆ ಕೋಟೆನ ನೀ ಮುರಿಯೋಕೆ ಬಾ ಸಿಡಿಲಾಗಿ ಬಾ
ತಂತ್ರ ಷಡ್ಯಂತ್ರ ಸೀಳಿ ಸಾಧಿಸೋ
ಸೋಲದ ಆತ್ಮದ ಆಯುಧ ನೀನು
ಕೀರ್ತಿಯ ಮೂರುತಿ ಆಗುವೆ ಬಾ

ಆ ಬೆಳಕನ್ನೆ ತರುವಾಗ ಈ ಇರುಳೇನು ಬಾ
ಆ ಒಲವನ್ನೆ ತರುವಾಗ ಈ ವಿಷವೇನು ಬಾ
ಪ್ರಾಣ ನಮ್ಮದಲ್ಲ ಪ್ರೀತಿ ನಮ್ಮದೋ
ಪ್ರೀತಿಗು ದ್ವೇಷಕು ಆಗದು ಸ್ನೇಹ
ಶೋಧನೆ ಸಾಧನೆ ಕೂಡಿದೆ ಬಾ


Read rest of entry

ಎಲ್ಲಿಂದ ಆರಂಭವೋ ಅಪ್ಪು ellinda aarambavo song lyrics from appu

ಎಲ್ಲಿಂದ ಆರಂಭವೋ ಅಪ್ಪು ellinda aarambavo song lyrics from appu

ಚಿತ್ರ: ಅಪ್ಪು
ಸಾಹಿತ್ಯ: ಹಂಸಲೇಖ
ಸಂಗೀತ: ಗುರುಕಿರಣ್
ಹಾಡಿರುವವರು: ಕೆ.ಎಸ್.ಚಿತ್ರ, ಉದಿತ್ ನಾರಾಯಣ್

ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆ ನಾ

ಬಾ ಎಂದಿತು ಈ ಯೌವ್ವನ ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು ಮೈ ಎಲ್ಲವೂ ಆಲಾಪನ
ಈ ಕಲರವ ಈ ಅನುಭವ ಹೇಗಾಯ್ತೊ ಏನೊ ಕಾಣೆ ನಾ

ಬೇಲೂರಿನ ಆ ಗೊಂಬೆಗು, ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ ಹೇಗಾಯ್ತೊ ಏನೊ ಕಾಣೆ ನಾ

Read rest of entry

ಆ ದೇವರ ಹಾಡಿದು ಅಪ್ಪು AA devara haadidu song lyrics from appu

ಆ ದೇವರ ಹಾಡಿದು ಅಪ್ಪು AA devara haadidu song lyrics from appu

ಚಿತ್ರ: ಅಪ್ಪು
ಸಾಹಿತ್ಯ: ಹಂಸಲೇಖ
ಸಂಗೀತ: ಗುರುಕಿರಣ್
ಹಾಡಿರುವವರು: ಡಾ|ರಾಜ್‍ಕುಮಾರ್

ಆ ದೇವರ ಹಾಡಿದು ನಮ್ಮಂತೆ ಎಂದೂ ಇರದು
ನಗುವಿರಲಿ ಅಳುವಿರಲಿ ಅವನಂತೆಯೇ ನಡೆವುದು

ನೋವಲ್ಲು ನೂರು ಸುಖವುಂಟು ಇಲ್ಲಿ
ಸುಖದಲ್ಲು ನೂರು ನೋವುಂಟು ಇಲ್ಲಿ
ಈ ಕಾಲದ ಕೈಯ್ಯಲ್ಲಿರೋ ಗಡಿಯಾರವೇ ನಾನು ನೀನು
ನಡೆಸೋನದೆ ಕೊನೆಯ ಮಾತು

ಆ ದೇವರ ಹಾಡಿದು ಅದು ಎಂದೋ ಬರೆದಾಗಿಹುದು
ಉಸಿರಿನಲೇ ಹೃದಯಗಳು ಉಯ್ಯಾಲೆಯಾಗಿರುವುದು

ಕ್ಷಣಕೊಮ್ಮೆ ಸನಿಹ ಕ್ಷಣಕೊಮ್ಮೆ ವಿರಹ
ಹಣೆಮೇಲೆ ಕುಳಿತ ಆ ವಿಧಿಯ ಬರಹ
ಈ ಭೂಮಿಯೇ ಸುರ ವೀಣೆಯು ಸ್ವರತಂತಿಯೇ ನಾನು ನೀನು
ನುಡಿಸೋನದೇ ಕೊನೆಯ ಹಾಡು

ಆ ದೇವರ ಹಾಡಿದು ಅದು ಎಂದೂ ಬದಲಾಗದು
ಭರವಸೆಯೆ ಹೊಸ ಬೆಳಕು ನಿಜ ಪ್ರೀತಿ ನಿಯಮ ಇದು

Read rest of entry

ತಾಲಿಬಾನ್ ಅಲ್ಲ ಅಲ್ಲ ಅಪ್ಪು taaliban alla alla song lyrics from appu

ತಾಲಿಬಾನ್ ಅಲ್ಲ ಅಲ್ಲ ಅಪ್ಪು taaliban alla alla song lyrics from appu

ಚಿತ್ರ: ಅಪ್ಪು
ಸಾಹಿತ್ಯ: ಉಪೇಂದ್ರ
ಸಂಗೀತ: ಗುರುಕಿರಣ್
ಹಾಡಿರುವವರು: ಪುನೀತ್ ರಾಜ್‍ಕುಮಾರ್

ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ
ಅವ್ನ್ ಹೊಡೆದದ್ ಬಿಳ್ಡಿಂಗ್ಸ್‍ಗೆ
ನಾನ್ ಹೊಡೆದದ್ ಹೃದಯಕ್ಕೆ
Misunderstanding ಬೇಡ

ಪಾರ್ಲಿಮೆಂಟ್ ಹೃದಯಕ್ಕೆ
ನಾ ಮಾಡ್ದೆ ಅಟ್ಯಾಕು
ಪ್ರೇಮ ನ ಹೈಜಾಕು
ಮಾಡೋಕೆ ಈ ಟ್ರಿಕ್ಕು
ಆಗ್ಬೇಡ್ವೆ ನೀ ಶಾಕು
ನನ್ ಹಾರ್ಟು ಆಟಂ ಬಾಂಬ್
ನಾನೊಬ್ಬ ಹ್ಯೂಮನ್ ಬಾಂಬ್
ಆದ್ರೂನು ಟೆರರಿಸ್ಟು ನಾನಲ್ಲ ಅದೆ ಟ್ವಿಸ್ಟು
ನಾನೊಬ್ಬ ಪ್ರೇಮಿಸ್ಟು

ಎಷ್ಟ್ ಬಾಯ್‍ಬಡ್ಕೊಂಡ್ರೂನು
ಎಸ್ಕೇಪು ಲ್ಯಾಡನ್‍ನ್ನು
ನನ್ ಮಾತ್ ಮೆಷಿನ್ ಗನ್ನು
ನನ್ ನೋಟ ಸನ್ ಗನ್ನು
ಬಿಡೊದಿಲ್ವೆ ನಿನ್ನನ್ನು
ನೀ ನನ್ನ ಕಾಶ್ಮೀರ
ಬಿಡೊ ಮಾತು ಬಲು ದೂರ
ಪ್ರಾಬ್ಲಮ್ಸ್ ಇರ್ಲಿ ನೂರು
ಹಾಕ್ತೀನ್ ಸವಾ ಸೇರು
ವಾರ್ ಆದ್ರು ಡೋಂಟ್ ಕೇರು

Read rest of entry

ಬಾರೆ ಬಾರೆ ಅಪ್ಪು baare baare song lyrics from appu

ಬಾರೆ ಬಾರೆ ಅಪ್ಪು baare baare song lyrics from appu

ಚಿತ್ರ: ಅಪ್ಪು
ಸಾಹಿತ್ಯ: ಹಂಸಲೇಖ
ಸಂಗೀತ: ಗುರುಕಿರಣ್
ಹಾಡಿರುವವರು: ಕೆ.ಎಸ್.ಚಿತ್ರ, ಉದಿತ್ ನಾರಾಯಣ್

ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬಾ
ಗಟ್ಟಿಮೇಳ ಚೆಚ್ಚುತಿರಲು ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೊ ಬಾರೊ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ ಸಟ್ಟಾಯಿತೀಗ ಬಾ
ಗಟ್ಟಿಮೇಳ ಚೆಚ್ಚುತಿರಲು ತಾಳಿ ಕಟ್ಟಲು ಬಾರೊ ಬಾರೊ ಹಸೆಗೆ

ನೀ ನನ್ನ ಬ್ಯೂಟಿ ಏಂಜಲು ಲವ್ವೊಂದೆ ನಮ್ಮ ಬೈಬಲ್ಲು
ಮದುವೆಯ ಬೆಲ್ಲು ಮೊಳಗಿರಲು ಬೆರಳಿಗೆ ರಿಂಗು ತೊಡಿಸಿರಲು
ಮುತ್ತಂಥ ಜೋಡಿ ನಮ್ಮದು ಈ ಪ್ರೀತೆ ಎಂದು ಸೋಲದು
ಎಲ್ಲಿ ಹೇಗೆ ಇದ್ದರು ನಾನು ನೀನು ಇಬ್ಬರು ಮೇಡ್ ಫಾರ್ ಈಚ್ ಅದರ್ ಏ

ಲೈಫಲ್ಲಿ ಲವ್ವೆ ನಮ್ರತ, ಜೀವನ್ ಮೆ ಪ್ಯಾರ್ ಶಾಶ್ವತ
ಹೃದಯದ ಭಾವ ಬೆರೆತಿರಲು ಒಲವಿನ ಜ್ಯೋತಿ ಬೆಳಗಿರಲು
ಪ್ರೇಮಕ್ಕೆ ಮೇರೆ ಇಲ್ಲವೊ ಪ್ರೀತೀನೆ ಸೃಷ್ಟಿ ಮೂಲವೊ
ಭಾಷೆ ಬೇರೆಯಾದರೂ ಜಾತಿ ಏನೆ ಇದ್ದರು ಪ್ರೇಮವೂ ಒಂದೆ

Read rest of entry

ಜಾಲಿ ಗೋ ಜಾಲಿ ಗೋ ಅಪ್ಪು jaaligo jaaligo song lyrics from appu

ಜಾಲಿ ಗೋ ಜಾಲಿ ಗೋ ಅಪ್ಪು jaaligo jaaligo song lyrics from appu

ಚಿತ್ರ: ಅಪ್ಪು
ಸಾಹಿತ್ಯ: ಹಂಸಲೇಖ
ಸಂಗೀತ: ಗುರುಕಿರಣ್
ಹಾಡಿರುವವರು: ಶಂಕರ್ ಮಹಾದೇವನ್

ಜಾಲಿ ಗೋ ಜಾಲಿ ಗೋ ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ ಹ್ಯಾಪ್ಪಿ ಹ್ಯಾಪ್ಪಿ ಗೋ
ದಂಡಿಗೋ ದಾಳಿಗೋ ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ ಈಸಿ ಈಸಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸು
ತೋಚಿದ್ದು ಮಾಡುತ್ತ ಈ ಜನ್ಮ ಉಢಾಯಿಸು

ನಾವಿಲ್ಲಿ ಹುಟ್ಟಿದ್ದು ಯಾಕೇಂತ ಕೇಳಿದ್ರೆ ಹೇಳ್ತಾರೆ ವೇದಾಂತ
ಯಾರಿಗೆ ಬೇಕು ಆ ರಾಧ್ದಾಂತ ನಮ್ದೆಲ್ಲ ಏನಿದ್ರು ಸುಖಾಂತ
ದಾರ ಇದ್ರೆ ಈ ಪಟ ಗಾಳೀಲಿ ಹಾರಿದ್ದಷ್ಟೆ ಮಜ

ಮನಸಿಗೆ ತೋಚಿದ್ದು ಮಾಡೋದು ಮೂಗಿನ ನೇರಕ್ಕೆ ನಡೆಯೋದು
ಜೀವನವೇ ಒಂದು ಹೊಡೆದಾಟ ಅನ್ನೋದೆ ಆದ್ರೆ ಹೊಡೆದಾಡೋದು
ನುಗ್ಗೋದೊಂದೆ ಈ ವಯಸ್ಸಿನಾ ಗುರಿ ನಾವ್ ಮಾಡಿದ್ದೇ ಸರಿ

Read rest of entry

ಅರಳಿದೆ ತನೂ ಮನಾ ನೋಡುತ ನಿನ್ನಾ ಅಪೂರ್ವ ಸಂಗಮ aralide tanu manaa song lyrics from apoorva sangama

ಅರಳಿದೆ ತನೂ ಮನಾ ನೋಡುತ ನಿನ್ನಾ ಅಪೂರ್ವ ಸಂಗಮ aralide tanu manaa song lyrics from apoorva sangama
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ.ರಾಜ್ ಕುಮಾರ್ ಮತ್ತು ಎಸ್.ಜಾನಕಿ

ಅರಳಿದೆ ತನೂ ಮನಾ ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ ಕಂಡೆನು ನಾ..೨..ಅರಳಿದೆ...

ಚಲಿಸುವ ತಂಗಾಳಿಯೂ ಚೆಲುವೇ ನಿನ್ನಾ ನೋಡೀ
ನಲಿಯುತ ಓಡಿದೆ ಮುಂಗುರುಳಾ ಹಿಡಿದೂ ಆಡೀ
ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನಾ ಅಂದಾ ನೋಡೀ
ಸುಖಾ ತರುತಿದೇ ಹಿತಾ ಬಯಸಿದೇ ಚಲುವಾ...ಅರಳಿದೆ...

ಎದೆಯಲೀ ಹೊಮ್ಮೀ ಹೊಮ್ಮೀ ನೂರೂ ಬಯಕೇ ಈಗ
ಕೆಣಕಲು ಸೋತೆನು ನನ್ನಿನಿಯಾ ನಿನ್ನಾ ನೋಡೀ
ಪ್ರಣಯದ ಸಂಗೀತದ ಇಂಪೂ ಕಿವಿಯಾ ತುಂಬೀ
ಕನಸನು ಕಂಡೆನು ಸಂಗಾತಿಯೇ ನಿನ್ನಾ ಸೇರೀ
ಇನ್ನೂ ಬಿಡುವೆನೇ ನನ್ನೇ ಕೊಡುವೆನಾ ಚಲುವೇ...ಅರಳಿದೆ..

Read rest of entry

ಸಾರ್ಥಕವಾಯಿತು ಅನುರಾಗ ಅರಳಿತು saarthakavaayitu song lyrics from anuraaga aralitu

ಸಾರ್ಥಕವಾಯಿತು ಅನುರಾಗ ಅರಳಿತು saarthakavaayitu song lyrics from anuraaga aralitu

ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ ರಾಜ್

ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು

ನಿನ್ನೀ ಕ೦ಗಳು ನೈದಿಲೆಯ೦ತೆ
ಸು೦ದರ ಮೊಗವು ತಾವರೆಯ೦ತೆ
ಮು೦ಗುರುಳೆನೋ ದು೦ಬಿಗಳ೦ತೆ
ಒಳಗೇನಿದೆಯೊ ಎ೦ಬುದು ಚಿ೦ತೆ

ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು

ಆ ಸಾವಿತ್ರಿ ನಿನ್ನ ನೋಡಿದರೆ ಎದೆಯೇ ಓಡೆದು ಸಾಯುತಳಿದ್ದಳು
ಪತಿ ಭಕ್ತಿಯಲಿ ನಿನಗೆಣೆಯಿಲ್ಲ ಓ ಕುಲ ನಾರಿ ಕುಬೇರನ ಕುವರಿ

ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು

ಕವಿ ವಾಲ್ಮೀಕಿ ಇದ್ದರೆ ಈಗ ಹೊಸ ಕಾವ್ಯವನೆ ಬರೆಯುತಲಿದ್ದ
ಭಾರತ ಬರೆದ ವ್ಯಾಸರು ನಿನ್ನ ಕ೦ಡರೆ ಕಾಡಿಗೆ ಓಡುತಲಿದ್ದರು

ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು

Read rest of entry

ಬೀಸದಿರು ತಂಗಾಳಿ ಅನುರಾಗ ಅರಳಿತು bisadiru tangaali song lyrics from anuraaga aralitu

ಬೀಸದಿರು ತಂಗಾಳಿ ಅನುರಾಗ ಅರಳಿತು bisadiru tangaali song lyrics from anuraaga aralitu

ಚಿತ್ರ: ಅನುರಾಗ ಅರಳಿತು (1988)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ವಾಣಿ ಜಯರಾಂ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು

ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು

ಹೂವಂಥ ಈ ಮೆತ್ತೆ ಇಂದು
ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ
ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿಂದು ಸಾಕು ಸಾಕೆಂದು
ನಾನಿನ್ದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ
(ಉಶ್..)
ಚಳಿ ತುಂಬುತಲಿ ಈ ರಾತ್ರಿಯಲಿ
ಸಂಗಾತಿ ಎಲ್ಲೆಂದು ಕೇಳುತ್ತ ಕಾಡುತ್ತಾ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು

Read rest of entry

O mallige song lyrics from anuraaga sangama

O mallige song lyrics from anuraaga sangama

o mallige, ninnondige, naanillavee sadaa sadaa sadaaa
e kangalu, manjaadare, na thaalenuu baya bidu sadaaa
ninna noou nanagirali, nemmadi savi ninagirali, sadaaa kaaauveee....

o mallige, ninnondige, naanillavee, sadaa sadaa sadaaa....

hoodorella olleyavaru, haraso hiriyavaruu
avara saviya nenapu naave, ulida kiriyaruu
ninna kooda nerala haage, eruve haanu andu heege, onti alla neeee...

o mallige, ninnondige, naanillavee, sadaa sadaa sadaaa....

naale namma munde ehudu, daari kaauthaaa
dukka noou andu jothege, eradu saashwathaaa
baravaseya belli belaku, huduki munde saagabeku
dairya thaalutha...

o maliige, ninnondige naanillave sadaa sadaa sadaaa....
ninna nou nanagirali
nemmadi savi ninagirali
sadaaaa kauuve...
o maliige, ninnondige naanillavee, sadaa sadaa sadaaa...

Read rest of entry

ಅಹಾಗೆ ಪ್ರೇಮಿ ಓಹೋ ಅಣ್ಣಯ್ಯ ahaage premi oho annayya song lyrics from annayya

ಅಹಾಗೆ ಪ್ರೇಮಿ ಓಹೋ ಅಣ್ಣಯ್ಯ ahaage premi oho annayya song lyrics from annayya
ಚಿತ್ರ: ಅಣ್ಣಯ್ಯ
ಹಾಡು: ಅಹಾಗೆ ಪ್ರೇಮಿ ಓಹೋ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ, ಚಿತ್ರ


ಅಹ ಅಹ ಅಹ.....
ಓಹೋ ಓಹೋ ಓಹೋ.....

ಅಹ.ಅಹ...
ಓಹೋ.ಓಹೋ...

ಅಹ.ಅಹ...
ಓಹೋ.ಓಹೋ...

ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ

ಅಹ ಓಹೋ..ಜೊತೇಲಿ ಸ್ನೇಹವೊ

ಅಹ ಅಹ
ಓಹೋ ಓಹೋ

ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ

ಅಹ ಅಹ
ಓಹೋ ಓಹೋ


ಆನಂದ ಸೂಚಿ ಆಹ..ಆಶ್ಚರ್ಯ ಸೂಚಿ ಓಹೋ
ಈ ದಿನ ಆನಂದ..ಆಶ್ಚರ್ಯ ಹಾಡಲು ಬಯಸುತಿದೆ
ಹಾಡಿನ ನೆಪದಲ್ಲಿ ವಧುವರರಾಗುತಿವೆ

ಆಹಾಗೆ ಇಲ್ಲ ಭಾಷೆ..ಓಹೋಗೆ ಇಲ್ಲ ಜಾತಿ
ಇಬ್ಬರು ಕಾಮವನು..ಪ್ರೇಮವನು..ಹೊರುವರು ಹೆಗಲಲ್ಲಿ
ಇಬ್ಬರ ಭಾವನೆಯು ಒಂದೇ ಜಗದಲ್ಲಿ

ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ

ಸಿಹಿ ಸಿಹಿ
ಕಹಿ ಕಹಿ

ಸಿಹಿ ಸಿಹಿ
ಕಹಿ ಕಹಿ

ಈ ಬಾಳು ಬೇವು ಬೆಲ್ಲವು

ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ

ಅಹ ಓಹೋ..ಜೊತೇಲಿ ಸ್ನೇಹವೊ

ಅಹ ಅಹ
ಓಹೋ ಓಹೋ

ಕಣ್ಣಲ್ಲಿ ಇಟ್ಟ ಕಾಮ..ಎದೆಯಲ್ಲಿ ಇಟ್ಟ ಪ್ರೇಮ
ಕಣ್ಣಿನ ಕೊಳದಲ್ಲಿ..ಮನಸನ್ನು..ಹಾಕಲು ತೋರಿಸಿದ
ಬಾಳಿಗೆ ಪ್ರೀತಿಯನು..ಪಡೆಯಲು ಸೂಚಿಸಿದ

ಮೇಲಿರುವ ದೊರೆಯು ಜಾಣ..ಹೆಗಲಲ್ಲಿ ಬಿಗಿದ ಗಾಣ
ಛೆ ಛೆ ಛೆ ಅಯ್ಯಯ್ಯೊ..ನಡುವಲ್ಲೂ..ಆಹ ಪಡಿಬೇಕು
ಉಹುಹು ಜೊತೆಯಲ್ಲು ಓಹೋ ಬರಬೇಕು

ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ

ಸಿಹಿ ಸಿಹಿ
ಕಹಿ ಕಹಿ

ಸಿಹಿ ಸಿಹಿ
ಕಹಿ ಕಹಿ

ಈ ಬಾಳು ಬೇವು ಬೆಲ್ಲವು

ಅಹ.ಅಹ...
ಓಹೋ.ಓಹೋ...

ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ

ಅಹ ಓಹೋ..ಜೊತೇಲಿ ಸ್ನೇಹವೊ

ಅಹ ಅಹ
ಓಹೋ ಓಹೋ

ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ

Read rest of entry

ಅಮ್ಮಯ್ಯ ಅಮ್ಮಯ್ಯ ಅಣ್ಣಯ್ಯ ammayya ammayya song lyrics from annayya

ಅಮ್ಮಯ್ಯ ಅಮ್ಮಯ್ಯ ಅಣ್ಣಯ್ಯ ammayya ammayya song lyrics from annayya

ಚಿತ್ರ: ಅಣ್ಣಯ್ಯ
ಸಾಹಿತ್ಯ/ಸಂಗೀತ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ

ಹಾಡು ಕೇಳಿ

ಅಮ್ಮ..ಊರೇನೆ ಅಂದರು
ನೀ ನನ್ನ ದೇವರು

ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

ಹೂವಿಗು ಹಣ್ಣಿಗು ಭೂಮಿ ದೇವರು
ನೋವಿಗು ನಲಿವಿಗು ತಾಯಿ ದೇವರು

ಈ ಜಗವೆ ...ತಾಯಿಗೆ ತೊಟ್ಟಿಲು..ನಾವೆಲ್ಲ ಮಕ್ಕಳು
ಆ ಸುರರು...ತಾಯಿಗೆ ದಾಸರು...ಮಾತಿಗೆ ತಪ್ಪರು
ಸತ್ಯಕೆ ಸಾಕ್ಷಿ..ಸುಳ್ಳಿಗೆ ಶೂಲ...ತಾಯಾಣೆ...ತಾಯಾಣೆ

ಅಮ್ಮ..ಊರೇನೆ ಅಂದರು
ನೀ ನನ್ನ ದೇವರು

ಜಗಕೆ ಮುಕ್ಕೋಟಿ ದೇವರು
ನೀ ನನ್ನ ದೇವರು

ಜ್ಞಾನಕು ದೊಡ್ಡದು ಮಣ್ಣಿನ ಋಣ
ಪ್ರಾಣಕು ದೊಡ್ಡದು ತಾಯಿಯ ಋಣ

ಓ ಜನನಿ..ಜೀವಕ್ಕೆ ಮೂಲ ನೀ...ತ್ಯಾಗಕ್ಕೆ ಕಳಷ ನೀ
ಓ ಜನನಿ..ಎಲ್ಲಕ್ಕು ಮೊದಲು ನೀ...ಪ್ರೇಮಕ್ಕೆ ಕಡಲು ನೀ

ಮಾನಕೆ ರೂಪ..ಮನಸಿಗೆ ದೀಪ
ನಿನ್ನ ಮುಖ..ನಿನ್ನ ಮುಖ

ಅಮ್ಮ..ಯಾರೇನೆ ಅಂದರು
ನೀ ನನ್ನ ದೇವರು

ಜಗಕೆ ಮುಕ್ಕೋಟಿ ದೇವರು
ನೀ ನನ್ನ ದೇವರು

ಜ್ಞಾನಕು ದೊಡ್ಡದು ಅನ್ನದ ಋಣ
ಧ್ಯಾನಕು ದೊಡ್ಡದು ಅಮ್ಮನ ಋಣ

ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ

ಹೂವಿಗು ಹಣ್ಣಿಗು ಭೂಮಿ ದೇವರು
ನೋವಿಗು ನಲಿವಿಗು ತಾಯಿ ದೇವರು

Read rest of entry

ಪ್ರೀತಿಯಲ್ಲಿ ಇರೊ ಸುಖ ಅಂಜದ ಗಂಡು pritiyalli iro sukha song lyrics from anjada gandu

ಪ್ರೀತಿಯಲ್ಲಿ ಇರೊ ಸುಖ ಅಂಜದ ಗಂಡು pritiyalli iro sukha song lyrics from anjada gandu

ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೂಂ ಅಂತಿಯಾ ಉಹೂಂ ಅಂತಿಯಾ
ಬಾ ಅಂತಿಯ ತಾ ಅಂತಿಯಾ

ಹೆ: ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ

ಹೆ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೂಂ ಅಂತಿಯಾ ಉಹೂಂ ಅಂತಿಯಾ
ಬಾ ಅಂತಿಯ ತಾ ಅಂತಿಯಾ

ಗ: ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ

ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೆ: ಹೂಂ ಅಂತಿಯಾ
ಗ: ಉಹೂಂ ಅಂತಿಯಾ
ಹೆ: ಬಾ ಅಂತಿಯಾ
ಗ: ತಾ ಅಂತಿಯಾ

ಗ: ಹೊಸದು ತೀರ ಹೊಸದು ಒಲವ ಮಿಡಿತ ಹೊಸದು
ಹೆ: ಸುಖವ ಅರ್ಥ ತಿಳಿದೆ ಬಾರೆನ್ನ ರಾಜ ಅದರ ಸೊಗಸು ಸವಿದೆ

ಗ: ಮನಸು ಆಡಿದೆ ಹಾಡಿದೆ ನಿನ್ನನು ಕೇಳಿದೆ ಎಂದು ಕಲ್ಯಾಣ?
ಹೆ: ಕನಸು ಕಣ್ಣಲ್ಲಿ ತುಂಬಿದೆ ಮೆಲ್ಲಗೆ ಹೇಳಿದೆ ಇಂದೆ ಆಗೋಣ

ಗ: ಓ ಮೈ ಲವ್...
ಹೆ: ಓ ಮೈ ಲವ್...

ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೆ: ಹೂಂ ಅಂತಿಯಾ
ಗ: ಉಹೂಂ ಅಂತಿಯಾ
ಗ: ಬಾ ಅಂತಿಯಾ
ಹೆ: ತಾ ಅಂತಿಯಾ

ಹೆ: ಮೌನದಲ್ಲಿ ಕರೆದೆ ಕರೆದು ಹೆಸರ ಬರೆದೆ
ಗ: ನೀನು ಬರೆದ ಕವನ ನನ್ನಾಣೆ ಚಿನ್ನ ಓದಿ ಓದಿ ನಲಿದೆ

ಹೆ: ಪ್ರೇಮದ ಅ ಆ ಇ ಈ ಬರೆಯಿಸಿ ಪಾಠವ ಕಲಿಸಿದೆ ನೀನೇ ಕಣ್ಣಲ್ಲಿ
ಗ: ನಿನಗೆ ಪಾಠವ ಹೇಳುವ ಸಾಹಸ ಧೈರ್ಯವ ತಂದೆ ನನ್ನಲ್ಲಿ

ಹೆ: ಐ ಲವ್ ಯೂ
ಗ: ಐ ಲವ್ ಯೂ

ಹೆ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಗ: ಹೂಂ ಅಂತಿಯಾ ಉಹೂಂ ಅಂತಿಯಾ
ಹೆ: ಬಾ ಅಂತಿಯಾ ತಾ ಅಂತಿಯಾ

ಗ: ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ

ಗ: ಪ್ರೀತಿಯಲ್ಲಿ ಇರೊ ಸುಖ ಗೊತ್ತೆ ಇರಲಿಲ್ಲ
ಹೆ: ಹೂಂ ಅಂತಿಯಾ
ಗ: ಉಹೂಂ ಅಂತಿಯಾ
ಗ: ಬಾ ಅಂತಿಯಾ
ಹೆ: ತಾ ಅಂತಿಯಾ

Read rest of entry

ಏಕೆ ಹೀಗಾಯ್ತೋ ಅಂಜದ ಗಂಡು yeke hegayto song lyrics from anjada gandu

ಏಕೆ ಹೀಗಾಯ್ತೋ ಅಂಜದ ಗಂಡು yeke hegayto song lyrics from anjada gandu

ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಬಿ.ಆರ್.ಛಾಯ

ಗಂಡು:
ಏಕೆ ಹೀಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ಏಕೆ ಹೀಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ಆ ನೋಟದಲೀ ಅದು ಏನಿದೆಯೋ..
ತುಟಿ ಅಂಚಿನಲೀ ಸವಿ ಜೇನಿದೆಯೋ...

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ನೀ ನಗುವಾಗ...ಜರತಾರಿ ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ...
ನೀ ಮುಡಿದಾಗ...ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ...

ಉಸಿರಾಟ ಮರೆತು ಹೋಯಿತು
ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಹೆಣ್ಣು:
ಏಕೆ ಹಿಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ

ಈ ಹೊಸದಾದ... ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೆ... ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ

ಈ ನಾಡಿ ನಿಂತು ಹೋಯಿತು
ನಾ ಯಾರೋ ಮರೆತು ಹೋಯಿತು
ನಿನ್ನಲಿ ನನ್ನ ಈ ಜೀವ ಸೇರಿತು

ಗಂಡು:
ಏಕೆ ಹಿಗಾಯ್ತೋ ನಾನು ಕಾಣೆನು
ಹೆಣ್ಣು:
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ಗಂಡು:
ಆ ನೋಟದಲಿ ಅದು ಏನಿದೆಯೋ..
ಹೆಣ್ಣು:
ತುಟಿ ಅಂಚಿನಲಿ ಸವಿ ಜೇನಿದೆಯೋ...
ಗಂಡು:
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಹೆಣ್ಣು:
ಜೇನು ಹೀರಿದ ದುಂಬಿಯ ಸೇರಿದೆ ನನ್ನ ಈ ಮನ

Read rest of entry

ಆಕಾರದಲ್ಲಿ ಗುಲಾಬಿ ರಂಗಿದೆ ಅಂಜದ ಗಂಡು aakaradalli gulabi rangide song lyrics from anjada gandu

ಆಕಾರದಲ್ಲಿ ಗುಲಾಬಿ ರಂಗಿದೆ ಅಂಜದ ಗಂಡು aakaradalli gulabi rangide song lyrics from anjada gandu

ಸಾಹಿತ್ಯ: ವಿ. ಮನೋಹರ್
ಸಂಗೀತ: ಹಂಸಲೇಖ
ಗಾಯನ: ಲತಾ ಹಂಸಲೇಖ

ಆಹ್... ಆಹ್... ಆಹ್... ಹೆ...ಎ..

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ

ಬೆಂಗಳೂರಲಿ ಯಾರನ್ನೆ ಕೇಳಲಿ
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ಆಹ್...ಆಹ್...ಆಹ್...

ಲ ಲ ಲಾ ಲ ಲ ಲಾ ಓ ಓ ಓ
ಲ ಲ ಲಾ ಲ ಲ ಲಾ ಲಲಲಾ ಲ ಲ ಲ

ಯಾವ ಹುತ್ತದಲ್ಲಿ ಯಾವ ಹಾವಿದೆ
ಯಾರ ಚಿತ್ತದಲ್ಲಿ ಸುಡುವ ಕಾವಿದೆ

ನಿನ್ನ ನೊಟ ಬಾಣದಷ್ಟು ಜೋರಿದೆ
ಕಣ್ಣ ಪಾಪೆಯಲ್ಲಿ ತಿನ್ನೊ ಹಾಗಿದೆ
ಇಂಗು ತಿಂದ ಮಂಗನಂತೆ ನೋಡಬೇಡವೊ
ಇದೇನು ದೊಂಬರಾಟವೊ

ಅಂಗ ಅಂಗ ನುಂಗುವಂತ ಸರ್ಪ ಸಂಗವೊ
ಇದೇನು ಪುಂಗಿಯಾಟವೊ

ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ

ಬೆಂಗಳೂರಲಿ ಯಾರನ್ನೆ ಕೆಳಲಿ
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ಆಹ್...ಆಹ್...

ಮನಸ್ಸಿನಲ್ಲಿ ತಿನ್ನಲೇಕೆ ಮಂಡಿಗೆ
ಭಯವೆ ಇಲ್ಲ ಮುಂದೆ ನುಗ್ಗೊ ಮಂದಿಗೆ

ಪ್ರೀತಿ ಮಾಡೊ ಶೂರನಂತ ಗಂಡಿಗೆ
ಕಾಯುತಿಹುವುದು ನೋಡು ನನ್ನ ಗುಂಡಿಗೆ

ಹೆಂಡದಂತ ಹೆಣ್ಣು ಕೊಂಡು ಮತ್ತು ಏರಿತು
ಇದಾರ ಹೊತ್ತು ಮೀರಿತೋ
ಪುಂಡರನ್ನ ಕಂಡು ಮನಸು ಬುದ್ದಿ ಹೇಳಿತು
ಹುಷಾರು ಎಂದು ಕೂಗಿತೋ

ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನೆ ಕೆಳಲಿ
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ಆಹ್..ಆಹ್...ಆಹ್...

Read rest of entry

ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ ರಣಧೀರ naavindu hado haadige koneyilla song lyrics from ranadheera

ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ ರಣಧೀರ naavindu hado haadige koneyilla song lyrics from ranadheera

ಚಿತ್ರ: ರಣಧೀರ
ಸಾಹಿತ್ಯ ಸಂಗೀತ : ಹಂಸಲೇಖ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಸರಿಗಮಪ....
ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲ
ಹಾಡಿ ಎಲ್ಲ ಎಲ್ಲ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
ಹಾಡಿರಿ ಹಾಡಲ್ಲಿ ಒಂದು ಲವ್ ಸ್ಟೋರಿ
ಸ್ಟೋರಿಗೆ ಈಗ ನಾಯಕಿ ಯಾರೊ ಮರಿ
ಯಾರೊ ಮರಿ ಇಗೊ ಈ ಹೆಣ್ಣೆ ನಾಯಕಿ
ನಾಯಕಿಯೆ ನಿನಗೆ ಯಾರಮ್ಮ ನಾಯಕ
ನಾಯಕ ಯಾರಮ್ಮ ಯಾರಮ್ಮ ನಾಯಕ
ನಾಯಕ ನಾನೆ ನಾಯಕ ನಾನೆ ನನ್ನ ಕಥೆಗೆ ನಾಯಕಿ ಆ ಬೆಡಗಿ
ಬೆಡಗಿನ ಸೊಬಗಿ ಅವಳೆ ಕಣೊ ಮನಸೆಳೆದ ಹುಡುಗಿ
ಹುಡುಗಿ ಸ್ಟಾರ್ಟ್ ಸ್ಟಾರ್ಟ್ ಲವ್ ಸ್ಟೋರಿ

ಸ್ಟೋರಿ ಗೆ ಪ್ರೀತಿನೆ ಮುಖ್ಯ ಯಾರಿಂದ ಯಾವಾಗ ಅದು ಶುರುವಾಯ್ತು
ಶುರುವಾಯ್ತು ಅನ್ನೊದು ತಪ್ಪು ಹಿಂದಿನ ಜನ್ಮದಲ್ಲೇನೆ ಸೇರಾಯ್ತು
ಸೇರಾಯ್ತು ನಾವಿಲ್ಲಿ ಈ ನಮ್ಮ ಕಥೆಯಲ್ಲಿ
ಮುಂದೇನು ಮುಂದೇನು ಗೊತ್ತೇನು ಗೊತ್ತೇನು
ಗೊತ್ತೇನು ಪ್ರೀತಿಗೆ ನಾಳಿನ ಚಿಂತೆಯಿಲ್ಲ
ಚಿಂತೆಯಿಲ್ಲ ಈ ಪ್ರೀತಿಗೆ ಕೊನೆ ಇಲ್ಲ
ಕೊನೆ ಇಲ್ಲ ಸರಿ ಮಧ್ಯವು ಯಾವುದು
ಯಾವುದು ಹಾಡೋದು ಹಾಡೋದು ಯಾವುದು
ಯಾವುದು ಎಂದರೆ ಎಲ್ಲ ತೊಂದರೆ
ಹಾಡಿಕೊಂಡು ಮುಂದೆ ಹೋಗು
ಮುಂದೆ ಹೋಗು ಇಲ್ಲವೆ ಪಕ್ಕಕಾದರು ಬಾ
ಹಿಂದಕ್ಕಂತು ಬೇಡವೋ ಮಗು
ಮಗು ಮಗು ನಗು ನಗು ನಗುವೇ ಜೀವನ

ಜೀವನ ಪ್ರಯಾಣದಲ್ಲಿ ಆಸೆಯ ಲಗ್ಗೇಜು ಚಿಕ್ಕದಿರಬೇಕು
ಇರಬೇಕು ಪ್ರೀತಿಯ ಟಿಕ್ಕೇಟ್ ದುಃಖದ ಫೈನು ಕೊಡಬೇಕು
ಕೊಡಬೇಕು ಈ ನನ್ನ ಹೆಣ್ಣಿಗೆ..ಹೆಣ್ಣಿಗೆ..ಹೆಣ್ಣಿಗೆ ಇವಳ ಕಣ್ಣಿಗೆ.. ಕಣ್ಣಿಗೆ
ಕಣ್ಣಿಗೆ ಪ್ರೇಮದ ಕೂಲಿಂಗ್ ಗ್ಲಾಸ್ ಹಾಕು
ಹಾಕಲು ಲೋಕವು ಪ್ರೇಮಮಯ ನೋಡು ಸಾಕು
ಸಾಕು ಸರಿ ನೋಡು ಇಲ್ಲೊಂದು ಸರತಿ ಇಲ್ಲೊಂದು ಸರತಿ
ಈ ಇಬ್ಬರ ಪ್ರೀತಿ
ಪ್ರೀತಿಯನೆಂದು.. ಪ್ರೀತಿಯನೆಂದು ನೋಡಬಾರದು ಅನುಭವಿಸೋ ಹುಡುಗ
ಅನುಭವಿಸಿದರೆ ಇದರ ಸುಖ ತಿಳಿವುದು ನಿನಗಾಗ
ಗಾ ಗಾ ಗಗಗಾ ರೀ ರೀ ನೀ ನಿ ಸ

Read rest of entry

ಲೋಕವೆ ಹೇಳಿದ ಮಾತಿದು ರಣಧೀರ lokave helida matidu song lyrics from ranadheera

ಲೋಕವೆ ಹೇಳಿದ ಮಾತಿದು ರಣಧೀರ lokave helida matidu song lyrics from ranadheera

ಲೋಕವೆ ಹೇಳಿದ ಮಾತಿದು
ವೇದದ ಸಾರವೆ ಕೇಳಿದು
ಲೋಕವೆ ಹೇಳಿದ ಮಾತಿದು
ವೇದದ ಸಾರವೆ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು..

ಲೋಕವೆ ಹೇಳಿದ ಮಾತಿದು
ವೇದದ ಸಾರವೆ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು..

ಅನಾರ್ಕಲೀ....... ಅನಾರ್ಕಲೀ...

ಮರಳುಗಾಡೆ ಇರಲಿ
ಭೂಮಿಗೆ ಸೂರ್ಯನಿಳಿದುಬರಲೀ..
ಪ್ರೀತಿಸೊ ಜೀವಗಳು.. ಬಾಡಲಾರದಂಥ ಹೂವುಗಳು..
ರಾಜಕೀಯವಿರಲಿ
ಶಕುನಿಗಳ ನೂರು ತಂತ್ರವಿರಲಿ..
ಪ್ರೇಮದ ರಾಜ್ಯದಲಿ ಸಾವಿಗೆಂದು ಭಯಕಾಣದಿಲ್ಲೀ..
ಲೋಕವ ಕಾಡುವ ಕೋಟಿ ರಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ತೆರೆಯಲಿಲ್ಲಾ.. ಮಾತಾಡಲಿಲ್ಲಾ..
ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲಾ
ಬಾಯ್ಬಿಟ್ಟೀರಲ್ಲಾ... ಹೂಳಿಟ್ಟೀರಲ್ಲಾ..
ಪ್ರೀತಿ ಮಾಡಬಾರದು, ಮಾಡಿದರೆ ಗೋರಿ ಕಟ್ಟಬಾರದು..
ಪ್ರೀತಿ ಮಾಡಬಾರದು, ಮಾಡಿದರೆ ಗೋರಿ ಕಟ್ಟಬಾರದು..
ಓ ರೋಮಿಯೋ....... ಓ ರೋಮಿಯೋ...

ದ್ವೇಷವೆಂಬ ವಿಷವಾ
ಸೇವಿಸುತ ಖಡ್ಗ ಮಸೆಯುತಿರುವಾ..
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದೂ..
ಮನಸು ಕಣ್ಣು ತೆರೆದು
ನೋಡಿದರೆ ಎಲ್ಲ ಶೂನ್ಯವಿಹುದು..
ಪ್ರೀತಿಯೆಂಬ ದೀವಿಗೆ ಅಂಧಕಾರದಲ್ಲು ಕಾಣುವುದೂ..
ರಾಜ್ಯಗಳಿಳಿದು ಕೋಟೆ ಕೊತ್ತಲಗಳುರುಳಿದವು
ಹೆಣ್ಣಿಗಾಗಿ, ಈ ಮಣ್ಣಿಗಾಗಿ, ಈ ಹೊನ್ನಿಗಾಗೀ..
ಜೀವದ ಆಸೆಯಬಿಟ್ಟು ವಿಷವ ಕುಡಿದರಿಲ್ಲಿ
ಪ್ರೀತಿಗಾಗಿ.. ಆನಂದವಾಗಿ.. ಆ ಸ್ವರ್ಗವಾಗೀ..
ಪ್ರೀತಿ ಮಾಡಬಾರದು, ಮಾಡಿದರೆ ವಿಷವ ಕುಡಿಯಬಾರದು..
ಪ್ರೀತಿ ಮಾಡಬಾರದು, ಮಾಡಿದರೆ ವಿಷವ ಕುಡಿಯಬಾರದು..

ಲೋಕವೆ ಹೇಳಿದ ಮಾತಿದು
ವೇದದ ಸಾರವೆ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು..
ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು..

ಲಾಲಲಾಲಲಲಲಾ.. ಲಾಲಲಲಲಾಲಲಲಲಾ..
ಲಾಲಲಾಲಲಲಲಾ.. ಲಾಲಲಲಲಾಲಲಲಲಾ..

Read rest of entry

ಮೀನಾಕ್ಷಿ ನಿನ್ನ ರಣಧೀರ meenaxi ninna song lyrics from ranadheera

ಮೀನಾಕ್ಷಿ ನಿನ್ನ ರಣಧೀರ meenaxi ninna song lyrics from ranadheera

ಚಿತ್ರ: ರಣಧೀರ
ಸಾಹಿತ್ಯ, ಸಂಗೀತ: ಹಂಸಲೇಖ
ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ

ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರಳಿಗೇಕೊ ಕಣ್ಣು
ಕಾಮಾಕ್ಷಿ ನಿನ್ನ ಕೆನ್ನಗಳಿದು ಮಧುರವಾದ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ
ನೀನವನಿಗೆ ಹೆಣ್ಣು ಅವನಿನ್ನು ಬಿಡನಿನ್ನು

ನಿನ್ನ ಪಾದ ಗೆಜ್ಜೆ ನಾದ ನಡೆವ ಭಂಗಿಗೆ
ಬಿಗಿದ ನಡುವ ತುಂಬಿದೆದೆಯ ಮೈ ಮೆರವಣಿಗೆ
ಗೋಕುಲದ ವೀದಿಗಳಿಗೆ ಸೂರ್ಯೋದಯವೇ
ನೀ ನಡೆದು ಬೀಗುತಿರಲು ಹೃದಯೋದಯವೇ
ನಳಿನಾಕ್ಷಿ ನಿನ್ನ ನಡುವ ಮೇಲೆ
ಈ ಮುರಾರಿ ಕಣ್ಣು
ಜಲಜಾಕ್ಷಿ ನೀನು ಗಿಣಿಯು ಕಂಡ
ಮಾಗಿ ತೂಗೊ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ
ನೀನವನಿಗೆ ಹೆಣ್ಣು ಅವನಿನ್ನು ಬಿಡನಿನ್ನು

ದ್ವಾರಕಾಪುರದಲಿ ಅಸುರ ಸೈನ್ಯ ಧಾಳಿಗೆ
ಅವಿತು ಕುಳಿತ ಗೋಪಿ ಕುಲದ ಪ್ರಾಣ ರಕ್ಷೆಗೆ
ಶ್ರೀ ಕೃಷ್ಣನು ವೀರನಾಗಿ ಧಾವಿಸಿ ಬರಲು
ರಾಧೆ, ನೀ ಕರಪಿಡಿದು ಕರೆದೊಯ್ಯೆನಲು
ಕಮಲಾಕ್ಷಿ ನಿನ್ನ ಪ್ರಾಣದೊಡವೆ
ಮೇಲೆ ಅವನ ಕಣ್ಣು
ವಿಮಲಾಕ್ಷಿ ನೀನು ಶೇಷಶಯನ
ಕದ್ದು ಒಯ್ವ ಹಣ್ಣು

Read rest of entry

ಚೆಲುವೆ ಒಂದು ಕೇಳ್ತಿನಿ ಪ್ರೇಮಲೋಕ cheluve ondu keltini song lyrics from premaloka

ಚೆಲುವೆ ಒಂದು ಕೇಳ್ತಿನಿ ಪ್ರೇಮಲೋಕ cheluve ondu keltini song lyrics from premaloka
ಸಂಗೀತ / ಸಾಹಿತ್ಯ : ಹಂಸಲೇಖ
ಗಾಯಕರು: ಎಸ್.ಪಿ.ಬಿ ಮತ್ತು ಎಸ್.ಜಾನಕಿ

ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ?
ನಿನ್ನ ಪ್ರೀತಿ ಮಾಡ್ತಿನಿ ಮನಸು ಹೃದಯ ಕೊಡ್ತೀಯ?
ಮನಸೀನ ಆಸೆ ಹೇಳಲೇನೂ....!?
ಮುದ್ದಾದ ಗೊಂಬೆ ನೀನು! ಮುತ್ತಂತ ಹೆಣ್ಣು ನೀನು! ನಾನಿನಗೆ ಜೊಡಿ ಅಲ್ಲವೆನು? ಅ ಅ ಅ ಅ ಅಹ್
ಚೆಲುವ ಒಂದು ಹೇಳ್ತಿನಿ ಇಲ್ಲ ಅಂದೇ ಕೆಳ್ತೀಯ?
(ಹೆಣ್ಣು) ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲ್ಸ ಮಾಡ್ತೀಯ?
ನಿಜವಾದ ಗಂಡೆ ಆದ್ರೆ ನೀನೂ....
ಹೆಣ್ಣನ ಗೆಲ್ಲೊ ನೀನು.. ಮನಸನ್ನ ಕದಿಯೋ ನೀನು.. ಆಮೇಲೆ ಪ್ರೀತಿ ಅಲ್ಲವೆನೂ.....?

(ಗಂಡು) ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೆ ಕೊಡ್ತೀನಿ
(ಹೆಣ್ಣು) ಹೌದಾ!?.. ಹೈದಾ ..ಪರ್ವಾಗಿಲ್ವೇ
(ಗಂಡು) ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ತೀನಿ
(ಹೆಣ್ಣು) ಹೌದಾ! ಹಾಗಂತ್ಯ?.. ಪರ್ವಾಗಿಲ್ವೆ
(ಗಂಡು) ಪ್ರೀತಿಗಾಗಿ ಲೋಕವನ್ನೆ ಜಯಿಸಬಲ್ಲೆ ನಾ
(ಜಾನಕಿ) ಹೌದ ವೀರ ಜೋಕುಮಾರ ಮಾತು ನಿಜವೆನಾ? ಆಹಹ
(ಗಂಡು) ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತಿಯ?
(ಹೆಣ್ಣು) ನಿನ್ನ ಪ್ರೀತಿ ಮಾಡ್ತಿನಿ ಹೇಳೊ ಕೆಲಸ ಮಾಡ್ತಿಯ?

ಧೈರ್ಯ ಇಲ್ಲದವರಲ್ಲಿ ಹೇಗೆ ಮನಸು ನೀಡಲೋ?
(ಗಂಡು) ಹೌದಾ?.. ಅಯ್ಯೋ! ಮುಂದೇನ್ ಗತಿ!?
(ಹೆಣ್ಣು) ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ?
(ಗಂಡು) ಆಯ್ಯಯ್ಯೊ.. ಹೌದಾ!? ಇನ್ನೇನ್ ಗತಿ!?
(ಹೆಣ್ಣು) ವೀರನಂಥ ಶೂರನಂಥ ಪ್ರೇಮಿ ನನ್ನವನು!
ನಿನ್ನ ಹಾಗೆ ಹೇಡಿ ಅಲ್ಲ ನನ್ನ ಮನ್ಮಥನೂ. ಓ ಹೊ..
(ಗಂಡು) ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ?
ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯ?
(ಹೆಣ್ಣು) ನಿಜವಾದ ಗಂದೆ ಆದ್ರೆ ನೀನೂ
ಹೆಣ್ಣನ ಗೆಲ್ಲೋ ನೀನು.. ಮನಸನ್ನ ಕದಿಯೋ ನೀನು. ಆಮೆಲೆ ಪ್ರೀತಿ ಅಲ್ಲವೆನೂ?

Read rest of entry

ಗೆಳೆಯರೆ ನನ್ನ ಗೆಳತಿಯರೇ ಪ್ರೇಮಲೋಕ geleyare nanna gelatiyare song lyrics from premaloka

ಗೆಳೆಯರೆ ನನ್ನ ಗೆಳತಿಯರೇ ಪ್ರೇಮಲೋಕ geleyare nanna gelatiyare song lyrics from premaloka
ಸಂಗೀತ / ಸಾಹಿತ್ಯ : ಹಂಸಲೇಖ
ಗಾಯಕರು: ಎಸ್.ಪಿ.ಬಿ

ಬನ್ನೀ ನನ್ನ ಗೆಳೆಯರೆ
ಬನ್ನೀ ನನ್ನ ಗೆಳತಿಯರೆ
ಗೆಳೆಯರೆ.. ನನ್ನ ಗೆಳತಿಯರೆ (೨)
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ.. ಹೊಗೋಣ ಕಾಲೇಜಿಗೆ.. ಥ್ಯಾಂಕ್ಸ್ ಹೇಳಿ ವಯಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೇ (೨)

ಭಯವಿಲ್ಲದಂತ ವಯ್ಸಿದು, ಬಯಾಲಜಿ ಬರೆಯಬಹುದು
ಕೆಮ್ಮು ಬಾರದಂತ ವಯ್ಸಿದು, ಕೆಮಿಸ್ಟ್ರಿ ಕಲಿಯಬಹುದು
ಮೀಸೆ ಚಿಗುರುವಂತ ವಯ್ಸಿದು, ಹಿಸ್ಟರಿ ಓದಬಹುದು
ಪ್ರೇಮ ಚಿಮ್ಮುವಂತ ವಯ್ಸಿದು, ಕಾಮರ್ಸ್ ಕೇಳಬಹುದು
ಬನ್ನಿ ಗೆಳತಿಯರೇ.. ಡ್ರಿಲ್ಲಿಂಗ್ ಮಾಡಬಹುದು
ಬನ್ನಿ ಸ್ನೇಹಿತರೇ.. ಥ್ರಿಲ್ಲಿಂಗ್ ನೋಡಬಹುದು
ನಾನು ನೀನು ಎಂಬುದಿಲ್ಲ
ಗಂಡು ಗಿಂಡು ಭೇದವಿಲ್ಲ..
ಚಿಂತೆಗಿಲ್ಲಿ ಜಾಗವಿಲ್ಲ
ಜಾಲಿ ಮಾಡಿ ಬನ್ನಿ ಎಲ್ಲ
ವಯಸು ಕಳೆದು ಹೋದ ಮೇಲೆ ದೊರಕದು
ಕೈಲಿ ಇರುವ ಪ್ರೇಮಲೋಕ ನಮ್ಮದು..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!

ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಾಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೆ (೨) (ರೆ ರೆ ರೆ ರೆ ರೆ ರೆ ರೆ ರೆ)

ಕ್ಲಾಸ್‍ರೂಮಿನಲ್ಲಿ ಇದ್ದರೆ, ಕಾಮೆಂಟ್ರಿ ಕೇಳಬಹುದು
ಕ್ಲೋಕ್‍ರೂಮಿನಲ್ಲಿ ಇದ್ದರೆ, ಟೈಮ್ ಪಾಸ್ ಮಾಡಬಹುದು
ಲೈಬ್ರರಿಗೆಂದು ಹೋದರೆ, ಲವ್ ಸೀನ್ ನೋಡಬಹುದು
ಲ್ಯಾಬೋರೇಟರಿಗೆ ಹೋದರೆ, ಡಿಂಗ್-ಡಾಂಗ್ ನೋಡಬಹುದು
ಬನ್ನಿ ಗೆಳತಿಯರೇ ಡಿಸ್ಕೊ ಕುಣಿಯಬಹುದು
ಬನ್ನಿ ಸ್ನೇಹಿತರೆ.. ಜಾಲಿ ಮಾಡಬಹುದು
ಸೂರ್ಯ ಚಂದ್ರ ಜೇಬಿನಲ್ಲೆ, ತಾರೆ ಚುಕ್ಕಿ ಮುಷ್ಟಿಯಲ್ಲೆ
ಎಂಟು ದಿಕ್ಕು ನಮ್ಮ ಕೈಲಿ, ರಾಜರಂತೆ ನಾವು ಇಲ್ಲಿ
ಋತುಗಳೆಲ್ಲ ನಮ್ಮ ದಾರಿ ಕಾದಿದೆ
ವರುಷ ಪೂರ್ತಿ ಹರುಷ ನಮ್ಮದಾಗಿದೆ..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!

ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೆ
ಗೆಳೆಯರೆ ನನ್ನ ಗೆಳತಿಯರೆ (೨)
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೇ
ಗೆಳೆಯರೆ ನನ್ನ ಗೆಳತಿಯರೇ (೨)

Read rest of entry

ಈ ನಿಂಬೆ ಹಣ್ಣಿನಂತ ಹುಡುಗಿ ಪ್ರೇಮಲೋಕ e nimbe hanninanta hudugi song lyrics from premaloka

ಈ ನಿಂಬೆ ಹಣ್ಣಿನಂತ ಹುಡುಗಿ ಪ್ರೇಮಲೋಕ e nimbe hanninanta hudugi song lyrics from premaloka
ಸಂಗೀತ / ಸಾಹಿತ್ಯ : ಹಂಸಲೇಖ
ಗಾಯಕರು: ರಮೇಶ್

ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
ಏ ಬಾಲು.. ಏ ಬಾಲು
ಇದು ರಂಬೆ ಮೇನಕೆಯ ವಂಶದ ಬೆಡಗಿ ನೋಡು
ಈ ಮಾಲು.. ಹೊಸ ಮಾಲು
||೨|| ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೊ ನಮಗೆ ಬಿತ್ತು ಇಲ್ಲಿ ಪೂರ್ತಿ ಡ್ಯೂಟಿ! ||೨||
ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
ಏ ಬಾಲು.. ಏ ಬಾಲು

ಈ ಬಿಸಿಲು ಕಾಲದಲಿ ಬಂತೋ ಕಾಮನ ಬಿಲ್ಲು ..
ಆ ಹುಬ್ಬು, ಕರಿ ಹುಬ್ಬು
ಈ ಪಬ್ಲಿಕ್ ರೋಡಿನಲ್ಲಿ ಜಿಂಕೆ ಬಂದೈತಲ್ಲೊ..
ಆ ಕಣ್ಣು.. ಜಿಂಕೆ ಕಣ್ಣು
ಈ ಎಳೆ ಸಂಪಿಗೆಯ 3-Dಯಂಥ ಮೂಗೂ.. ಅಯ್ಯೋ..
ಅ ಅಹ್ ಕಳೆ ಕೊಡುವ ಈ ತೊಂಡೆ ತುಟಿಗಳ ರಂಗು.. ಅ ಮಿಂಚಿಂಗು
ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೊ ನಮಗೆ ಬಿತ್ತು ಇಲ್ಲಿ ಪೂರ್ತಿ ಡ್ಯೂಟಿ!

ಈ ಹಗಲು ಹೊತ್ತಿನಲಿ ಚಂದ್ರ ಬಂದೈತಲ್ಲಾ..
ಈ ಗಲ್ಲ.. ರಸಗುಲ್ಲಾ
ಅ ತಲೆ ಇಂದ ಉಂಗುಷ್ಟದವರೆಗೆ ಎಲ್ಲಾ
ಮಾತಿಲ್ಲ ಕೊಂಕಿಲ್ಲ
ಈ ಎಳೆ ಬಿಸಿಲಿನಲಿ ಮಿನುಗುತಿರುವ ಹೆಣ್ಣೋ.. ಹಣ್ಣೋ
ಆ ಸೂರ್ಯ ಕೂಡ ಕಣ್ ಹೊಡಿತಾವ್ನಾಲ್ಲಣ್ಣೊ.. ನೋಡಣ್ಣೊ
ದಿನಾ ಬೀದಿಯಲಿ ಬಂದ್ರೇ ನೋಡು ಇಂಥ ಬ್ಯೂಟಿ
ತಗೋ ನಮಗೆ ಬಿತ್ತು ಇಲ್ಲಿ ಪೂರ್ತಿ ಡ್ಯೂಟಿ!
ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
ಏ ಬಾಲು.. ಏ ಬಾಲು ಏ ಬಾಲು!

Read rest of entry

ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ ಪ್ರೇಮಲೋಕ idu nanna ninna premagite chinna song lyrics from premaloka

ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ ಪ್ರೇಮಲೋಕ idu nanna ninna premagite chinna song lyrics from premaloka
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯಕರು: ಎಸ್. ಪಿ. ಬಿ, ಎಸ್. ಜಾನಕಿ

ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಇದು ನಿಲ್ಲಲಾರದೆಂದು
ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು ||ಪ||

||ಇದು ನನ್ನ ನಿನ್ನ||

[ಹೆಣ್ಣು]
ಕೇಳೊ ಸರದಾರ
ಚುಕ್ಕಿಗಳಂತೆ ಬಾನಿನಲ್ಲಿ ನಾನು ನೀನು
ಕೇಳೊ ಹಮ್ಮೀರ
ಹಕ್ಕಿಗಳಂತೆ ಬಾಳಿನಲ್ಲಿ ನಾನು ನೀನು

[ಗಂಡು]
ಏಳು ಬಣ್ಣಗಳ ಕಾಮನಬಿಲ್ಲು
ನಮ್ಮದೇನೆ ಪ್ರೇಮ ತೋಟ ಮಾಡುವ
[ಹೆಣ್ಣು]
ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ
ಈ ನಮ್ಮ ಪ್ರೇಮರಾಗ ಹಾಡುವಾ

||ಇದು ನನ್ನ ನಿನ್ನ ಪ್ರೇಮಗೀತೆ||

[ಗಂಡು]
ಕೇಳೇ ಸಿಂಗಾರಿ ಹೂವಲ್ಲಿ ದುಂಬಿ ಸೇರಿಕೊಳ್ಳೊ ಹೊತ್ತು ಇದು
ಬಾ ಬಾ
ಕೇಳೇ ಬಂಗಾರಿ ಪ್ರೇಮಿಗಳಲ್ಲಿ ನೀಡಿಕೊಳ್ಳೋ ಮುತ್ತು ಇದು
ಬಾ ಬಾ
[ಹೆಣ್ಣು]
ನನ್ನ ನಿನ್ನ ಸ್ನೇಹ ಬಂಧನವಿದು
ಮರೆಯಲಾರದು, ಅಳಿಸಲಾಗದು ಎಂದೆಂದು
[ಗಂಡು]
ಕೇಳೆನ್ನ ಗೆಳತಿ
ಇನ್ನೊಂದು ಸರತಿ
ಜನ್ಮವನೆತ್ತಿದರೂ ನಾವೊಂದೇ

||ಇದು ನನ್ನ ನಿನ್ನ ಪ್ರೇಮಗೀತೆ||

Read rest of entry

ಮೋಸಗಾರನಾ ಹೃದಯಶೂನ್ಯನಾ ಪ್ರೇಮಲೋಕ mosagara hrudayashunyana song lyrics from premaloka

ಮೋಸಗಾರನಾ ಹೃದಯಶೂನ್ಯನಾ ಪ್ರೇಮಲೋಕ mosagara hrudayashunyana song lyrics from premaloka
ಸಂಗೀತ / ಸಾಹಿತ್ಯ : ಹಂಸಲೇಖ
ಗಾಯಕರು: ಎಸ್.ಪಿ.ಬಿ

ಏಯ್!! ಏಯ್!!!
ಹೇಯ್! ಮೋಸಗಾರನಾ? ಹೃದಯಶೂನ್ಯನಾ?
ನಿನಗೆ ಇನ್ನು ನಾ ಬೇಡವಾದೆನಾ?
ಕೇಳೆನ್ನ ಒಲವೇ, ನೀನನ್ನ ಜೀವವೆ
ನಂಬಿಕೆ ಇಲ್ಲವೇ?, ಶಂಕಿಸ ಬೇಡವೇ

ಹೇಯ್! ಬಾರೆ ಹೃದಯವೆ
ಮನಸು ತೆರೆದಿದೆ
ನಿನ್ನ ಕಾಣದೆ ಹೃದಯ ಬಿರಿದಿದೆ

ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ಧತಿ

|| ಹೇಯ್! ಮೋಸಗಾರನಾ? ||

ಹೇಯ್! ಇರುಳೆಂದು ಹಗಲಲ್ಲ
ಸುಳ್ಳೆಂದು ನಿಜವಲ್ಲ
ಈ ಶಕುನಿ ಜನರೆದುರೂ
ಪ್ರೀತಿಗೆ ಬೆಲೆಯಿಲ್ಲ

ಈ ಲೋಕ ಎಂದರೆ ಬರಿ ಪ್ರೀತೀಗೆ ತೊಂದರೆ
ಹೆಜ್ಜೆ ಹಿಂದಿಟ್ಟರೆ, ಗೆಲುವಿಲ್ಲ ಹೊರಗೆ ಬಾರೆ
ಕಣ್ಣೀರಿನ್ನೇಕೆ? ಕಂಗಾಲೇಕೆ? ಬಾ...

ಬಾರೆ ಹೃದಯವೆ, ಮನಸು ತೆರೆದಿದೆ, ಏಯ್
ನಿನ್ನ ಕಾಣದೆ ಹೃದಯ ಬಿರಿದಿದೆ

ಕೇಳೆನ್ನ ಒಲವೇ, ನೀನೆನ್ನ ಜೀವವೇ
ನಂಬಿಕೆಯಿಲ್ಲವೇ?, ಶಂಕಿಸಬೇಡವೆ

|| ಏಯ್! ಮೋಸಗಾರನಾ? ||

ಹೇಯ್! ಪ್ರೀತಿಯ ಹಾಲಿಗೆ ಹುಳಿಯಿಂಡಬಹುದೀಗ
ಭಯವೇಕೆ ಈ ಹುಳಿಗೆ? ಮೊಸರಾಗದೇನೀಗ
ಉಸಿರಾಟ ನಿಂತರೂ ನಾನಿಲ್ಲಿಂದ ಹೋಗೆನೇ
ಹೆಸರೇನೆ ಬಂದರೂ ನಾನೆಂದೂ ನಿನ್ನ ಬಿಡೆನೇ

ನಿನ್ನಾಮೇಲಾಣೆ ಮೋಸಾ ಕಾಣೆ ಬಾ....ಆಹ್!

ಬಾರೆ ಹೃದಯವೇ ಮನಸು ತೆರೆದಿದೆ..ಏಯ್!
ನಿನ್ನ ಕಾಣದೆ ಹೃದಯ ಬಿರಿದಿದೆ

ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ದತಿ

|| ಏಯ್! ಮೋಸಗಾರನಾ? ||

Read rest of entry

ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ ಪ್ರೇಮಲೋಕ nodamma hudugi song lyrics from premaloka

ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ ಪ್ರೇಮಲೋಕ nodamma hudugi song lyrics from premaloka
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯಕರು: ಎಸ್. ಪಿ. ಬಿ, ಮತ್ತು ಲತ ಹಂಸಲೇಖ

ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ
ನೀನಿಲ್ಲಿ ಸೇರೋದು ಓದುವ ಸಲುವಾಗಿ
ಹುಡ್‍ಗೀರ ಕಾಲೇಜು, ನೀನಿನ್ನು ಟೀನೇಜು
ಹುಷಾರಾಗಿರಬೇಕು, ಚೆನ್ನಾಗಿ ಓದ್‍ಬೇಕು
ನಾನ್ ತುಂಬಾ ಕಟ್‍ನಿಟ್ಟು, ತಲೆ ಕೆಟ್ರೆ ಗೆಟ್‍ಔಟು
ನೆಲ ನೋಡ್ಕೋತಾ ಬರ್ಬೇಕು, ನೆಲ ನೋಡ್ಕೋತಾ ಹೋಗ್‍ಬೇಕು
go, understand? Yes sir.

ಹಲ್ಲೊ ಮೈ ಲವ್ಲಿ ಲೇಡಿ, ಹೂ ಆರ್ ಯೂ, ಹೂ ಆರ್ ಯು ||೨||
ಕನ್ನಡ ಬರೋದಿಲ್ವ? ಕಣ್ಣೆರಡೂ ಕಾಣಲ್ವಾ?
ಕನ್ನಡ್ಕದೊಳ್ಗಿಂದ ಕಾಣ್ತಿದೆ ಈ ಅಂದ
ಹೌದೇನೋ ಮನ್ಮಥ, ಬಾಯ್ಮುಚ್ಕೊಂಡ್ ಹೋಗತ್ತಾ
ಹೊಸ ಹುಡ್‍ಗೀ ಅಂತ ಬಿಡ್ತೀನಿ, ನಾಳೆ ಇಂದ ನೋಡ್ಕೋತೀನಿ
understand? Yes boss.

ಸುಂದರ ಯುವಕ, ದುಷ್ಯಂತ ರಾಜ
ಬೇಟೆಯನಾಡಲು ಬಂದ
ಎಲ್ಗೇ ಸಾರ್? ಆಂ..ಕಾಡ್ಗೆ ಸಾರ್
ಬೇಟೆಯ ಮರೆತು ಕಾಡಿನ ಸೊಗಸು ನೋಡುತ ಸವಿಯುತ ನಿಂದ
ಯಾಕೆ ಸಾರ್? ಏಯ್..ಸುಮ್ನೇ ಸಾರ್
ಕಾಡಿನ ನಡುವೆ, ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
ಹೌದಾ ಸಾರ್? ಹೂಂ ಹೂಂ ಹೂಂ ಹೌದು ಸಾರ್
ಚೆಲುವೆಯ ನೋಡಿ, ಹತ್ತಿರ ಓಡಿ
ಹುಡುಗಿಯ ಕೈ ಹಿಡುಕೊಂಡ
ಆಮೇಲ್ ಸಾರ್? ಹೇಳಿ ಸಾರ್?

ಹತ್ತಿರ ಕರೆಯುತ್ತಾ, ತೋಳಿಂದ ಬಳಸುತ್ತ,
ಕಣ್ಣಲ್ಲೇ ನೋಡುತ್ತ, ಪ್ರೀತಿಯ ಮಾಡುತ್ತಾ
'ಯಾರೇ ನೀನು ಚೆಲುವೆ?', ಅಂದ
'ನಿನ್ನ ಅಂದ ಚೆಂದ', ಅಂದ
ಹಣೆಯಲ್ಲಿ ಬೆವರುತ್ತಾ
ತನುವೆಲ್ಲ ನಡುಗುತ್ತಾ
ನೆಲವನ್ನೇ ನೋಡುತ್ತಾ
ನುಡಿಗಳು ನಾಚುತ್ತಾ
ನಾನು ಇನ್ನು ನಿನಗೆ ಸ್ವಂತ
ಹೆಸರು ಶಕುಂತಲ ಅಂತ

ಬಂದ್ಲು ಸಾರ್, ಓಹೋ
ಬಂದ್ಲು ಸಾರ್, ಓಹೋ
ಶಕುಂತಲ, ಓಹೋ
ಬಂದ್ಲು ಸಾರ್, ಓಹೋ

ನೀನಾ ಶಕುಂತಲ?
ಅಲ್ಲಾ ನಾನ್ ಶಶಿಕಲ

ಯಾರನ್ನ ನೋಡ್ಬೇಕು?
ನಿಮ್ಮನ್ನೇ ನೋಡ್ಬೇಕು

ಏನ್ ಆಗ್ಬೇಕಾಗಿತ್ತು?
ಅಡ್ಮಿಟ್ ಆಗ್ಬೇಕಿತ್ತು

ಸರಿ ಈ ಕಡೆ ಕಳ್ಸಿ ಸಾರ್
ಶಟ್‍ಅಪ್ ಅಂದ್ರೆ ಬಾಯ್ಮುಚ್ಚು ಸಾರ್

ಹೋಗಮ್ಮ ಹುಡುಗಿ ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ನಿನಗ್ಯಾವುದ್ ಇಷ್ಟವೋ, ಆ ಬೆಂಚೆ ಸೆಲೆಕ್ಟ್ ಮಾಡ್ಕೋ
ಈ ಬೆಂಚೇ ಸೆಲೆಕ್ಟ್ ಮಾಡ್ಕೋ

ಬಂದ್‍ಕೂಡ್ಲೇ ಮೀಟಿಂಗಾ?
ಕಂಡ್‍ಕೂಡ್ಲೇ ಕಿಸ್ಸಿಂಗಾ?

ಲಕ್ಷ್ಮೀ ನೀನ್ ಸ್ವಲ್ಪ್ ಒತ್ಕೋ
ಶಶಿ ನೀನ್ ಇಲ್ ಕೂತ್ಕೋ
ಪೀಟರ್ ನೀನ್ ಕೈ ಎತ್ಕೋ
ರೋಸಿ ನೀನ್ ಸೆರಗ್ ಮುಚ್ಕೋ

ಪೋಲಿ ಆಟವೆಲ್ಲ ಬಿಡಬೇಕು
ಬರಿ ಪಾಠವನ್ನು ಕಲಿಬೇಕು

ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ ಲ


Read rest of entry

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ ಪ್ರೇಮಲೋಕ premalokadinda banda premada sandesha song lyrics from premaloka

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ ಪ್ರೇಮಲೋಕ premalokadinda banda premada sandesha song lyrics from premaloka
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯಕರು: ಕೆ. ಜೆ. ಯೇಸುದಾಸ್, ಎಸ್. ಜಾನಕಿ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮ ರಹಸ್ಯ ಹೇಳೋಣ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಟಿಗೆ ಪ್ರೀತಿ ಕಾರಣ ||೨||

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ಗಾಳಿ, ನೀರು , ಹೂವು, ಹಣ್ಣು, ಇರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?

ಬರುವುದು ಹೇಗೆ? ಇರುವುದು ಹೇಗೆ?
ತಿಳಿದಿದೆ ನಮಗೆ, ಆದರೆ ಕೊನೆಗೆ
ಹೋಗುವ ಘಳಿಗೆ ತಿಳಿಯದು ನಮಗೆ
ಒಗಟಿದು ಎಲ್ಲರಿಗೆ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ರಾಗ ತಾಳ, ಹಾವ ಭಾವ ಸೇರದೆ ಹೋದರೇ
ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ

ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ

ಬದುಕಿನ ಜೊತೆಗೆ ಪ್ರೆಮದ ಬೆಸುಗೆ
ಇರುವುದು ಹೀಗೆ ಒಲವಿನ ತೆರೆಗೆ
ಪ್ರೀತಿಯ ಸವಿಗೆ ತೋರುವ ನಮಗೆ
ಪ್ರೇಮವು ವರತಾನೆ?

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

|| ಪ್ರೇಮಲೋಕದಿಂದ ||

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||

Read rest of entry

ಯಾರಿವನೂ, ಈ ಮನ್ಮಥನೂ ಪ್ರೇಮಲೋಕ yaarivanu E manmathanu song lyrics from premaloka

ಯಾರಿವನೂ, ಈ ಮನ್ಮಥನೂ ಪ್ರೇಮಲೋಕ yaarivanu E manmathanu song lyrics from premaloka
ಸಂಗೀತ / ಸಾಹಿತ್ಯ : ಹಂಸಲೇಖ
ಗಾಯಕರು: ಎಸ್.ಜಾನಕಿ ಮತ್ತು ಇತರರು

[ಹೆಣ್ಣು]
ಯಾರಿವನೂ, ಈ ಮನ್ಮಥನೂ? ||೨||
ವೀರರಲ್ಲಿ ವೀರ
[ಗುಂಪು] ವೀರ ವೀರ
[ಹೆಣ್ಣು] ಬಂದ ನಮ್ಮ ಶೂರ
[ಗುಂಪು] ಶೂರ ಶೂರ
[ಹೆಣ್ಣು] ಹಮ್ಮೀರ

ಯಾರಿವನು, ಹೇ ಯಾರಿವನು
ಯಾರಿವನೂ.... ಈ ಮನ್ಮಥನೂ?

ಸಿಂಹದ ಶಕ್ತಿಯಿದೆ ಹೇ ಯಾರಿದು, ಮಿಂಚಿನ ನೋಟವಿದೆ ಹೇ ಯಾರಿದು
ಸಿಂಹದ ಶಕ್ತಿಯಿದೆ ಹೇ ಯಾರಿದು, ಮಿಂಚಿನ ನೋಟವಿದೆ ಹೇ ಯಾರಿದು

ಹಾವಿನ ರೋಷದ, ಗುಡುಗಿನ ವೇಷದ ಸಾರಥಿ ಯಾರಿವನು
ಚೋರರ ಪಾಲಿನ ಚಿರತೆಯ ಸೇಡಿನ ಶತ್ರುವು ಯಾರಿವನು
ಹಾವಿನ ರೋಷದ, ಗುಡುಗಿನ ವೇಷದ ಸಾರಥಿ ಯಾರಿವನು
ಚೋರರ ಪಾಲಿನ ಚಿರತೆಯ ಸೇಡಿನ ಶತ್ರುವು ಯಾರಿವನು

ವೀರರಲ್ಲಿ ವೀರ
[ಗುಂಪು] ವೀರ ವೀರ
[ಹೆಣ್ಣು] ಬಂದನಮ್ಮ ಶೂರ
[ಗುಂಪು] ಶೂರ ಶೂರ
[ಹೆಣ್ಣು] ಹಮ್ಮೀರ

ಬೆಂಕಿಯ ಬಿರುಸಿದೆ ಹೇ ಯಾರಿದು
ಗಾಳಿಯ ವೇಗವಿದೆ ಹೇ ಯಾರಿದು
ಬೆಂಕಿಯ ಬಿರುಸಿದೆ ಹೇ ಯಾರಿದು
ಗಾಳಿಯ ವೇಗವಿದೆ ಹೇ ಯಾರಿದು
ಮೋಹಕ ರೂಪದ ಸುಂದರ ದೇಹದ ಸ್ನೇಹಿತನ್ಯಾರಿವನು?
ಹೆಣ್ಣಿನ ಹೃದಯದ ನಾಡಿಯ ಮಿಡಿಸುವ ಪ್ರೇಮಿಯು ಯಾರಿವನು?
ಮೋಹಕ ರೂಪದ ಸುಂದರ ದೇಹದ ಸ್ನೇಹಿತನ್ಯಾರಿವನು?
ಹೆಣ್ಣಿನ ಹೃದಯದ ನಾಡಿಯ ಮಿಡಿಸುವ ಪ್ರೇಮಿಯು ಯಾರಿವನು?

ವೀರರಲ್ಲಿ ವೀರ
[ಗುಂಪು] ವೀರ ವೀರ
[ಹೆಣ್ಣು] ಬಂದ ನಮ್ಮ ಶೂರ
[ಗುಂಪು] ಶೂರ ಶೂರ
[ಹೆಣ್ಣು] ಹಮ್ಮೀರ

ಯಾರಿವನು, ಹೇಯ್ ಯಾರಿವನು

Read rest of entry

ಯಾರೋ.. ಕಣ್ಣಲ್ಲಿ ಕಣ್ಣನಿಟ್ಟು ಒರಟ I Love You yaaro kannalli kannanittu song lyrics from orata i love you

ಯಾರೋ.. ಕಣ್ಣಲ್ಲಿ ಕಣ್ಣನಿಟ್ಟು ಒರಟ I Love You yaaro kannalli kannanittu song lyrics from orata i love you

ಸಂಗೀತ : ಜಿ. ರವಿಶಂಕರ್
ಗಾಯನ : ರಾಜೇಶ್ ಮತ್ತು ನಂದಿತ

{ಗಂಡು} : ಯಾರೋ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೊ

ಯಾರೊ ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದಂಗಿದ್ದು ಎದ್ದು ಹೋದೊರ್ ಯಾರೊ

ಅವಳ್ಯಾರೊ ಹುಡುಗಿ ನನ್ನನ್ನೆ ಹುಡುಕಿ
ಪ್ರೀತಿಸುತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೆ ದೂರಾನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ

ಯಾರೊ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೊರ್ ಯಾರೊ

ಯಾರೊ ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದಂಗಿದ್ದು ಎದ್ದು ಹೋದೊರ್ ಯಾರೊ

{ಹೆಣ್ಣು} : ಒಂದೊಂದು ಹುಡುಗಿರಲ್ಲು ನೂರು ನೂರು ಕನಸು ಉಂಟು
ಯಾರು ಎಲ್ಲು ಹೇಳೊದಿಲ್ಲ
ಹಾಗಂತ ಯಾರು ಕುಡ ಪ್ರೀತಿ ಮಾಡೊದಿಲ್ಲ ಅಂತ
ಎಂದು ಬಾಯಿ ಬಿಡೊದಿಲ್ಲ

{ಗಂಡು} : ಹಾ! ನನ್ನಂತ ಹುಡುಗರಿಗೆ ಪ್ರೇಮ ಗೀಮ
ಅನ್ನೊದೆಲ್ಲ ಇಲ್ಲಿವರೆಗು ತಿಳಿದೆಯಿಲ್ಲ
ಎಲ್ಲಿಂದ ಬಂದ್ಲೊ ಇವಳು ತಿಳಿದು ತಿಳಿದು
ತಿಳಿಯದಂಗೆ ಜೀವ ಹಿಂಡಿ ಕೊಲ್ತಾಳಲ್ಲ

ಇದು ಪ್ರೀತಿ ಅಲ್ಲ ಪ್ರೇಮಾನು ಅಲ್ಲ
ಬರಿ ಸ್ನೇಹ ಅಲ್ಲ ಅಂತ ಹೇಳುತ್ತೀರ
ಅದೇನೊ ಒಳಗೆ ನನ್ನೊಳಗೊಳಗೆ
ಅವಳಿಟ್ಟ ಹೆಜ್ಜೆ ನಾ ಮರೆಯೊದಿಲ್ಲ

ಯಾರೊ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೊರ್ ಯಾರೊ

ಯಾರೊ ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದಂಗಿದ್ದು ಎದ್ದು ಹೋದೊರ್ ಯಾರೊ
ಹೋದೊರ್ ಯಾರೊ! ಹೋದೊರ್ ಯಾರೊ

{ಹೆಣ್ಣು} : ಪ್ರೀತಿಲಿ ಸೋಲೆ ಇಲ್ಲ ಸೋತ ಮೇಲೆ ಬದುಕೆ ಇಲ್ಲ
ಬದುಕು ಒಂದು ಒಗಟಿನಂತೆ

{ಗಂಡು} : ಈ ನನ್ನ ಬದುಕಿನಲ್ಲಿ ನನ್ನವರು ಯಾರು ಇಲ್ಲ
ನಾನು ಒಬ್ಬ ಒರಟನಂತೆ

ಈಗಸ್ಟೆ ಈಗ ಅಸ್ಟೆ ಯಾರೊ ನನ್ನ ಎದೆಗೆ
ಕನ್ನ ಒಡೆದು ಒಡೆದು ಹೋದಂತೆ
ನನ್ನಲ್ಲೆ ಎನೋ ಒಂದು ಕಳೆದುಕೊಂಡ ಹಾಗೆ
ಇಂದು ಆಗೆ ಹೊಯ್ತು ಮಿಂಚಿನಂತೆ

ಅರೆ ತಾಳಲಾರೆ ಮಾತಾಡಲಾರೆ
ಅದೇಕ ಅಂತ ನಾ ಹೇಳಲಾರೆ
ನೀ ಯಾರೆ ಆಗಿರು ನೀ ಎಲ್ಲೆ ಅವಿತಿರು
ನೀನಿಲ್ಲದೇನೆ ನಾ ಬಾಳಲಾರೆ

ಯಾರೊ ಕಣ್ಣಲ್ಲಿ ಕಣ್ಣನಿಟ್ಟು
ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೊರ್ ಯಾರೊ

ಯಾರೊ ಗಾಳಿಲಿ ಮುತ್ತನಿಟ್ಟು
ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದಂಗಿದ್ದು ಎದ್ದು ಹೋದೊರ್ ಯಾರೊ
ಹೋದೊರ್ ಯಾರೊ! ಹೋದೊರ್ ಯಾರೊ

ಅವಳ್ಯಾರೊ ಹುಡುಗಿ ನನ್ನನ್ನೆ ಹುಡುಕಿ
ಪ್ರೀತಿಸುತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೆ ದೂರಾನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ

Read rest of entry