Saturday, February 14, 2009

ವಂಶಿ (2008) ಭುವನಂ ಗಗನಂ bhuvanam gaganam kannada song lyrics from vamshi

ವಂಶಿ (2008) ಭುವನಂ ಗಗನಂ bhuvanam gaganam kannada song lyrics from vamshi

ಸಾಹಿತ್ಯ:ವಿ.ನಾಗೇಂದ್ರಪ್ರಸಾದ್; ಸಂಗೀತ:ಆರ್.ಪಿ.ಪಟ್ನಾಯಕ್; ಗಾಯಕರು:ಸೋಹಂ ಚಕ್ರವರ್ತಿ

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು ಹಸಿರನು ನೀಡಿದ
ಇರುಳನು ನೀಗಲು ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದಿರು ನಿಲಲು ಇವನು ಮುನಿದೇ ಬಿಡುವ

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ

ತಾಯಿಗೆ ಮಗನೇ ಜೀವ
ಆ ಮಗನಿಗೆ ತಾಯೆ ದೈವ
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡ
ಜಗದ ಬಾರಿ ಸಾಗರವ ಜಿಗಿದು ಈಜಿ ಮೀರಿಸುವ
ಪ್ರಬಲ ಧೈರ್ಯ ನೀಡಿರುವ ಶಿವನೇ

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ

ಕಾಲ ಓಡುತಿದೆ ಬೇಗ ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ ಜನರು ಮಾಡೊ ಕಾಯಕವ
ನಿಜದ ಅಂಕೆ ನೀಡಿರುವ ತಿಳಿಯೋ ಶಿವನೇ

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು ಹಸಿರನು ನೀಡಿದ
ಇರುಳನು ನೀಗಲು ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದಿರು ನಿಲಲು ಇವನು ಮುನಿದೇ ಬಿಡುವ

0 comments:

Post a Comment