ನಾನೊಂದು ತೀರ ಅರುಣ ರಾಗ naanondu tira song lyrics from aruna raaga
ಚಿತ್ರ: ಅರುಣ ರಾಗ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ.ರಂಗರಾವ್
ಗಾಯನ : ಕೆ.ಜೆ.ಜೇಸುದಾಸ್ ಮತ್ತು ಕೆ.ಎಸ್.ಚಿತ್ರಾ
ಕೆ.ಜೆ.ಜೇಸುದಾಸ್ :
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಕೆ.ಎಸ್.ಚಿತ್ರಾ:
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಕೆ.ಜೆ.ಜೇಸುದಾಸ್ :
ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ
ಹೆಣ್ಣು ಸೊಗಸಾಗಿ ಬೆಳೆದು ಗಂಡ ಬಯಸೋದು ಸಹಜ
ಹೀಗೇಕೆ ನಿನಗೆ ಏಕಾಂಗಿ ಬದುಕು
ಹೀಗೇಕೆ ನಿನಗೆ ಏಕಾಂಗಿ ಬದುಕು
ಸಂಗಾತಿ ಇರದೆ ಬಾಳೆಲ್ಲ ಬರಿದು
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಕೆ.ಎಸ್.ಚಿತ್ರಾ:
ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ
ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ
ಚೂರಾದ ಹೃದಯ ಮತ್ತೊಮ್ಮೆ ಮಿಡಿದು
ಜೀವಂತ ಬದುಕೇ ಸಂಬಂಧ ತರದು
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಕೆ.ಜೆ.ಜೇಸುದಾಸ್ :
ನಾನೊಂದು ತೀರ ನೀನೊಂದು ತೀರ
ನಾನೊಂದು ತೀರ ನೀನೊಂದು ತೀರ
ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಕೆ.ಎಸ್.ಚಿತ್ರಾ:
ಹುಂ..ಹುಂ....ಹುಂ....
ಕೆ.ಜೆ.ಜೇಸುದಾಸ್ :
ಹುಂ..ಹುಂ....ಹುಂ....
Subscribe to:
Post Comments (Atom)
0 comments:
Post a Comment