ನೀ ಬರೆದ ಒಲವಿನ ಓಲೆ ಅರುಣರಾಗ ni bareda olavina ole song lyrics from arunaraaga
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ.ರಂಗರಾವ್
ಗಾಯನ: ಎಸ್.ಜಾನಕಿ
ನೀ ಬರೆದ ಒಲವಿನ ಓಲೆ
ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಳೆ
ತೂಗಿದೆ ಪ್ರೇಮದ ಉಯ್ಯಾಲೆ
ಮ್ ಮ್ ಮ್ ಮ್ ಮ್ ಮ್ ಮ್ ಮ್
ಮ್ ಮ್ ಮ್ ಮ್ ಮ್ ಮ್ ಮ್ ಮ್
ನೀ ಬರೆದ ಒಲವಿನ ಓಲೆ
ಗಮಪ ಗಮಪ ಗಮಪ ಗಮಪ ಮಗಸನಿಸ
ಅರುಣ ಕಿರಣ ಹೊಳೆವ ಹಾಗೆ ನಿನ್ನ ಮುಖದ ಹೂ ನಗೆ
ಚೈತ್ರ ಋತುವು ಬರುವ ಹಾಗೆ ಹರುಷ ತಂದೆ ಬಾಳಿಗೆ
ಸ್ವಾತಿ ಮುತ್ತಿನ ಹಾಗೆ ಪ್ರೀತಿ ಚಂದಾಗಿ
ರೂಪು ಕಣ್ಮನ ಸೆಳೆದು ಆಸೆ ರಂಗಾಗಿ
ರಾಗ ತಾನ ಕೂಡೊ ಹಾಗೆ ನಾನು ನಿನ್ನ ಕೂಡಿದೆ
ನೀ ಬರೆದ ಒಲವಿನ ಓಲೆ
ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಳೆ
ತೂಗಿದೆ ಪ್ರೇಮದ ಉಯ್ಯಾಲೆ
ಲಲಲ ಲಲಲ ಲಲಲಾ
ಲಲಲ ಲಲಲ ಆಆಆಆಅ
ಇಳೆಗೆ ಮಳೆಯು ಬಂದ ಹಾಗೆ ನೀನು ಬಂದೆ ಬದುಕಿಗೆ
ಧರೆಗೆ ಸ್ವರ್ಗ ಇಳಿದ ಹಾಗೆ ನಲ್ಮೆ ಕಂಡೆ ಒಮ್ಮೆಗೆ
ಸ್ನೇಹ ಸಂಪದ ಬೆಸೆದು ಬಂಧ ಒಂದಾಗಿ
ಮೋಹ ದಾಹ ಮರೆತು ಪ್ರೇಮ ನಂಟಾಗಿ
ಹಾಲು ಜೇನು ಸೇರೊ ಹಾಗೆ ನಾನು ನಿನ್ನ ಸೇರಿದೆ
ನೀ ಬರೆದ ಒಲವಿನ ಓಲೆ
ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಳೆ
ತೂಗಿದೆ ಪ್ರೇಮದ ಉಯ್ಯಾಲೆ
Thursday, January 1, 2009
Subscribe to:
Post Comments (Atom)
0 comments:
Post a Comment