Thursday, January 1, 2009

ಪಟ ಪಟ ಗಾಳಿ ಪಟ ಆಪ್ತಮಿತ್ರ pata pata gaalipata kannada song lyrics from Aapthamithra

ಪಟ ಪಟ ಗಾಳಿ ಪಟ ಆಪ್ತಮಿತ್ರ pata pata gaalipata kannada song lyrics from Aapthamithra
ಹಾಡಿದವರು : ಉದಿತ್ ನಾರಾಯಣ್, ಚಿತ್ರಾ
ಸಾಹಿತ್ಯ : ವಿ.ನಾಗೇಂದ್ರಪ್ರಸಾದ್
ಸಂಗೀತ : ಗುರು ಕಿರಣ್

ಹೆಣ್ಣು : ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

ಸಂಗಡಿಗರು : ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಗಂಡು : ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಬಾಲ ಇದ್ರೂನು ಕೋತಿ ಅಲ್ಲಾ

ಸಂಗಡಿಗರು : ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಹೆಣ್ಣು : ಮತ್ತೆ ಆಷಾಡ ಮೂಡುತಿದೆ ಗಾಳೀನು ಬೀಸುತಿದೆ ಆಹಾ...

ಗಂಡು : ಪಟ ಭೂಮಿನಾ ದಾಟುತಿದೆ ದಾರಾ ನುಡೀಲೈತೆ ಆಹಾ...

ಹೆಣ್ಣು : ಮಾಂಜಾ ಹಾಕೋಣ ಬಾ ಹೋ ಮಜ ಮಾಡೋಣ ಬಾ
ಬಣ್ಣ ಹಚ್ಚೋಣ ಬಾ ಬಾನ ಮುಚ್ಚೋಣ ಬಾ
ಪಟ ಪ್ರಗತಿಯಾ ಸಂಕೇತವೋ

ಸಂಗಡಿಗರು : ಪಟಾ ಪಟಾ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಗಂಡು : ಇದು ಹಕ್ಕಿ ಅಲ್ಲ ಆದ್ರೆ ಹಾರ್ತೈತಲ್ಲ
ಹೆಣ್ಣು : ಇದು ಗೂಳಿ ಅಲ್ಲ ಆದ್ರೆ ಕೊಂಬೈತಲ್ಲ
ಗಂಡು : ಬಾಲ ಇದ್ರೂನು ಕೋತಿ ಅಲ್ಲಾ

ಸಂಗಡಿಗರು : ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಗಂಡು : ಪಟ ಮೇಲೇರಿ ಬೀಗುವುದು..
ಒಮ್ಮೊಮ್ಮೆ ಬಾಗುವುದು ಕೇಳು

ಹೆಣ್ಣು : ಹೀಗೆ ಆಗಾಗ ಏರುವುದು ಆಗಾಗ ಇಳಿಯುವುದೆ ಬಾಳು

ಗಂಡು : ಎಷ್ಟೇ ಮೇಲ್‍ಹೋದರೂ ಚಿಕ್ಕೋನಾಗೇ ಇರು
ಅನ್ನೋ ನೀತಿ ಪಾಠನ್ ಪಟ ಹೇಳ್ತು ಗುರು
ಇದ ಮರೆತೋರು ಗೋತಾ ಆದ್ರು

ಸಂಗಡಿಗರು : ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

ಹೆಣ್ಣು : ಇದು ಹಕ್ಕಿ ಅಲ್ಲ
ಗಂಡು : ಆದ್ರೆ ಹಾರ್ತೈತಲ್ಲ
ಹೆಣ್ಣು : ಇದು ಗೂಳಿ ಅಲ್ಲ
ಗಂಡು : ಆದ್ರೆ ಕೊಂಬೈತಲ್ಲ
ಹೆಣ್ಣು : ಬಾಲ ಇದ್ರೂನು ನೀನಲ್ಲ
ಗಂಡು : ಏನ್ ಏನ್ ಏನ್..

ಸಂಗಡಿಗರು : ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ
ಪಟ ಪಟ ಹಾರೋ ಗಾಳಿ ಪಟ
ಪಟ ಪಟ ಓಡೋ ಧೂಳಿ ಪಟ

2 comments:

Unknown on May 16, 2020 at 12:30 AM said...

Nothing is visible

Pata Pata Haro Galipata lyrics on September 8, 2022 at 2:11 AM said...

nice song

Post a Comment