Thursday, January 1, 2009

ಕಾಲವನ್ನು ತಡೆಯೋರು ಯಾರೂ ಇಲ್ಲ ಆಪ್ತಮಿತ್ರ kaalavannu tadeyoru yaaru illa kannada song lyrics from Aapthamithra

ಕಾಲವನ್ನು ತಡೆಯೋರು ಯಾರೂ ಇಲ್ಲ ಆಪ್ತಮಿತ್ರ kaalavannu tadeyoru yaaru illa kannada song lyrics from Aapthamithra

ಹಾಡಿದವರು : ಗುರುಕಿರಣ್, ಹರಿಹರನ್
ಸಾಹಿತ್ಯ : ಚಿ| ಉದಯ ಶಂಕರ್
ಸಂಗೀತ: ಗುರುಕಿರಣ್

ಇಬ್ಬರೂ : ಹೇಹೇ ಹಾಹಾ ಲಾಲಾ ಲಾಲಲ

ಹರಿಹರನ್ : ಕಾಲವನ್ನು ತಡೆಯೋರು ಯಾರೂ ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನನ್ನಿಂದ ನಿನ್ನಾ ನಿನ್ನಿಂದ ನನ್ನ ದೂರ ಮಾಡಲು ಎಂದೂ ಆಗಲ್ಲಾ

ಗುರುಕಿರಣ್ : ಕಾಲವನ್ನು ತಡೆಯೋರು ಯಾರೂ ಇಲ್ಲ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ನನ್ನಿಂದ ನಿನ್ನಾ ನಿನ್ನಿಂದ ನನ್ನ ದೂರ ಮಾಡಲು ಎಂದೂ ಆಗಲ್ಲಾ

ಹರಿಹರನ್ : ಊರೊಂದು ಏತಕೆ ಬೇಕು ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೆ ನಮಗಿಲ್ಲಿ ಯಾರ ಹಂಗಿದೆ ಬಾಳೆಲ್ಲ ಆನಂದ ಒಂದೇ

ಹರಿಹರನ್ : ನಾ ಹೃದಯ ಕದಿಯುವ ಕಳ್ಳ

ಗುರುಕಿರಣ್ : ಅನ್ಯಾಯ ಒದೆಯುವ ಕುಳ್ಳ

ಇಬ್ಬರೂ : ಜೊತೆಯಾಗಿ ನಾವು ಬಂದರೆ
ಒಂದಾಗಿ ನಾವು ನಿಂತರೆ ಎದುರಲ್ಲಿ ನಿಲ್ಲೋರು ಯಾರು

ಹರಿಹರನ್ : ಕಾಲವನ್ನು ತಡೆಯೋರು ಯಾರು ಇಲ್ಲ
ಗುರುಕಿರಣ್ : ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ
ಹರಿಹರನ್ : ನನ್ನಿಂದ ನಿನ್ನಾ ನಿನ್ನಿಂದ ನನ್ನ ದೂರ ಮಾಡಲು ಎಂದೂ ಆಗಲ್ಲಾ

ಗುರುಕಿರಣ್ : ಏನೊಂದು ಕೇಳದು ನಮಗೆ ಬೇರೇನು ಬೇಡವು ನಮಗೆ
ಈ ಸ್ನೇಹ ನಮಗೆ ದೇವರು ಇನ್ನಾರು ನಮಗೆ ಕಾಣರು
ನಮಗಿನ್ನು ಸರಿಸಾಟಿ ಯಾರು

ಹರಿಹರನ್ : ಎಂದೆಂದೂ ಮುಗಿಯದೇ ಇರಲಿ ಈ ಪಯಣ ಸಾಗುತಲಿರಲಿ
ನಗುನಗುತ ಹೀಗೆ ಬಾಳುವ ಒಂದಾಗಿ ಮುಂದೆ ಹೋಗುವ
ಹಾಯಾಗಿ ಜೊತೆಯಾಗಿ ನಾವು

ಗುರುಕಿರಣ್ : ಕಾಲವನ್ನು ತಡೆಯೋರು
ಹರಿಹರನ್ : ಯಾರು ಇಲ್ಲ
ಗುರುಕಿರಣ್ : ಗಾಳಿಯನ್ನು ಹಿಡಿಯೋರು
ಹರಿಹರನ್ : ಎಲ್ಲೂ ಇಲ್ಲ
ಇಬ್ಬರೂ : ನನ್ನಿಂದ ನಿನ್ನಾ ನಿನ್ನಿಂದ ನನ್ನ
ದೂರ ಮಾಡಲು ಎಂದೂ ಆಗೋಲ್ಲಾ..ಆ..ಆ.

0 comments:

Post a Comment