Thursday, January 1, 2009

ಅಂಕು ಡೊಂಕು ಆಪ್ತಮಿತ್ರ anku donku kannada song lyrics from apthamithra

ಅಂಕು ಡೊಂಕು ಆಪ್ತಮಿತ್ರ anku donku kannada song lyrics from apthamithra
ಹಾಡಿದವರು : ಎಸ್.ಪಿ. ಬಿ, ಚಿತ್ರಾ
ಸಾಹಿತ್ಯ : ವಿ. ಮನೋಹರ್
ಸಂಗೀತ : ಗುರುಕಿರಣ್

ಗಂಡು : ಓssss ಆsss ಆಹಾ...

ಹೆಣ್ಣು : ಓssss ಆsss ಆಹಾ...

ಗಂಡು : ಅಂಕು ಡೊಂಕು ದಾರಿ ಬ್ಯಾಡ ಸುಂಕವಿಲ್ಲದೂರೆ ಬ್ಯಾಡ
ಅಂಕೆ ಇಲ್ದ ಶಂಕೆ ಬ್ಯಾಡ ಸಂತೆಯಲ್ಲಿ ಚಿಂತೆ ಬ್ಯಾಡ
ಅಂತೆ ಕಂತೆ ಮಾತೆ ಬ್ಯಾಡ ಕೊಂಕು ಬಿಂಕವೆಲ್ಲ ಬ್ಯಾಡ

ಹೆಣ್ಣು : ದುಃಖಕೆ ಹೇಳು .. ಊಫಿ ಎವ್ರಿ ಡೇ ಬಿ ಹ್ಯಾಪಿ

ಗಂಡು : ದುಃಖಕೆ ಹೇಳು .. ಊಫಿ ಎವ್ರಿ ಡೇ ಬಿ ಹ್ಯಾಪಿ

ಹೆಣ್ಣು : ಅಂಕು ಡೊಂಕು ದಾರಿ ಬ್ಯಾಡ ಸುಂಕವಿಲ್ಲದೂರೆ ಬ್ಯಾಡ
ಅಂಕೆ ಇಲ್ದ ಶಂಕೆ ಬ್ಯಾಡ

ಗಂಡು : ಸಂತೆಯಲ್ಲಿ ಚಿಂತೆ ಬ್ಯಾಡ ಅಂತೆ ಕಂತೆ ಮಾತೆ ಬ್ಯಾಡ
ಕೊಂಕು ಬಿಂಕವೆಲ್ಲ ಬ್ಯಾಡ

ಗಂಡು : ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಬಾಳು ಬಾಳೇ ಅಲ್ಲ ನಾಣ್ಣುಡಿ ಚಂದನ

ಹೆಣ್ಣು : ಬೆಂಕಿಯಲ್ಲಿ ಸರಸ ಬ್ಯಾಡ ಸ್ನೇಹದಲ್ಲಿ ವಿರಸ ಬ್ಯಾಡ ಜಾಣ್ನುಡಿ ಚಂದನ

ಗಂಡು : ಇರುಳು ಕಂಡ ಬಾವಿಗೆ ಹಗಲು ಬೀಳಬಾರದು
ಇರುಳು ಕಂಡ ಬಾವಿಗೆ ಹಗಲು ಬೀಳಬಾರದು ಗಾದೆ ಮಾತೆ ಸೊಗಸು

ಗಂಡು : ಓssss ಆsss ಆಹಾ...

ಹೆಣ್ಣು : ಓssss ಆsss ಆಹಾ...

ಹೆಣ್ಣು : ಅಂಕು ಡೊಂಕು ದಾರಿ ಬ್ಯಾಡ ಸುಂಕವಿಲ್ಲದೂರೆ ಬ್ಯಾಡ
ಅಂಕೆ ಇಲ್ದ ಶಂಕೆ ಬ್ಯಾಡ

ಗಂಡು : ಸಂತೆಯಲ್ಲಿ ಚಿಂತೆ ಬ್ಯಾಡ ಅಂತೆ ಕಂತೆ ಮಾತೆ ಬ್ಯಾಡ
ಕೊಂಕು ಬಿಂಕವೆಲ್ಲ ಬ್ಯಾಡ

ಹೆಣ್ಣು : ದುಃಖಕೆ ಹೇಳು .. ಊಫಿ ಎವ್ರಿ ಡೇ ಬಿ ಹ್ಯಾಪಿ

ಗಂಡು : ದುಃಖಕೆ ಹೇಳು .. ಊಫಿ ಎವ್ರಿ ಡೇ ಬಿ ಹ್ಯಾಪಿ

ಗಂಡು : ನಿಸಸಾಸ ಸಸ ನಿರೆರೆ ರಿರಿ ಸನಿನಿಪ ಪಮಮಪಗ
ಗಮ ದಾ ಧಾ ನಿದ ಪಾಮಗ ಪಾ...

ಹೆಣ್ಣು : ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ ಕೂಸೆ ಗಾದೆಯು ಚಂದನ

ಗಂಡು : ಉಂಡು ಹೋದ ಕೊಂಡು ಹೋದ
ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ

ಹೆಣ್ಣು : ಕಾಗೆಗೇಕೆ ಕಾಡಿಗೆ ಕೂಡಿಗೇಕೆ ಬಾಡಿಗೆ

ಗಂಡು : ಹಾ..ಕಾಗೆಗೇಕೆ ಕಾಡಿಗೆ ಕೂಡಿಗೇಕೆ ಬಾಡಿಗೆ

ಹೆಣ್ಣು : ಗಾದೆ ಮಾತೆ ಸೊಗಸೂ..

ಗಂಡು : ಓssss ಆsss ಆಹಾ...
ಹೆಣ್ಣು : ಓssss ಆsss ಆಹಾ...

ಗಂಡು : ಅಂಕು ಡೊಂಕು ದಾರಿ ಬ್ಯಾಡ ಸುಂಕವಿಲ್ಲದೂರೆ ಬ್ಯಾಡ
ಅಂಕೆ ಇಲ್ದ ಶಂಕೆ ಬ್ಯಾಡ

ಹೆಣ್ಣು : ಸಂತೆಯಲ್ಲಿ ಚಿಂತೆ ಬ್ಯಾಡ ಅಂತೆ ಕಂತೆ ಮಾತೆ ಬ್ಯಾಡ
ಕೊಂಕು ಬಿಂಕವೆಲ್ಲ ಬ್ಯಾಡ

ಇಬ್ಬರೂ : ದುಃಖಕೆ ಹೇಳು .. ಊಫಿ ಎವ್ರಿ ಡೇ ಬಿ ಹ್ಯಾಪಿ
ದುಃಖಕೆ ಹೇಳು .. ಊಫಿ ಎವ್ರಿ ಡೇ ಬಿ ಹ್ಯಾಪಿ

0 comments:

Post a Comment