Thursday, January 1, 2009

ಕಣ ಕಣದೆ ಶಾರದೆ ಆಪ್ತಮಿತ್ರ kana kanade sharade kannada song lyrics from Aapthamithra

ಕಣ ಕಣದೆ ಶಾರದೆ ಆಪ್ತಮಿತ್ರ kana kanade sharade kannada song lyrics from Aapthamithra
ಹಾಡಿದವರು : ಮಧುಬಾಲಕೃಷ್ಣ
ಸಾಹಿತ್ಯ : ಕವಿರಾಜ್
ಸಂಗೀತ : ಗುರು ಕಿರಣ್

ಗಂಡು : ಕಣ ಕಣದೆ ಶಾರದೆ
ಕಲೆತಿಹಳು ಕಾಣದೇ
ವನ ವನದಲ್ಲು ಕುಹು ಕುಹು ಗಾನ
ಝರಿ ಝರಿಯಲ್ಲು ಜುಳು ಜುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು
ಕಣ ಕಣದೆ ಶಾರದೆ
ಕಲೆತಿಹಳು ಕಾಣದೆ

ಗಂಡು : ಜನನಕು ಹಾಡು ಮರಣಕು ಹಾಡು ಯಾರಿ, ಛಲಮಗಳು
ಪ್ರತಿ ಎದೆಯಾಳದೊಳು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ಉಲಿದು ನಲಿದು ಹರಿದು ಬರುವುದು ಶ್ರುತಿ ಲಯವು
ಕಣ ಕಣದೆ ಶಾರದೆ ಕಲೆತಿಹಳು ಕಾಣದೇ

ಗಂಡು : ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ ಸಪ್ತಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗ ಮಪಮಪಗ ನಿಮಪಮ ಸನಿಪನಿ ಗಸನಿಸ
ಆ ಆ ಆ .... ಆ ಆ ಆ......

ಗಂಡು : ಕಣ ಕಣದೆ ಶಾರದೆ ಕಲೆತಿಹಳು ಕಾಣದೇ
ವನ ವನದಲ್ಲು ಕುಹು ಕುಹು ಗಾನ
ಝರಿ ಝರಿಯಲ್ಲು ಜುಳು ಜುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು

ಗಂಡು : ಕಣ ಕಣದೆ ಶಾರದೆ ಕಲೆತಿಹಳು ಕಾಣದೇ


1 comments:

Unknown on November 20, 2019 at 4:18 AM said...

There is no lyrics

Post a Comment