Tuesday, December 30, 2008

ಗೆಳೆಯರೆ ನನ್ನ ಗೆಳತಿಯರೇ ಪ್ರೇಮಲೋಕ geleyare nanna gelatiyare song lyrics from premaloka

ಗೆಳೆಯರೆ ನನ್ನ ಗೆಳತಿಯರೇ ಪ್ರೇಮಲೋಕ geleyare nanna gelatiyare song lyrics from premaloka
ಸಂಗೀತ / ಸಾಹಿತ್ಯ : ಹಂಸಲೇಖ
ಗಾಯಕರು: ಎಸ್.ಪಿ.ಬಿ

ಬನ್ನೀ ನನ್ನ ಗೆಳೆಯರೆ
ಬನ್ನೀ ನನ್ನ ಗೆಳತಿಯರೆ
ಗೆಳೆಯರೆ.. ನನ್ನ ಗೆಳತಿಯರೆ (೨)
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ.. ಹೊಗೋಣ ಕಾಲೇಜಿಗೆ.. ಥ್ಯಾಂಕ್ಸ್ ಹೇಳಿ ವಯಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೇ (೨)

ಭಯವಿಲ್ಲದಂತ ವಯ್ಸಿದು, ಬಯಾಲಜಿ ಬರೆಯಬಹುದು
ಕೆಮ್ಮು ಬಾರದಂತ ವಯ್ಸಿದು, ಕೆಮಿಸ್ಟ್ರಿ ಕಲಿಯಬಹುದು
ಮೀಸೆ ಚಿಗುರುವಂತ ವಯ್ಸಿದು, ಹಿಸ್ಟರಿ ಓದಬಹುದು
ಪ್ರೇಮ ಚಿಮ್ಮುವಂತ ವಯ್ಸಿದು, ಕಾಮರ್ಸ್ ಕೇಳಬಹುದು
ಬನ್ನಿ ಗೆಳತಿಯರೇ.. ಡ್ರಿಲ್ಲಿಂಗ್ ಮಾಡಬಹುದು
ಬನ್ನಿ ಸ್ನೇಹಿತರೇ.. ಥ್ರಿಲ್ಲಿಂಗ್ ನೋಡಬಹುದು
ನಾನು ನೀನು ಎಂಬುದಿಲ್ಲ
ಗಂಡು ಗಿಂಡು ಭೇದವಿಲ್ಲ..
ಚಿಂತೆಗಿಲ್ಲಿ ಜಾಗವಿಲ್ಲ
ಜಾಲಿ ಮಾಡಿ ಬನ್ನಿ ಎಲ್ಲ
ವಯಸು ಕಳೆದು ಹೋದ ಮೇಲೆ ದೊರಕದು
ಕೈಲಿ ಇರುವ ಪ್ರೇಮಲೋಕ ನಮ್ಮದು..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!

ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಾಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೆ (೨) (ರೆ ರೆ ರೆ ರೆ ರೆ ರೆ ರೆ ರೆ)

ಕ್ಲಾಸ್‍ರೂಮಿನಲ್ಲಿ ಇದ್ದರೆ, ಕಾಮೆಂಟ್ರಿ ಕೇಳಬಹುದು
ಕ್ಲೋಕ್‍ರೂಮಿನಲ್ಲಿ ಇದ್ದರೆ, ಟೈಮ್ ಪಾಸ್ ಮಾಡಬಹುದು
ಲೈಬ್ರರಿಗೆಂದು ಹೋದರೆ, ಲವ್ ಸೀನ್ ನೋಡಬಹುದು
ಲ್ಯಾಬೋರೇಟರಿಗೆ ಹೋದರೆ, ಡಿಂಗ್-ಡಾಂಗ್ ನೋಡಬಹುದು
ಬನ್ನಿ ಗೆಳತಿಯರೇ ಡಿಸ್ಕೊ ಕುಣಿಯಬಹುದು
ಬನ್ನಿ ಸ್ನೇಹಿತರೆ.. ಜಾಲಿ ಮಾಡಬಹುದು
ಸೂರ್ಯ ಚಂದ್ರ ಜೇಬಿನಲ್ಲೆ, ತಾರೆ ಚುಕ್ಕಿ ಮುಷ್ಟಿಯಲ್ಲೆ
ಎಂಟು ದಿಕ್ಕು ನಮ್ಮ ಕೈಲಿ, ರಾಜರಂತೆ ನಾವು ಇಲ್ಲಿ
ಋತುಗಳೆಲ್ಲ ನಮ್ಮ ದಾರಿ ಕಾದಿದೆ
ವರುಷ ಪೂರ್ತಿ ಹರುಷ ನಮ್ಮದಾಗಿದೆ..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!

ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೆ
ಗೆಳೆಯರೆ ನನ್ನ ಗೆಳತಿಯರೆ (೨)
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೇ
ಗೆಳೆಯರೆ ನನ್ನ ಗೆಳತಿಯರೇ (೨)

0 comments:

Post a Comment