Tuesday, December 30, 2008

ಬೀಸದಿರು ತಂಗಾಳಿ ಅನುರಾಗ ಅರಳಿತು bisadiru tangaali song lyrics from anuraaga aralitu

ಬೀಸದಿರು ತಂಗಾಳಿ ಅನುರಾಗ ಅರಳಿತು bisadiru tangaali song lyrics from anuraaga aralitu

ಚಿತ್ರ: ಅನುರಾಗ ಅರಳಿತು (1988)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ವಾಣಿ ಜಯರಾಂ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು

ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು

ಹೂವಂಥ ಈ ಮೆತ್ತೆ ಇಂದು
ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ
ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿಂದು ಸಾಕು ಸಾಕೆಂದು
ನಾನಿನ್ದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ
(ಉಶ್..)
ಚಳಿ ತುಂಬುತಲಿ ಈ ರಾತ್ರಿಯಲಿ
ಸಂಗಾತಿ ಎಲ್ಲೆಂದು ಕೇಳುತ್ತ ಕಾಡುತ್ತಾ

ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು

0 comments:

Post a Comment