Tuesday, December 30, 2008

ನನಗು ನಿನಗು ಕಣ್ಣಲ್ಲೆ ಪರಿಚಯ ಅರಮನೆ nanagu ninagu kannalle parichaya song lyrics from aramane

ನನಗು ನಿನಗು ಕಣ್ಣಲ್ಲೆ ಪರಿಚಯ ಅರಮನೆ nanagu ninagu kannalle parichaya song lyrics from aramane

ಸಾಹಿತ್ಯ: ಜಯಂತ್ ಕಾಯ್ಕಿಣಿ - ಸಂಗೀತ: ಗುರುಕಿರಣ್ ; ಹಾಡಿದವರು: ಕುನಾಲ್ ಗಾಂಜವಾಲ

ನನಗು ನಿನಗು ಕಣ್ಣಲ್ಲೆ ಪರಿಚಯ,
ಸನಿಹ ಸುಳಿವ ಮನದಾಸೆ ಅತಿಶಯ,
ಏನೋ ಆಗಿದೆ ನನಗಂತು ಸಂಶಯ ||(೨ ಸಲ)||

ನಲುಮೆ ಸ್ನೇಹದ ನವಿರಾದ ಗ್ರಂಥವೆ,
ಪುಟವ ತೆರೆಯುವ ಹಿತವಾದ ಗಂಧವೆ,
ಮೊದಲ ನುಡಿಯಲಿ ನಾನೀಗ ತನ್ಮಯ
ಇನ್ನು ಕತೆಯಲಿ ನೀ ನನ್ನ ಕರೆವೆಯಾ.....||

ನನಗು ನಿನಗು ಕಣ್ಣಲ್ಲೆ ಪರಿಚಯ,
ಸನಿಹ ಸುಳಿವ ಮನದಾಸೆ ಅತಿಶಯ,

ಮೊದಲ ಸ್ಪರ್ಶಕೆ ಇನ್ನೇಲ್ಲಿ ಹೊಲಿಕೆ
ಮೃದುಲ ಭಾವದಿ ನನ್ನೊಂದು ಕೋರಿಕೆ
ಎಲ್ಲ ತಿಳಿದರು ಯಾಕಿನ್ನು ಅಭಿನಯ
ವಿರಹ ಬಂದಿದೆ ಒಲವಿನ್ನು ನಿಶ್ಚಯ||

ನನಗು ನಿನಗು ಕಣ್ಣಲ್ಲೆ ಪರಿಚಯ,
ಸನಿಹ ಸುಳಿವ ಮನದಾಸೆ ಅತಿಶಯ,
ಏನೋ ಆಗಿದೆ ನನಗಂತು ಸಂಶಯ

0 comments:

Post a Comment