Tuesday, December 30, 2008

ಆಕಾರದಲ್ಲಿ ಗುಲಾಬಿ ರಂಗಿದೆ ಅಂಜದ ಗಂಡು aakaradalli gulabi rangide song lyrics from anjada gandu

ಆಕಾರದಲ್ಲಿ ಗುಲಾಬಿ ರಂಗಿದೆ ಅಂಜದ ಗಂಡು aakaradalli gulabi rangide song lyrics from anjada gandu

ಸಾಹಿತ್ಯ: ವಿ. ಮನೋಹರ್
ಸಂಗೀತ: ಹಂಸಲೇಖ
ಗಾಯನ: ಲತಾ ಹಂಸಲೇಖ

ಆಹ್... ಆಹ್... ಆಹ್... ಹೆ...ಎ..

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ

ಬೆಂಗಳೂರಲಿ ಯಾರನ್ನೆ ಕೇಳಲಿ
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ಆಹ್...ಆಹ್...ಆಹ್...

ಲ ಲ ಲಾ ಲ ಲ ಲಾ ಓ ಓ ಓ
ಲ ಲ ಲಾ ಲ ಲ ಲಾ ಲಲಲಾ ಲ ಲ ಲ

ಯಾವ ಹುತ್ತದಲ್ಲಿ ಯಾವ ಹಾವಿದೆ
ಯಾರ ಚಿತ್ತದಲ್ಲಿ ಸುಡುವ ಕಾವಿದೆ

ನಿನ್ನ ನೊಟ ಬಾಣದಷ್ಟು ಜೋರಿದೆ
ಕಣ್ಣ ಪಾಪೆಯಲ್ಲಿ ತಿನ್ನೊ ಹಾಗಿದೆ
ಇಂಗು ತಿಂದ ಮಂಗನಂತೆ ನೋಡಬೇಡವೊ
ಇದೇನು ದೊಂಬರಾಟವೊ

ಅಂಗ ಅಂಗ ನುಂಗುವಂತ ಸರ್ಪ ಸಂಗವೊ
ಇದೇನು ಪುಂಗಿಯಾಟವೊ

ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ

ಬೆಂಗಳೂರಲಿ ಯಾರನ್ನೆ ಕೆಳಲಿ
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ಆಹ್...ಆಹ್...

ಮನಸ್ಸಿನಲ್ಲಿ ತಿನ್ನಲೇಕೆ ಮಂಡಿಗೆ
ಭಯವೆ ಇಲ್ಲ ಮುಂದೆ ನುಗ್ಗೊ ಮಂದಿಗೆ

ಪ್ರೀತಿ ಮಾಡೊ ಶೂರನಂತ ಗಂಡಿಗೆ
ಕಾಯುತಿಹುವುದು ನೋಡು ನನ್ನ ಗುಂಡಿಗೆ

ಹೆಂಡದಂತ ಹೆಣ್ಣು ಕೊಂಡು ಮತ್ತು ಏರಿತು
ಇದಾರ ಹೊತ್ತು ಮೀರಿತೋ
ಪುಂಡರನ್ನ ಕಂಡು ಮನಸು ಬುದ್ದಿ ಹೇಳಿತು
ಹುಷಾರು ಎಂದು ಕೂಗಿತೋ

ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನೆ ಕೆಳಲಿ
ನಾನು ಅಲ್ಲಿಗೆ ಗುಲೇಬುಕಾವಲಿ
ಸುತ್ತಾ ಮುತ್ತಾ ಗೊತ್ತ ನಿನ್ನ ಊರು ತಂಗಳೂರು

ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ

ಆಹ್..ಆಹ್...ಆಹ್...

0 comments:

Post a Comment