Tuesday, December 30, 2008

ಮುಸ್ಸಂಜೆ ರಂಗಲ್ಲಿ ನಿನ್ನ ಸೈಕೊ mussanje rangali song lyrics from psycho

ಮುಸ್ಸಂಜೆ ರಂಗಲ್ಲಿ ನಿನ್ನ ಸೈಕೊ mussanje rangali song lyrics from psycho

ಸಾಹಿತ್ಯ: ಆರ್.ಎನ್.ಜಯಗೋಪಾಲ್ ; ಸಂಗೀತ: ರಘು ದೀಕ್ಷಿತ್ ; ಹಾಡಿರುವವರು: ಸೈಂಧವಿ

ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ ರಂಗಲ್ಲಿ ತೇಲಿ ಹೋದೆ
ನೀ ಯಾರೊ ಯಾವೂರೊ ಕಾಣೆ ಹೇಗೊ ನನ್ನಲ್ಲಿ ಸೇರಿ ಹೋದೆ
ಹೃದಯವೇ ನೀ ಬಾ ಬೇಗ, ನಮದಾಗಲಿ ಪ್ರೇಮ ಸಂಯೋಗ

ಬಾನಲ್ಲಿ ಸಂತೋಷದಿ ಹಾರಿದ್ದ ಬೆಳ್ಳಕ್ಕಿ ನಾ
ಇರಲಿಲ್ಲ ನನಗ್ಯಾವ ಬೇಲಿ
ನೀ ಪ್ರೀತಿ ಮಾತಾಡುತ ಬಲೆ ಬೀಸಿ ನಾ ಸಿಕ್ಕಿದೆ
ಹೊಸ ಪ್ರೇಮ ಸವಿ ಜಾಲದಲ್ಲಿ
ರವಿ ನಿಂತು ಮುಗಿಲ ಮರೆಯಲ್ಲಿ ನಗುವಂತೆ ನೋಡಿ ಧರೆಯನ್ನು
ನಿನ್ನಾಟ ಆತಂಕ ತಾಪ ನನ್ನ ಮನಸಾ ತಾಕದೇನು
ಬರಿ ಕಣ್ಣು ಕಾಣದ ತಂಗಾಳಿ ತಂದಂತೆ ??ಬ್ಬಿ ನಾ ರಂಗೋಲಿ
ನೀ ನಿಂತೆಯೋ ಈ ಹೆಣ್ಣಲ್ಲಿ ನಿಜ ಬಂಧಿನೋ ನೀನು ನನ್ನಲ್ಲಿ

ನರನಾಡಿಯ ವೀಣೆಯೋ ಮಿಡಿದಂತ ಸ್ವರ ಹೇಳಿದೆ
ಇವನೇನೆ ಆ ನನ್ನ ಪ್ರೇಮಿ
ಆ ಪ್ರೀತಿ ಮಳೆ ಬೀಳಲು ನೂರಾಸೆ ಹೂವಾಗಿದೆ
ನವ ಚೈತ್ರ ಕಂಡಂಥ ಭೂಮಿ
ಅಲೆ ನೂರು ಆಸಿ ಕಡಲಲ್ಲಿ ಹುಚ್ಚೆದ್ದು ಕುಣಿಯುತಿದೆ ಇಲ್ಲಿ
ಇದ ತಂದ ಚಂದ್ರ ಎಲ್ಲಿ ಹೋದೆ ಯಾವ ದಿಕ್ಕಿನಲ್ಲಿ
ಸಾಕಿನ್ನು ಮಾತಿನ ಸಂದೇಶ ಎದುರಲ್ಲೆ ಓ ಪ್ರಿಯ ಸಂತೋಷ
ನೀ ನಾಯಕ ಈ ಕಾವ್ಯಕ್ಕೆ ಆ ಬ್ರಹ್ಮನು ತಂದ ಬಂಧಕ್ಕೆ

0 comments:

Post a Comment