Sunday, December 7, 2008

Arasu Eko Eno Nannalli song lyrics

Arasu Eko Eno Nannalli song lyrics

ಸಂಗೀತ : ಜೋಶ್ವ ಶ್ರೀಧರ್
ಸಾಹಿತ್ಯ : ರಾಮ್ ನಾರಾಯಣ್
ಗಾಯನ : ಮಹಾಲಕ್ಷ್ಮಿ ಐಯ್ಯರ್

ಹೆಣ್ಣು : ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ
ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
ನನ ಈ ಜೀವನ ಹಸಿರಾಯಿತು ಇಂದೆ ಇಂದೆ
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ
ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ

ಹಾ..ಅ.ಅ..ಆ.ಅ.ಅ.
ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
ಮನ ತಂಪಾಗಲು ತಂಗಾಳಿಯ ತಂದ ತಂದ
ಅಪರೂಪದ ಅನುರಾಗದ ಆನಂದವು ನೀನಾದೆ
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ
ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ
ನಿನಗಿಂದು ನಾ ಸೋತು ಹೋದೆ
ಈ ಸ್ನೇಹ ಎಲ್ಲಾಯ್ತೊ ಈ ಪ್ರೀತಿ ಹೇಗಾಯ್ತೊ
ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ

ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ
ಹಾ..ಹಾ.ಅ.ಅ.ಆ.ಅ.ಅ


0 comments:

Post a Comment