Thursday, December 4, 2008

Lyrics Of Paris Pranaya

Lyrics Of Paris Pranayaಕೃಷ್ಣ ನೀ ಬೇಗನೆ ಬಾರೋ ಶ್ರೀಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ವಾಸುದೇವ ವೇಣುಗೋಪ ಬಾ.. ಕೃಷ್ಣ ಬಾ.. ನೀ ಬೇಗ ಬಾ

ಆತ್ಮವು ನೀನೆ ಜೀವವು ನೀನೆ
ನನ್ನೆದೆ ಹಾಡೆ ನೀನೆ ಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆ ಪ್ರತಿಕ್ಷಣ ಕಾದೆ
ಏನನು ಮಾಡಲಿ ನಾನು ಯಾರಿಗೆ ಹೇಳಲಿ ಏನು
ಗೋಪಾಲ ಗೋಪಿ ಕೃಷ್ಣ ಮಾಯಾವಿ ಮಾಯಾ ಕೃಷ್ಣ
ನೀನಿರದೆ ನಾನಿಲ್ಲ ನೀ ಬರದೆ ಬಾಳಿಲ್ಲ
ಮಾಧವ ಮುಕು೦ದನೆ ಬಾ.. ಬೇಗ ಬಾ.. ನೀ ಬೇಗ ಬಾ

ಕೃಷ್ಣ ನೀ ಬೇಗನೆ ಬಾರೋ ಶ್ರೀಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ವಾಸುದೇವ ವೇಣುಗೋಪ ಬಾ.. ಕೃಷ್ಣ ಬಾ.. ನೀ ಬೇಗ ಬಾ

ಜನನವು ನೀನೆ ಮರಣವು ನೀನೆ
ನನ್ನೆದೆ ಧ್ಯಾನವು ನೀನೆ ಧ್ಯಾನದ ಪ್ರಣತಿಯು ನಾನೆ
ಬೆಳಗುವೆ ದೀಪ ತೋರಿಸೊ ರೂಪ ಎ೦ದಿಗೆ ಬರುವೆಯೊ ನೀನು
ಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣ ಮಾಯಾವಿ ಮಾಯಾ ಕೃಷ್ಣ
ನೀನಿರದೆ ನಾನಿಲ್ಲ ನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ.. ಬೇಗ ಬಾ.. ನೀ ಬೇಗ ಬಾ 

ಕೃಷ್ಣ ನೀ ಬೇಗನೆ ಬಾರೋ ಶ್ರೀಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ಈ ರಾಧೆಯ ಕೂಗು ನೀ ಕೇಳಲಿಲ್ಲವೇನೋ
ವಾಸುದೇವ ವೇಣುಗೋಪ ಬಾ.. ಕೃಷ್ಣ ಬಾ.. ನೀ ಬೇಗ ಬಾ

0 comments:

Post a Comment