Lyrics of SONE SONE PREETHIYA SONE
ಏನಿದು ಮಾಯೆ.. ಏನಿದು ಮಾಯೆ
ಮನಸಿನ ಮುಗಿಲಲಿ ಮಾತಿನ ಮಳೆಯು ತುಂಬಿದೆ
ಹೊರಗೆ ಬಾರದೆ ನಿಂತಿದೆ
ಮಿಂಚಿದೆ ಗುಡುಗಿದೆ
ಸೋನೆ ಮಳೆಯಾಗಿ ಆದರೂ
ಮೆಲ್ಲ ಮೆಲ್ಲ ಬರಬಾರದೇ?
ಓ ..... ಸೋನೆ ....
ಸೋನೆ ಸೋನೆ ಪ್ರೀತಿಯ ಸೋನೆ
ಈ ಮಳೆ ಹೂಮಳೆ ಪ್ರೀತಿಯ ವರಗಳೆ
ಅಂದದ .... ಧರಣಿಯ
ತನುವಿನ ಪಥದಲಿ
ಪ್ರೀತಿಯ ಅಕ್ಷರ ಇಂದು ವೃಂದ ತಾವಾಗಿದೆ
ನಳಿನ ನರ್ತನ ಮಾಡಿದೆ
ಈ ಬ್ರಹ್ಮಾಂಡವೇ ನಾನು
ನನಗೆ ಸಂಗಾತಿ ನೀನು
ನಿನ್ನ ಪ್ರೀತಿ ತೋಳಲ್ಲಿ ನಾನು
ಕುಂತರೂ ನಿಂತರೂ
ನಿನ್ನದೇ ತುಂತುರು
ನೆನೆದಿದೆ ನನ್ನೆದೆ
ಸೋನೆ ಸೋನೆ ಪ್ರೀತಿಯ ಸೋನೆ
ಸೋನೆ ಸೋನೆ ಪ್ರೀತಿಯ ಸೋನೆ
ನಿರ್ಮಲ ಕೋಮಲ ಶೀತಲ ಶಾಂತಲ
ಕಾವ್ಯದಾ .......
ಕಾವ್ಯದ ಕುಸುರಿಯೇ
ಕವನದ ಲಹರಿಯೇ
ಅಂದದ ಪ್ರತಿಮೆಯೇ
ನಿನ್ನ ಅಂದ ಛಂದೋಮಯ
ನಿನ್ನ ಭಾವ ವ್ಯಾಕರಣಮಯ
ಸೋನೆ ಸೋನೆ ಸೋನೆ ಸೋನೆ
ಏನಿದು ಮಾಯೆ
ಏನಿದು ಮಾಯೆ
ಮನಸಿನ ಭೂಮಿಲಿ ಋತುವು ಬದಲಾದ ಹಾಗಿದೆ
ಆಸೆ ಮಲೆನಾಡು ಚಿಗುರಿದೆ
ಓ .... ಕನಸೇ
ಓ .... ನನಸೇ
0 comments:
Post a Comment