male nintu hoda mele ಮಿಲನ (2007) - ಮಳೆ ನಿಂತು ಹೋದ ಮೇಲೆ
ಸಂಗೀತ: ಮನೋ ಮೂರ್ತಿ
ಗಾಯನ: ಶ್ರೇಯ ಗೋಶಲ್, ಸೋನು ನಿಗಮ್
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನು ಉಳಿದುಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ
ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೆ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೆ ಸಾರಿ ನೀ ಕೇಳೆಯ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ
ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೇ ಏತಕೀ ಕಂಪನ
ಹೃದಯವು ಕಳೆದುಹೋಗಿದೆ
ಹುಡುಕಲೇಬೇಕೆ ತಿಳಿಯದಾಗಿದೆ
0 comments:
Post a Comment